
ಕುಲದ ಪ್ರಶ್ನೆ ಮತ್ತು ಕನಕನ ಕಿಂಡಿಯೆಂಬ ಅವೈದಿಕ ರೂಪಕ
ಮುಖ್ಯವಾಗಿ ಕನಕರನ್ನು ದಾಸಸಾಹಿತ್ಯದಿಂದ ಪ್ರತ್ಯೇಕಿಸಲು ಇರುವ ಎರಡು ಪ್ರಧಾನ ಸಂಗತಿಗಳಲ್ಲಿ ಕೆಳಜಾತಿಗೆ ಸೇರಿದವರು ಎನ್ನುವುದು ಒಂದಾದರೆ, ಎರಡನೆಯದು ಕನಕರು ಕೇವಲ ದಾಸರಾಗದೆ, ಕೀರ್ತನಕಾರರಾಗದೆ ಬಹಳ ಮುಖ್ಯವಾಗಿ ಕವಿಯಾಗಿರುವುದು. ಕನಕ ಕವಿಯಾದ ಕಾರಣ ದಾಸತ್ವವನ್ನೂ, ಕೀರ್ತನಾಕಾರತ್ವವನ್ನೂ ಮೀರಲು ಸಾಧ್ಯವಾಗಿದೆ. ಕವಿಯಾಗಿ ರೂಪುಗೊಂಡ ಕಾರಣವೆ






