
ವಿಚಾರ ಸಾಹಿತ್ಯ
ಕೋಮುವಾದದ ಮೂಲ ಬೇರುಗಳು
ಕೋಮು ಮಾನಸಿಕತೆ ಮತ್ತು ಕೋಮು ಹಿಂಸೆ ಇವೆರಡೂ ಭಿನ್ನ ಭಿನ್ನವಾದ ಅಂಶಗಳು. ಕೋಮು ಮಾನಸಿಕತೆಗೆ ಬಹಳ ದೊಡ್ಡ ಇತಿಹಾಸ ಇದೆ. 1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ನಂತರದ ಕಾಲಘಟ್ಟದಲ್ಲಿ ಬ್ರಿಟಿಷ್ ಒಡೆದಾಳುವ ನೀತಿಯಿಂದ ಕೋಮು ಮಾನಸಿಕತೆ ಮೊಳಕೆಗೊಂಡು ನಂತರ ಬೆಳೆಯುತ್ತಲೇ ಹೋಯಿತು.