ಅಭಿವೃದ್ಧಿ ಮತ್ತು ರಾಜಕಾರಣ-3

  • ಪ್ರೊ. ಎಂ.ಚಂದ್ರಪೂಜಾರಿ, ಪ್ರಸಿದ್ಧ ಸಂಶೋಧಕರು ಮತ್ತು ವಿದ್ವಾಂಸರು

ಕರ್ನಾಟಕದ ಪ್ರಮುಖ ರಾಜಕೀಯ ಹಾಗೂ ಅಭಿವೃದ್ಧಿ ಚಿಂತಕರಾಗಿ ಪ್ರೊ. ಎಂ.ಚಂದ್ರಪೂಜಾರಿ ಹೆಸರಾಗಿದ್ದಾರೆ. ಅವರು ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

ಬಡತನ ಮತ್ತು ಅಸಮಾನತೆಗಳು ದೇವರ ಸೃಷ್ಟಿಯಲ್ಲ ನಾವೇ ಸೃಷ್ಟಿಸುವಂತದ್ದು. ನಾವು ಆರಿಸಿ ಕಳಿಸುವ ಜನಪ್ರತಿನಿಧಿಗಳ ಪಾತ್ರವೂ ಬಹುಮುಖ್ಯವಾಗುತ್ತದೆ. 70-75 ವರ್ಷದಲ್ಲಿ ಇಷ್ಟೊಂದು ಅಸಮಾನತೆ ಇರುವಾಗ ಅದರ ಹಿಂದೆ ರಾಜಕಾರಣ ಇದ್ದೇ ಇದೆ. ಜನರ ಮತ್ತು ಪ್ರತಿನಿದಿಗಳ ಆದ್ಯತೆ ಬೇರೆ ಬೇರೆಯಾಗಿರುತ್ತದೆ ಎಂದರು.

ಮಾನವ ಬಂಧುತ್ವ ವೇದಿಕೆ ವತಿಯಿಂದ ಆಗಸ್ಟ್ 16, 2021ರಂದು ಆಯೋಜಿಸಲಾಗಿದ್ದ ಬಂಧುತ್ವ ಬೆಳಕು ಉಪನ್ಯಾಸ ಮಾಲಿಕೆಯ ವೆಬಿನಾರ್ ಸರಣಿಯಲ್ಲಿ “ಅಭಿವೃದ್ಧಿ ಮತ್ತು ರಾಜಕಾರಣ ಭಾಗ 3” ವಿಷಯದ ಕುರಿತು  ಮಾತಾಡಿದ ಅವರು, ನೀತಿಗಳು ಸಂಪನ್ಮೂಲಗಳನ್ನು ಮೇಲಿನಿಂದ ಕೆಳಗೆ ಹರಿಸದೇ ತದ್ವಿರುದ್ಧವಾಗಿವೆ. ಕಾರಣ ದುಡ್ಡು, ಜಾತಿ, ಧರ್ಮದ ಆಧಾರದಲ್ಲಿ ರಾಜಕಾರಣ ಮಾಡುತ್ತಾರೆ ಎಂದರು.

ಎಮ್ ಎಲ್ ಎ, ಎಂ ಪಿ ಚುನಾವಣೆಗೆ ಕನಿಷ್ಠ 5-10 ಕೋಟಿ ಖರ್ಚು ಮಾಡುತ್ತಿದ್ದಾರೆ. ಪ್ರಚಾರಕ್ಕಾಗಿ ಸಾಕಷ್ಟು ವ್ಯಯಿಸಬೇಕು. ಕಾರ್ಯಕರ್ತರ ನೇಮಕ, ಪತ್ರಿಕೆ, ಟಿವಿಗಳಲ್ಲಿ ಪ್ರಚಾರ ಬೇಕು. ಸಮಾವೇಶ ಮಾಡಿಸಬೇಕು. ನಾಯಕರನ್ನು ಕರೆಯಿಸಬೇಕು. ಹೀಗಾಗಿ ಹೆಚ್ಚು ಖರ್ಚು ಮಾಡಿಸಿದವರು ಹೆಚ್ಚು ಜನರಿಗೆ ಪರಿಚಯವಾಗುವಲ್ಲಿ ಯಶಸ್ವಿಯಾಗುತ್ತಾರೆ. ದುಡ್ಡಿನ ಜೊತೆಗೆ ಜಾತಿಯ ಪ್ರಾಮುಖ್ಯತೆಯೂ ಟಿಕೇಟಿನ ವಿಷಯದಲ್ಲಿ ಕೆಲಸ ಮಾಡುತ್ತದೆ. ಬಲಾಢ್ಯ ಜಾತಿ, ಧರ್ಮ, ಗೆಲ್ಲುವ ಸಾಧ್ಯತೆಗಳನ್ನು ನೋಡಿ ಟಿಕೇಟು ಕೊಡುತ್ತಾರೆ. ಜನರು ತಮ್ಮ ಆಸಕ್ತಿಗೆ ವಿರುದ್ಧವಾಗಿ ಈ ಕಾರಣಕ್ಕಾಗಿ ಜನಪ್ರತಿನಿಧಿಗಳನ್ನು ಆರಿಸುತ್ತಾರೆ ಎಂದರು.

ಸಾಂಸ್ಕೃತಿಕ ರಾಜಕಾರಣ, ಮಾಧ್ಯಮ, ಶಿಕ್ಷಣ, ಆಧುನಿಕ ಸಂಸ್ಥೆಗಳು ಕೆಲಸ ಮಾಡುವ ವಿಧಾನ, ಮಠ ಮಾನ್ಯಗಳು ಇವುಗಳೆಲ್ಲ ಶ್ರೇಣಿಕೃತ ವ್ಯವಸ್ಥೆಯನ್ನು ಮುಂದುವರೆಸುತ್ತವೆ ಎಂದರು.

ಸಾಂಸ್ಕೃತಿಕ ರಾಜಕಾರಣ ಎಂದರೆ ಜನರು ಏನು ಓದಬೇಕು, ನೋಡಬೇಕು, ಕೇಳಬೇಕು ಎಂದೆಲ್ಲ ತೀರ್ಮಾನಿಸುವುದೇ ಆಗಿದೆ. ಈ ಪ್ರಕ್ರಿಯೆಗಳನ್ನು ಯಾಕೆ ಬಲಾಢ್ಯರು ತೀರ್ಮಾನಿಸುತ್ತಾರೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಹೊಸ ವಿಚಾರಗಳನ್ನು ಜನರ ಪ್ರಜ್ಞೆಗೆ ಬರದಂತೆ ನಿಯಂತ್ರಿಸುತ್ತಾರೆ.  ಜನರ ಆಹಾರ ಪದ್ಧತಿಯನ್ನು ನಿಯಂತ್ರಿಸುತ್ತಾರೆ. ಸಸ್ಯಾಹಾರ ಸೇವನೆ ಮಾಡುವವರಿಗೆ ಸಾತ್ವಿಕ ಗುಣ, ಮಾಂಸಾಹಾರದಿಂದ ತಾಮಸ ಗುಣ ಬರುತ್ತದೆ ಎಂದು ವರ್ಗೀಕರಿಸುತ್ತಾರೆ. ಪ್ರೀತಿಯ ವಿಷಯದಲ್ಲಿಯೂ ಅಷ್ಟೇ. ಪ್ರೀತಿಯೂ ರಾಜಕಾರಣಕ್ಕೆ ಸಿಲುಕಿ ಲವ್ ಜಿಹಾದ್, ಮರ್ಯಾದಾ ಹತ್ಯೆಗಳಿಗೆ ಕಾರಣಗಳಾಗಿವೆ. ಕೆಳಸ್ಥರದ ಜನರ ಮನಸ್ಸಿನ ಮೇಲೆ ಹಿಡಿತ ಸಾಧಿಸುತ್ತಾರೆ ಎಂದರು.

ಮಾಧ್ಯಮ

ಪ್ರಜಾಪ್ರಭುತ್ವದಲ್ಲಿ ಮಾಧ್ಯಮದ ಪಾತ್ರ ಬಹುಮುಖ್ಯ. ಆದರೆ ಪ್ರಾರಂಭಿಸಲು ಸಾಕಷ್ಟು ಹಣದ ಅವಶ್ಯಕತೆ ಇದೆ. ಬಲಾಢ್ಯರ ಕೈಯಲ್ಲಿ ಇವತ್ತಿನ ಟಿವಿ, ಪತ್ರಿಕೆಗಳಿವೆ. ಜಾಹೀರಾತಿನ ಮೇಲೆ ಇವೆಲ್ಲ ನಡೆಯುತ್ತವೆ. ಸರಕಾರ ಮತ್ತು ಉದ್ಯಮಗಳು ಜಾಹೀರಾತುಗಳನ್ನು ನೀಡುತ್ತವೆ. ಬಡವರಿಗೆ ಸಂಬಂಧಿಸಿದ ಯಾವುದೇ ಜಾಹೀರಾತುಗಳು ಇರುವುದಿಲ್ಲ ಎಂದರು.

ಶಿಕ್ಷಣ

ಲಿಂಗ ಅಸಮಾನತೆ, ಜಾತಿ ಅಸಮಾನತೆಗಳನ್ನು ನೋಡಿದಾಗ ಶಿಕ್ಷಣ ನಮ್ಮ ಮೇಲೆ ಅಷ್ಟೇನೂ ಪರಿಣಾಮ ಬೀರಿಲ್ಲ ಎನ್ನಬಹುದು. ಬಲಾಢ್ಯರೇ ಶಿಕ್ಷಣವನ್ನು ನಿಯಂತ್ರಿಸುವುದರಿಂದ ನಾವು ಏನು ಓದಬೇಕು, ಏನು ತಿಳಿಯಬೇಕು ಎಂಬುದೆಲ್ಲ ಅವರೇ ನಿರ್ಧರಿಸುತ್ತಾರೆ. ಹುಡುಗ ಮತ್ತು ಹುಡುಗಿಯರ ನಡುವೆ ಅಸಮಾನತೆಯನ್ನು ಮುಂದುವರೆಸುತ್ತಿದ್ದೇವೆ. ತರಗತಿಗಳಲ್ಲಿ ಪ್ರಜಾಪ್ರಭುತ್ವದ ಆಧಾರದಲ್ಲಿ ಏನೂ ನಡೆಯುವುದಿಲ್ಲ. ಕಲಿಕಾರ್ಥಿಗಳೂ ಅಷ್ಟೇ ಚರ್ಚೆಗಳೇ ನಡೆಯುತ್ತಿಲ್ಲ ಎಂದರು.

ಪಠ್ಯಗಳು ನಮ್ಮ ಸಮಾಜದ ಬಹುತೇಕರ ಸಮುದಾಯಗಳ ಬಗ್ಗೆ ಕಾಣುವುದೇ ಇಲ್ಲ. ಯಥಾಸ್ಥಿತಿಯನ್ನು ಮುಂದುವರೆಸುತ್ತಿದ್ದೇವೆ. ಎಷ್ಟೇ ಪಿ ಎಚ್ ಡಿ ಪದವೀಧರರು ಬಂದರೂ ಪ್ರಶ್ನಿಸುವಷ್ಟು ಪ್ರಬುದ್ಧರಾಗುತ್ತಿಲ್ಲ ಎಂದರು.

ಆಧುನಿಕ ಸಂಸ್ಥೆಗಳು

ಸಾಮಾಜಿಕ ಪರಿವರ್ತನೆಯ ಉದ್ಧೇಶಗಳನ್ನು ಹೊಂದಿದ್ದರೂ ಅಲ್ಲೆಲ್ಲ ತದ್ವಿರುದ್ಧ ಚಟುವಟಿಕೆಗಳು ನಡೆಯುತ್ತಿವೆ. ಕೋರ್ಟು, ಪೊಲೀಸ್, ವಿಧಾನಸೌಧಗಳಲ್ಲಿ ಎಲ್ಲ ವ್ಯವಹಾರಗಳೇ ನಡೆಯುತ್ತಿವೆ. ಅಧಿಕಾರಿಗಳಿಗೆ ಜನ ಗುಲಾಮರಂತೆ ನಡೆದುಕೊಳ್ಳುತ್ತಿದ್ದಾರೆ. ಅಧಿಕಾರಿಗಳು ಜನರಿಗೆ ಗೌರವ ಕೊಡದೇ ಪಾಳೆಗಾರರಂತೆ ವರ್ತಿಸುತ್ತಿದ್ದಾರೆ ಎಂದರು.

ಮಠ ಮಂದಿರಗಳು

ಪ್ರತಿ ಜಾತಿಯ ಮಠಗಳಿವೆ. ಜನ ವೈದಿಕ ಪರಂಪರೆಯನ್ನೇ ಮುಂದುವರೆಸುತ್ತಿದ್ದಾರೆ. ರಾಜಕಾರಣದ ಮೇಲೆ ಅವುಗಳು ಹತೋಟಿ ಸಾಧಿಸಿವೆ. ಜನರ ಬದುಕನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಲು ಇವುಗಳೂ ಕಾರಣವಾಗಿವೆ ಎಂದರು.

ದೊಡ್ಡ ಮಟ್ಟಿಗೆ ಸರಕಾರ ಖರ್ಚು ಮಾಡುತ್ತಿದ್ದರೂ 10-20 ಶೇಕಡಾ ಜನ ಮಾತ್ರ ಇದರ ಲಾಭ ಪಡೆಯುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ದೋಷವಿದೆ. ಸಾಮಾನ್ಯ ಜನರಿಗೆ ಮೂಲಭೂತ ಸೌಲಭ್ಯಗಳೇ ಇಲ್ಲ. ಮೇಲ್ಕಂಡ ವಿಷಯಗಳು ಜನರ ಬದುಕನ್ನು ಮತ್ತಷ್ಟು ಅಸಮಾನತೆಯಡೆಗೆ ನೂಕುತ್ತಿವೆ ಎಂದರು.

Share:

Leave a Reply

Your email address will not be published. Required fields are marked *

More Posts

ವಿಧಾನಸಭೆಗಳ ಸಂರಚನೆ

ವಿಧಾನಸಭೆಗಳ ಸಂರಚನೆ 170. ವಿಧಾನಸಭೆಗಳ ಸಂರಚನೆ:- (1956ನೆಯ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ 9ನೆಯ ಪ್ರಕರಣದ ಮೂಲಕ

ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು

169. ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು:- (1) 168ನೆಯ ಅನುಚ್ಛೇದದಲ್ಲಿ ಏನೇ ಇದ್ದಾಗ್ಯೂ, ವಿಧಾನಪರಿಷತ್ತು ಇರುವ ರಾಜ್ಯದಲ್ಲಿ

On Key

Related Posts

Composition of the Legislative Assemblies

Composition of the Legislative Assemblies:- (Subs. by the Constitution (Seventh Amendment) Act, 1956, s. 9, for art. 170.) (1) Subject to the provisions of article 333, the Legislative Assembly of

ವಿಧಾನಸಭೆಗಳ ಸಂರಚನೆ

ವಿಧಾನಸಭೆಗಳ ಸಂರಚನೆ 170. ವಿಧಾನಸಭೆಗಳ ಸಂರಚನೆ:- (1956ನೆಯ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ 9ನೆಯ ಪ್ರಕರಣದ ಮೂಲಕ ಮೂಲ ಅನುಚ್ಛೇದಕ್ಕೆ ಬದಲಾಗಿ ಪ್ರತ್ಯಾಯೋಜಿಸಲಾಗಿದೆ.) (1) 333ನೆಯ ಅನುಚ್ಛೇದದ ಉಪಬಂಧಗಳಿಗೊಳಪಟ್ಟು, ಪ್ರತಿಯೊಂದು ರಾಜ್ಯದ ವಿಧಾನಸಭೆಯು ಆ ರಾಜ್ಯದಲ್ಲಿನ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಿಂದ

ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು

169. ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು:- (1) 168ನೆಯ ಅನುಚ್ಛೇದದಲ್ಲಿ ಏನೇ ಇದ್ದಾಗ್ಯೂ, ವಿಧಾನಪರಿಷತ್ತು ಇರುವ ರಾಜ್ಯದಲ್ಲಿ ಅದನ್ನು ರದ್ದುಗೊಳಿಸಬೇಕೆಂದು ಅಥವಾ ಅಂಥ ಪರಿಷತ್ತು ಇಲ್ಲದ ರಾಜ್ಯದಲ್ಲಿ ಅಂಥ ಪರಿಷತ್ತನ್ನು ಸೃಜಿಸಬೇಕೆಂದು ಆ ರಾಜ್ಯದ ವಿಧಾನಸಭೆಯು ಆ ಸಭೆಯ ಒಟ್ಟು

CHAPTER III- THE STATE LEGISLATURE

General 168. Constitution of Legislatures in States:- (1) For every State there shall be a Legislature which shall consist of the Governor, and- (a) in the States of [Andhra Pradesh,]