October 1, 2023 8:35 am

ಅಭಿವೃದ್ಧಿ ಮತ್ತು ರಾಜಕೀಯ – 2

  • ಪ್ರೊ. ಎಂ.ಚಂದ್ರಪೂಜಾರಿ, ಪ್ರಸಿದ್ಧ ಸಂಶೋಧಕರು ಮತ್ತು ವಿದ್ವಾಂಸರು

ಕರ್ನಾಟಕದ ಪ್ರಮುಖ ರಾಜಕೀಯ ಹಾಗೂ ಅಭಿವೃದ್ಧಿ ಚಿಂತಕರಾಗಿ ಪ್ರೊ. ಎಂ.ಚಂದ್ರಪೂಜಾರಿ ಹೆಸರಾಗಿದ್ದಾರೆ. ಅವರು ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

ಅಭಿವೃದ್ಧಿ ಮತ್ತು ರಾಜಕೀಯ – 2

1.      ನಮ್ಮಲ್ಲಿರುವ ಪ್ರಜಾಪ್ರಭುತ್ವ ಮತ್ತು ಅಸಮಾನತೆ, ಬಡನತಗಳ ನಡುವಿನ ಸಂಬಂಧವನ್ನು ಮೊದಲು ನಾವು ವಿವರಿಸಿಕೊಳ್ಳಬೇಕಿದೆ. ಪ್ರಜಾಪ್ರಭುತ್ವ ಪ್ರಕ್ರಿಯೆಯ ಮೂಲಕ ನಾವು ನಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತೇವೆ. ಇವರು ನಮ್ಮ ಶಿಕ್ಷಣ, ಆರೋಗ್ಯ, ಕಾರ್ಮಿಕ, ಹಣಕಾಸು ಮತ್ತು ಇತರ  ನೀತಿಗಳನ್ನು ಮಾಡುತ್ತಾರೆ.

2.      ಶಿಕ್ಷಣ ನೀತಿ – ಶಿಕ್ಷಣ ಖಾಸಗಿ ಒಡೆತನದಲ್ಲಿರಬೇಕೇ ಅಥವಾ ಸಾರ್ವಜನಿಕ ಒಡೆತನದಲ್ಲಿರಬೇಕೇ? ಸರಕಾರ ಶಿಕ್ಷಣದ ಮೇಲೆ ಎಷ್ಟು ವಿನಿಯೋಗಿಸಬೇಕು? ಬಡವರಿಗೊಂದು ಶಿಕ್ಷಣ ಅನುಕೂಲಸ್ಥರಿಗೊಂದು ಶಿಕ್ಷಣ ಇರಬೇಕೇ? ಗ್ರಾಮೀಣ ಪ್ರದೇಶದಲ್ಲಿರುವವರಿಗೊಂದು ಶಿಕ್ಷಣ ನಗರ ಪ್ರದೇಶದಲ್ಲಿರುವವರಿಗೆ ಇನ್ನೊಂದು ಶಿಕ್ಷಣ ಇರಬೇಕೇ ಎನ್ನುವುದನ್ನು ಶಿಕ್ಷಣ ನೀತಿ ನಿರ್ಧರಿಸುತ್ತದೆ. ಈ ನೀತಿಯನ್ನು ನಾವು ಆಯ್ಕೆ ಮಾಡಿದ ಎಂಎಲ್‍ಎ, ಎಂಪಿಗಳು ನಿರ್ಧರಿಸುತ್ತಾರೆ.

3.      ಆರೋಗ್ಯ ನೀತಿ – ಸರಕಾರವೇ ಎಲ್ಲರಿಗೂ ಆರೋಗ್ಯ ವ್ಯವಸ್ಥೆ ಮಾಡಬೇಕೇ? ಅಥವಾ ಖಾಸಗಿಯವರು ಕೂಡ ಕೈಜೋಡಿಸಬೇಕೇ? ಸರಕಾರ ಆರೋಗ್ಯ ವ್ಯವಸ್ಥೆ ಮೇಲೆ ಎಷ್ಟು ವಿನಿಯೋಗಿಸಬೇಕು? ಇತ್ಯಾದಿ ತೀರ್ಮಾನಗಳನ್ನು ಪಾಲಿಸಿ ಮಾಡುತ್ತದೆ.

4.      ಕಾರ್ಮಿಕ ನೀತಿ – ಕಾರ್ಮಿಕ ನೀತಿ ದುಡಿಯುವ ವರ್ಗಕ್ಕೆ ಪರ ಇರಬೇಕೆ? ಉದ್ಯಮಿಗಳ ಪರ ಇರಬೇಕೇ? ಕಾರ್ಮಿಕರಿಗೆ ಉದ್ಯೋಗ ಭದ್ರತೆ ಇರಬೇಕೇ? ಸಂಬಳದ ಭದ್ರತೆ ಇರಬೇಕೆ? ಸಾಮಾಜಿಕ ಭದ್ರತೆ ಇರಬೇಕೆ? ಎನ್ನುವುದನ್ನು ಕಾರ್ಮಿಕ ನೀತಿ ನಿರ್ಧರಿಸುತ್ತದೆ.

5.      ಕೃಷಿ ನೀತಿ – ಕೃಷಿ ನೀತಿ ಕೃಷಿಕರ ಪರಬೇಕೇ? ಅಥವಾ ಉದ್ದಿಮೆಗಳ ಪರ ಇರಬೇಕೇ? ಕೃಷಿಕರಿಗೆ ನೀರಾವರಿ ವ್ಯವಸ್ಥೆ ಮಾಡಬೇಕೇ? ಹಣಕಾಸು ಪೂರೈಕೆ ಮಾಡಬೇಕೇ? ಮೂಲಸೌಕರ್ಯ ವ್ಯವಸ್ಥೆ ಮಾಡಬೇಕೇ? ಕೃಷಿ ಮಾರುಕಟ್ಟೆ ಹೇಗಿರಬೇಕು? ಇತ್ಯಾದಿಗಳನ್ನು ಕೃಷಿ ನೀತಿ ನಿರ್ಧರಿಸುತ್ತದೆ.

6.      ನಮ್ಮ ರಾಜಕೀಯ ನೀತಿ – ಯಾರು ಚುನಾವಣೆಗೆ ಸ್ಪರ್ಧಿಸಬಹುದು? ಚುನಾವಣೆಯಲ್ಲಿ ಎಷ್ಟು ಕರ್ಚು ಮಾಡಬಹುದು? ಎಷ್ಟು ಸ್ತರದ ಸರಕಾರಗಳು ಬೇಕು? ಪಕ್ಷಗಳು ಹೇಗೆ ಹಣ ಸಂಗ್ರಹಿಸಬಹುದು? ಇತ್ಯಾದಿಗಳನ್ನು ರಾಜಕೀಯ ನೀತಿ ನಿರ್ಧರಿಸುತ್ತದೆ.

7.      ನಮ್ಮ ಸಾಮಾಜಿಕ/ಸಾಂಸ್ಕೃತಿಕ ನೀತಿಗಳು – ಮ್ಯಾರೇಜ್ ಆಕ್ಟ್, ವರದಕ್ಷಿಣೆ ನಿಷೇಧ ಕಾಯಿದೆ, ಕೌಟುಂಬಿಕ ದೌರ್ಜನ್ಯ ತಡೆ ಕಾಯಿದೆ, ಲೈಂಗಿಕ ದೌರ್ಜನ್ಯ ತಡೆ ಕಾಯಿದೆ ಇತ್ಯಾದಿಗಳನ್ನು ರೂಪಿಸುವವರು ನಮ್ಮ ಪ್ರತಿನಿಧಿಗಳು.

ಜನಪ್ರತಿನಿಧಿಗಳು ರೂಪಿಸಿ ಜಾರಿಗೆ ತರುವ ಕಾಯಿದೆಗಳು ನಮ್ಮ ಆರ್ಥಿಕ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಬದುಕನ್ನು ರೂಪಿಸುತ್ತವೆ. ತಳಸ್ತರದ ಜನರಿಗೆ ನೆಮ್ಮದಿಯ ಬದುಕು ಬೇಕಾದರೆ ಅವರ ಕಷ್ಟಸುಖಗಳನ್ನು ಅರ್ಥಮಾಡಿಕೊಳ್ಳುವವರು ಮತ್ತು ಅವರ ಸಮಸ್ಯೆಗಳನ್ನು ಪರಿಹರಿಸುವಂತಹ ನೀತಿಗಳನ್ನು ರೂಪಿಸಿ ಜಾರಿಗೆ ತರುವವರನ್ನು ಪ್ರತಿನಿಧಿಗಳನ್ನಾಗಿ ಚುನಾಯಿಸಬೇಕು.

ತಳಸ್ತರದ ಜನರ ಕಷ್ಟ ಸುಖಗಳನ್ನು ಯಾರು ಅರ್ಥ ಮಾಡಿಕೊಳ್ಳಬಹುದು? ಮಹಿಳೆಯರ ಸಮಸ್ಯೆಯನ್ನು ಮಹಿಳೆ ಅರ್ಥ ಮಾಡಿಕೊಂಡಷ್ಟು ಪುರುಷರು ಅರ್ಥಮಾಡಿಕೊಳ್ಳಬಹುದೇ? ಅಲ್ಪಸಂಖ್ಯಾತರ ಕಷ್ಟಸುಖಗಳನ್ನು ಅಲ್ಪಸಂಖ್ಯಾತರು ಅರ್ಥಮಾಡಿಕೊಂಡಷ್ಟು ಬಹುಸಂಖ್ಯಾತರು ಅರ್ಥ ಮಾಡಿಕೊಳ್ಳಬಹುದೇ? ಕೂಲಿ ಕಾರ್ಮಿಕರ ಕಷ್ಟಗಳನ್ನು ಉದ್ದಿಮೆ ಮಾಲೀಕರು ಅರ್ಥಮಾಡಿಕೊಳ್ಳಬಹುದೇ? ಭೂರಹಿತರ ಸಮಸ್ಯೆಯನ್ನು ಭೂಮಾಲೀಕರು  ಅರ್ಥಮಾಡಿಕೊಳ್ಳಲು ಸಾಧ್ಯವೇ?

ಅಂದರೆ ಮಹಿಳೆಯರಿಗೆ ಅನುಕೂಲವಾಗುವ ಅಭಿವೃದ್ಧಿ ನೀತಿಗಳು ರೂಪುಗೊಂಡು ಜಾರಿಗೆ ಬರಬೇಕಾದರೆ ಮಹಿಳಾ ಪ್ರತಿನಿಧಿಗಳಿರಬೇಕು. ದುಡಿಯುವ ವರ್ಗದವರಿಗೆ ಅನುಕೂಲವಾಗುವ ನೀತಿಗಳು ಜಾರಿಗೆ ಬರಬೇಕಾದರೆ ದುಡಿಯುವ ವರ್ಗದ ಪ್ರತಿನಿಧಿಗಳಿರಬೇಕು. ಭೂರಹಿತರಿಗೆ ಅನುಕೂಲವಾಗುವ ನೀತಿಗಳು ಜಾರಿಗೆ ಬರಬೇಕಾದರೆ ಭೂರಹಿತ ಪ್ರತಿನಿಧಿಗಳು ಬೇಕು.

ಯಾರು ಪ್ರತಿನಿಧಿಗಳು?

ಇಂದು ನಮ್ಮ ರಾಜ್ಯದ ಅಸೆಂಬ್ಲಿಯಲ್ಲಿ ಕೇಂದ್ರ ಸರಕಾರ ನಡೆಸುವ ಪಾರ್ಲಿಮೆಂಟ್‍ಲ್ಲಿ ಯಾರು ಪ್ರತಿನಿಧಿಗಳಾಗುತ್ತಿದ್ದಾರೆ?

ಮಹಿಳೆಯರು – ನಮ್ಮಲ್ಲಿ  ಶೇ.49ರಷ್ಟು ಮಹಿಳೆಯರಿದ್ದಾರೆ. ಆದರೆ ಅಸೆಂಬ್ಲಿ ಮತ್ತು ಪಾರ್ಲಿಮೆಂಟ್‍ಲ್ಲಿ ಅವರ ಪ್ರತಿನಿಧಿತ್ವ ತುಂಬಾ ಕಡಿಮೆ ಇದೆ.

Total Assembly Seats – 224              Total   Parliament Seats – 543

Year  No       %                               Year  No        %

2008  03      1.33                               2009  59      10.86

2013  06      2.67                               2014  62      11.23

2018  07      3.12                               2019  78      14.58

ಅಲ್ಪಸಂಖ್ಯಾತರು- ನಮ್ಮಲ್ಲಿ ಹೆಚ್ಚು ಕಡಿಮೆ ಶೇ.16ರಷ್ಟು ಅಲ್ಪಸಂಖ್ಯಾತರಿದ್ದಾರೆ. ಅವರಲ್ಲಿ ಶೇ.13ರಷ್ಟು ಮುಸ್ಲಿಮರು. ಅವರ ಪ್ರತಿನಿಧಿತ್ವ ಈ ಕೆಳಗಿನಂತಿದೆ –

Total Assembly Seats – 224              Total   Parliament Seats – 543

Year  No       %                               Year  No        %

2013  11      4.91                                2014  22      4.05

2018  07      3.12                                2019  27      4.97

ದಲಿತ ಬುಡಕಟ್ಟುಗಳು – ಶೇ.25ರಷ್ಟು ದಲಿತ ಬುಡಕಟ್ಟುಗಳಿದ್ದಾರೆ. ಅವರ ಪ್ರತಿನಿಧಿತ್ವ ಅವರ ಸಂಖ್ಯೆಗೆ ಅನುಗುಣವಾಗಿದೆ.

Total Assembly Seats – 224              Total   Parliament Seats – 543

Year  No       %                                Year  No        %

2013  55      24.55                              2014  131    24.12

2018  55      24.55                              2019  131    24.12

ಆದರೆ ಇವರನ್ನು ದಲಿತ ಬುಡಕಟ್ಟುಗಳ ಪ್ರತಿನಿಧಿಗಳೆನ್ನಲು ಸಾಧ್ಯವಿಲ್ಲ. ಏಕೆಂದರೆ ಇವರನ್ನು ದಲಿತ ಬುಡಕಟ್ಟುಗಳು ಮಾತ್ರ ಚುನಾಯಿಸುವುದಲ್ಲ. ದಲಿತಬುಡಕಟ್ಟೇತರರು ಕೂಡ ಇವರ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಎರಡನೆಯದಾಗಿ ಎಲ್ಲ ಪಕ್ಷಗಳು ಮೀಸಲು ಕ್ಷೇತ್ರದಲ್ಲಿ ದಲಿತ ಬುಡಕಟ್ಟುಗಳನ್ನು ನಿಲ್ಲಿಸುವುದರಿಂದ ದಲಿತ ಬುಡಕಟ್ಟುಗಳ ಮತ ಹಂಚಿ ಹೋಗುತ್ತವೆ. ದಲಿತ ಬುಡಕಟ್ಟೇತರರ ಮತ ನಿರ್ಣಾಯಕ ಆಗುತ್ತದೆ.

ವರ್ಗದ ದೃಷ್ಟಿಯಿಂದ ಪ್ರತಿನಿಧಿತ್ವ – ಕರ್ನಾಟಕ ಮತ್ತು ದೇಶದ ಮತ ಹಾಕುವ ಜನರ ತಲಾ ಆದಾಯ ಇಂತಿದೆ –

       Year           Karnataka                             India

          2013-14      126976                                    80388

          2018-19      178121                                    126406

ಚುನಾವಣೆ ಸ್ಪರ್ಧಿಸುವ ಅಭ್ಯರ್ಥಿಗಳ ಆಸ್ತಿಪಾಸ್ತಿ ಈ ಕೆಳಗಿನಂತಿದೆ (Karnataka & National Election Watch and ADR Report)

          2008  10.05                                                 2009           5.50

          2013  23.54                                                 2014           14.70

          2018  34.59                                                 2019           20.93

ಅಂದರೆ ಮೂರು ಹೊತ್ತಿನ ಊಟಕ್ಕೆ ಪರದಾಡುವ ಮತದಾರರಿಗೆ ಕೋಟ್ಯಧಿಪತಿ ಅಭ್ಯರ್ಥಿಗಳು. ಇದನ್ನು ಜನರಿಂದ ಜನರಿಗಾಗಿ ಜನರೇ ನಡೆಸುವ ಸರಕಾರ ಎನ್ನಲು ಸಾಧ್ಯವಿಲ್ಲ. ಅದರ ಬದಲು ಇವುಗಳನ್ನು ಬಲಾಢ್ಯರಿಂದ ಬಲಾಢ್ಯರಿಗಾಗಿ ಬಲಾಢ್ಯರೇ ನಡೆಸುವ ಸರಕಾರಗಳು ಎನ್ನಬಹುದು.

ಪ್ರಜಾಪ್ರಭುತ್ವ ಎಂದರೆ ಕೇವಲ ಶಾಸಕಾಂಗ ಅಥವಾ ಪ್ರತಿನಿಧಿಗಳು ಮಾತ್ರ ಅಲ್ಲ, ನ್ಯಾಯಾಂಗ, ಮಾಧ್ಯಮಗಳು ಇವೆ. ಇವುಗಳು ಕೂಡ ಶಾಸಕಾಂಗದ ರೂಪದಲ್ಲಿ ನಮ್ಮ ಸಮಾಜದ ಕೆಲವರಿಗೆ ಸೀಮಿತವಾಗಿದೆ.

Judiciary –caste

Period          Total Judges  Brahmins       Other upper castes

1950 -70          14                     11 (78%)                     02 (11%)

1971-89           17                    09 (52%)                     nk

2004-14           52                    16 (31%)                     10 (19%)        

2014-20           35                    09 (26%)                     10 (28%)

Source – Namit Saxena, Disproportionate Representation at the Supreme court – a perspective based on caste and religion, the Wire, 2021.              

Upto 1980 there were no judges from SC, OBCs and STs

First SC judge appointed Varadarajan in 1980. Balakrishnan appointed in 2010. Gavai appointed last 2019.

First OBC judge appointed was SR Pandian in 1980

Judiciary – Gender

  1. Of the 246 supreme court judges 8 were women. Only 3% women judges.  Of them 5 were appointed in the last decade.
  2. There are total 1113 judges of High courts and Supreme courts. Of them 80 are women  or only 7% women judges. 

Media

Media              (%)                  English TV      Hindi TV         Eng. NP          Hindi NP

Leadership Positions               89                    100                  92                    87

Anchors/writers                       75                    80                    60                    58

Panelists                                  70                    72                    na                    na

Source – Oxfam India, Representation of Marginalized Caste Groups in Newsroom, New Delhi, 2019

ಸಮಾರೋಪ

1.      ಪ್ರಜಾಪ್ರಭುತ್ವದ ಎಲ್ಲ ಸ್ತಂಭಗಳಲ್ಲೂ ತಳಸ್ತರದ ಜನರ ಪ್ರತಿನಿಧಿತ್ವ ಇಲ್ಲ.

2.      ಶೇ.40ರಷ್ಟು ಮಹಿಳೆಯರು, ಶೇ.10ರಷ್ಟು ಅಲ್ಪಸಂಖ್ಯಾತರು ಮತ್ತು ಶೇ.25ರಷ್ಟು ದಲಿತ ಬುಡಕಟ್ಟುಗಳಿಗೆ ಟೆಕ್ನಿಕಲ್ ಪ್ರಾತಿನಿಧಿತ್ವ ಇಲ್ಲ. ಇನ್ನು ವರ್ಗದ ದೃಷ್ಟಿಯಿಂದ ನೋಡಿದರೆ ಶೇ.99 ಜನರನ್ನ ಪ್ರತಿನಿಧಿಸುವ ಪ್ರತಿನಿಧಿಗಳು ಇಲ್ಲ.

3.      ಪ್ರತಿನಿಧಿತ್ವ ಇಲ್ಲದಿರುವಾಗ ಅವರ ಆಸಕ್ತಿಗಳನ್ನು ಪ್ರತಿನಿಧಿಸುವ ಪಾಲಿಸಿಗಳು ಬರಲು ಸಾಧ್ಯವಿಲ್ಲ.

4.      ಪಾಲಿಸಿಗಳು ಜನಪರ ಇಲ್ಲದಿರುವ ಕಾರಣ ಸಂಪನ್ಮೂಲ ಮೇಲಿನಿಂದ ಕೆಳಗೆ ಹರಿಯುವ ಬದಲು ಕೆಳಗಿನಿಂದ ಮೇಲೆ ಹರಿಯುತ್ತಿವೆ.

5.      ಸಂಪನ್ಮೂಲದ ಮರುಹಂಚಿಕೆ ಇಲ್ಲದಿರುವ ಕಾರಣ ಬಡತನ ಮತ್ತು ಅಸಮಾನತೆ ಹೆಚ್ಚುತಲೇ ಇದೆ.

6.      ಬಡತನ, ಅಸಮಾನತೆಗಳು ನಿವಾರಣೆ ಆಗಬೇಕಾದರೆ ನಮ್ಮ ಪ್ರಜಾಪ್ರಭುತ್ವ ಸಾಕಷ್ಟು ಸುಧಾರಣೆಗೊಳ್ಳಬೇಕಾಗಿದೆ.

Share:

Leave a Reply

Your email address will not be published. Required fields are marked *

More Posts

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ

On Key

Related Posts

ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ,ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ

ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ. ಅಂದರೆ ಪೌಷ್ಟಿಕ ಆಹಾರ ಮಣ್ಣುಪಾಲಾಗುತ್ತದೆ. ಅದೇ ಹಾಲನ್ನು ಅವಶ್ಯಕತೆ ಇರುವವರಿಗೆ ಆಹಾರವಾಗಿ ನೀಡಬಹುದಲ್ಲವೇ? ದೈವ ಭಕ್ತಿಗೂ, ಧರ್ಮ ಭಕ್ತಿಗೂ, ಪರಿಸರ

ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

ಇಂದು ಆಗಸ್ಟ್ 20. ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಮಾತುಕತೆ…….. ವಿಜ್ಞಾನ ಮತ್ತು ಧರ್ಮ ಒಂದಕ್ಕೊಂದು ಪೂರಕವೇ ಅಥವಾ ವಿರುದ್ದವೇ ಅಥವಾ ಪರ್ಯಾಯವೇ ಅಥವಾ ಸಮಾನಾಂತರವೇ ಅಥವಾ ಪ್ರತಿಸ್ಪರ್ಧಿಗಳೇ ಅಥವಾ ಸಂಬಂಧವಿಲ್ಲವೇ….. ಧರ್ಮ ( ಮತ ) ಎಂಬುದು

ಬಸವ ಪಂಚಮಿ: ಒಂದು ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ

ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಆದರೆ ಸಾಂಪ್ರದಾಯವಾದಿಗಳು ಆ ಆಚರಣೆಗಳನ್ನು ತಿರುಚಿ ಅವುಗಳಿಗೆ ಧಾರ್ಮಿಕ ಮೌಢ್ಯದ ಹಿನ್ನೆಲೆಯನ್ನು ಹೆಣೆದಿದ್ದಾರೆ. ಕೇವಲ ಧಾರ್ಮಿಕ ಹಿನ್ನೆಲೆಯಷ್ಟೆಯಲ್ಲದೆ ಅನೇಕ ಬಗೆಯ ಮೌಢ್ಯಗಳನ್ನು ಜನಮನದಲ್ಲಿ ಬಿತ್ತಿದ್ದಾರೆ.

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದಿದ್ದಾರೆ. ಎಲ್ಲಾ ರೀತಿಯ ಅಸಮಾನತೆಯನ್ನು ಕೊನೆಗಾಣಿಸಿ ಸಮಾನತೆಯನ್ನು ತರುವುದು ನಮ್ಮ ಸಂವಿಧಾನದ

ಮೀಸಲಾತಿ ನೀತಿಯನ್ನು ಪುನರ್ ರಚಿಸಬೇಕಾದ ಅಗತ್ಯತೆ

ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಮೀಸಲಾತಿ ನೀತಿಯ ಅನುಷ್ಠಾನದಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಆದರೂ ಇಂದು ಹಲವು ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗಿವೆ. ಒಳಮೀಸಲಾತಿ, ಕೆನೆಪದರ ಬಡ್ತಿಯಲ್ಲಿ ಮೀಸಲಾತಿ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಎಂಬ ಪ್ರಶ್ನೆಗಳು ಕಾಡುತ್ತಿವೆ. ಮೀಸಲಾತಿ ಎಂದರೇನು