
ಮಾನವ ಹಕ್ಕುಗಳು: ದುಷ್ಟರ ಗೆಲುವಿಗೆ ಸಜ್ಜನರ ಮೌನವೇ ಕಾರಣ: ನ್ಯಾ. ನಾಗಮೋಹನ್ ದಾಸ್
ವಿಶ್ವದಲ್ಲಿ ಅನೇಕ ಯುದ್ಧಗಳು ನಡೆದಿವೆ. ಈ ‘ಯುದ್ಧಗಳಲ್ಲಿ ಮಿಲಿಯಾಂತರ ಜನರು ಸತ್ತಿದ್ದಾರೆ. ನಿಖರವಾಗಿ ಎಷ್ಟು ಜನ ಸತ್ತರೆಂದು ಹೇಳಲು ಸಾಧ್ಯವಿಲ್ಲ. 20ನೇ ಶತಮಾನದಲ್ಲಿ ಮೊದಲನೆಯ ಮಹಾಯುದ್ಧವು 1914 ರಿಂದ 1918 ರವರೆಗೆ ನಡೆಯಿತು. ಈ ಯುದ್ಧದಲ್ಲಿ ಅಪಾರವಾದ ಪ್ರಾಣಹಾನಿ ಮತ್ತು ಆಸ್ತಿ