September 21, 2023 11:47 pm

ಭಾರತದ ಪ್ರಜಾಪ್ರಭುತ್ವಕ್ಕೆ ನೆಹರೂ ಅವರ ಕೊಡುಗೆಗಳು: ಶಶಿಧರ ಭಟ್

ಬೆಂಗಳೂರು: 1889ರಲ್ಲಿ ಅಲಹಾದಿನಲ್ಲಿ ಜನಸಿಸಿದ ನೆಹರೂ ಕೆಲ ವರ್ಷ ಮನೆಯಲ್ಲಿಯೇ ಅಧ್ಯಯನ ಮಾಡಿ ನಂತರ ವಿದೇಶಕ್ಕೆ ಹೋಗಿ 1912ರಲ್ಲಿ ಭಾರತಕ್ಕೆ ಮರಳುತ್ತಾರೆ ಎಂದು ಹಿರಿಯ ಪತ್ರಕರ್ತ ಶಶಿಧರ್ ಭಟ್ ಹೇಳಿದರು.

ಮಾನವ ಬಂಧುತ್ವ ವೇದಿಕೆ ವತಿಯಿಂದ ಆಗಸ್ಟ್ 21, 2021ರಂದು ಆಯೋಜಿಸಲಾಗಿದ್ದ ಬಂಧುತ್ವ ಬೆಳಕು ಉಪನ್ಯಾಸ ಮಾಲಿಕೆಯ ವೆಬಿನಾರ್ ಸರಣಿಯಲ್ಲಿ “ಭಾರತದ ಪ್ರಜಾಪ್ರಭುತ್ವಕ್ಕೆ ಜವಾಹರಲಾಲ್ ನೆಹರು ಅವರ ಕೊಡುಗೆಗಳು” ವಿಷಯದ ಕುರಿತು ಹಿರಿಯ ಪತ್ರಕರ್ತ ಶಶಿಧರ್ ಭಟ್ ಉಪನ್ಯಾಸ ನೀಡಿದರು. ವೆಬಿನಾರ್ ನಲ್ಲಿ ಹಿರಿಯ ವಕೀಲ ಕೆ.ದಿವಾಕರ್, ಎಐಸಿಸಿ ವಕ್ತಾರೆ ಲಾವಣ್ಯ ಬಲ್ಲಾಳ್, ಕೆಪಿಸಿಸಿ ವಕ್ತಾರ ಮಂಜುನಾಥ್ ಅದ್ದೆ ಪ್ರತಿಕ್ರಿಯೆ ನೀಡಿದರು. ‌

ವೆಬಿನಾರ್ ನಲ್ಲಿ ವಿಷಯ ಮಂಡಿಸಿದ ಶಶಿಧರ್ ಭಟ್, ಕೆಲ ಕಾಲ ವಕೀಲಿ ವೃತ್ತಿ ಮಾಡಿ ಕಾಂಗ್ರೆಸ್ಸಿನ ರಾಜಕಾರಣಕ್ಕೆ ಧುಮುಕಿ 1930ರಲ್ಲಿ ಸಾಕಷ್ಟು ಹೆಸರು ಮಾಡಿರುತ್ತಾರೆ. ಆ ಹೊತ್ತಿಗೆ ಗಾಂಧೀಜಿ ಈ ಯುವಕನಲ್ಲಿ ಏನೋ ಇದೆ ಎಂದರಿತ ಎಡಪಂಥೀಯ ವಿಚಾರಧಾರೆಗಳ ಯುವಕರನ್ನು ಸೆಳೆಯಲು ಉತ್ತರವಾಗಿ ಜವಾಹರಲಾಲ ನೆಹರೂ ಕಾಣುತ್ತಾರೆ. ಗಾಂಧೀಜಿ ಹೇಳುತ್ತಾರೆ, ‘ಜವಾಹಾರ ಅಪ್ಪಟ ಭಾರತೀಯ ಆದರೆ ಅವರ ದೃಷ್ಟಿ ಲೋಕದೃಷ್ಟಿ, ಅಂತರಾಷ್ಟ್ರೀಯ ದೃಷ್ಟಿ, ನನ್ನ ಭಾರತದ ಕನಸನ್ನು ಜವಾಹಾರ ಈಡೇರಿಸುತ್ತಾರೆ’ಎಂದರು.

ಆ ಸಂದರ್ಭದಲ್ಲಿಲಯೇ ನೆಹರೂ ಭಾರತದ ಪ್ರಧಾನ ಮಂತ್ರಿಯಾಗುತ್ತಾರೆ. ಆದರೆ ಅದು 1942ರ ಹೊತ್ತಿಗೆ ಘೋಷಣೆಯಾಗುತ್ತದೆ. ಗಾಂಧಿ ಮತ್ತು ನೆಹರೂ ಅವರ ಸಂಬಂಧ ಬಹಳ ಅದ್ಭುತವಾಗಿತ್ತು. ಗಾಂಧಿ ಅವರ ವಿಚಾರಧಾರೆ ಭಾರತದ ಸಾಂಪ್ರದಾಯಿಕತೆಯ ಮೇಲಿತ್ತು. ಆದರೆ ಕೋಮುವಾದಿಯಾಗಿರಲಿಲ್ಲ ಎಂದರು.

ನೆಹರೂ ನಮಗೆ ಆಧುನಿಕ, ವೈಜ್ಞಾನಿಕ ಮನೋಭಾವನೆಯನ್ನು ಕೊಟ್ಟವರು. ನೆಹರೂ ಪ್ರಧಾನಿಯಾದ ಸಂದರ್ಭದಲ್ಲಿ ದೇಶದಲ್ಲಿ ಬಡತನ ತಾಂಡವಾಡುತ್ತಿತ್ತು, ಖಜಾನೆ ಖಾಲಿಯಾಗಿತ್ತು, ಆಹಾರ ಧಾನ್ಯಗಳ ಅಭಾವ ಕಾಡುತ್ತಿತ್ತು, ಅಭಿವೃದ್ಧಿ ಇರಲಿಲ್ಲ. ಹೀಗಿದ್ದಾಗ ಹಸಿರು ಕ್ರಾಂತಿ ಪ್ರಾರಂಭಿಸಿದರು, ಐಐಟಿ ಪ್ರಾರಂಭಿಸಿದರು, ಯೋಜನಾ ಆಯೋಗವೂ ಅವರದ್ದೇ ಕೊಡುಗೆ, ಅಣುಶಕ್ತಿ ಆಯೋಗವನ್ನು ಪ್ರಾರಂಭಿಸುತ್ತಾರೆ ಎಂದರು.

ರಾಜಕಾರಣ ಆರ್ಥಿಕತೆಯನ್ನು ನನಗೆ ಕಲಿಸಿತು. ಅದು ನನಗೆ ವೈಜ್ಞಾನಿಕ ಮನೋಧರ್ಮ ರೂಪಿಸಿತು ಎಂದಿದ್ದಾರೆ ನೆಹರೂ. ಲಾಹೋರ ಅಧಿವೇಶನದ ನಂತರ ನೆಹರೂ ಯುವಕರ ಕಣ್ಮಣಿಯಾಗಿ ರೂಪುಗೊಳ್ಳುತ್ತಾರೆ. ಈ ದೇಶವನ್ನು ಸೆಕ್ಯೂಲರ್ ತಲಹದಿಯಲ್ಲಿ ಕಟ್ಟುತ್ತಾರೆ. ಭಾರತದ ಕುರಿತು ಅವರಿಗೊಂದು ಒಳನೋಟವಿತ್ತು. ನೆಹರೂ ದೇವಸ್ಥಾನವನ್ನು ಕಟ್ಟದೇ ದೇಶವನ್ನು ಕಟ್ಟಿದರು. ದೇಶ ಇಂದಿರಾ ಗಾಂಧಿಯವರ ನಂತರ ನೆಹರೂ ಅವರನ್ನು ಮರೆಯುತ್ತಿದೆ. ನೆಹರೂ ಅವರ ಬಗ್ಗೆ ತಿಳಿಸುವ ಜನಾಂದೋಲವನ್ನು ಕಾಂಗ್ರೆಸ್ ಮಾಡಬೇಕಿದೆ ಎಂದು ಸಲಹೆ ನೀಡಿದರು.

ವೆಬಿನಾರ್ ನಲ್ಲಿ ಪ್ರತಿಕ್ರಿಯಿಸಿದ ಸಂಪನ್ಮೂಲ ವ್ಯಕ್ತಿಗಳ ಅಭಿಪ್ರಾಯ

ವಿಜ್ಞಾನದಿಂದ ಅಂತರಿಕ್ಷದವರೆಗೆ ತಳಸ್ಪರ್ಶಿಯಾದ ಸಂವೇದನೆ ಇದ್ದಂತಹ ಅಪರೂಪದ ವ್ಯಕ್ತಿ ನೆಹರೂ. ನೆಹರೂ ಅಲಿಪ್ತ ನೀತಿ ವಿಚಾರ ಜಗತ್ತಿಗೆ ತಿಳಿಸಬೇಕಾಗಿತ್ತು. ತನ್ನ ಎಲ್ಲ ಮಂತ್ರಿ ಮಂಡಲಕ್ಕೆ ಕೆಲಸ ಮಾಡಲು ಪೂರ್ಣ ಪ್ರಮಾಣದ ಸ್ವಾತಂತ್ರ್ಯ ನೀಡಿದ್ದವರು ನೆಹರೂ. ಚೈನಾ ವಾರ್ ಸಂದರ್ಭದಲ್ಲಿಯೂ ನೆಹರೂ ಅವರ ಬಗ್ಗೆ ಅಪಪ್ರಚಾರ ಪ್ರಾರಂಭವಾಗಿದೆ. 70 ವರ್ಷಗಳಲ್ಲಿ ಈ ದೇಶದ ಅಭಿವೃದ್ಧಿಗೆ ನೆಹರೂ ವಿಚಾರಧಾರೆ ಕಾರಣ. ಸಾಂಸ್ಥಿಕವಾಗಿ ಜನರಿಗೆ ನೆಹರೂ ಅವರನ್ನು ತಲುಪಿಸಲು ಕಾಂಗ್ರೆಸ್ ವಿಫಲವಾಗಿದೆ. ಕಳೆದ ವರ್ಷ ನೆಹರೂ ಅವರು ಬರೆದ ಪುಸ್ತಕಗಳ ರಾಯಲ್ಟಿ ಸುಮಾರು 7 ಕೋಟಿ.

  • ಕೆ. ದಿವಾಕರ, ಹಿರಿಯ ನ್ಯಾಯವಾದಿಗಳು, ವಿಶ್ಲೇಷಕರು

ನೆಹರೂ ಅವರ ಹೆಸರು ಕೆಡಿಸುವ ಪ್ರಯತ್ನಗಳು ಕಳೆದ ಹತ್ತು ವರ್ಷಗಳಿಂದಲೂ ನಡೆಯುತ್ತಿವೆ. ದೇಶದ ಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರು ದೇಶದ ಅಡಿಪಾಯ ಹಾಕಿದವರು. ನೆಹರೂ ಅವರ ಬಗ್ಗೆ ನಾವು ಹೆಚ್ಚು ತಿಳಿದು, ಜನರಿಗೆ ತಿಳಿಸಬೇಕು. ಜಾತ್ಯತೀತ, ಪ್ರಜಾಸತ್ತಾತ್ಮಕ ಮೌಲ್ಯಗಳು ಇವತ್ತು ದೇಶದಲ್ಲಿ ಉಳಿದಿದ್ದರೆ ಅದಕ್ಕೆ ನೆಹರೂ ಅವರೇ ಕಾರಣ.

  • ಲಾವಣ್ಯ ಬಲ್ಲಾಳ, ಎಐಸಿಸಿ ವಕ್ತಾರೆ

ಸಂವಿಧಾನದಲ್ಲಿದ್ದ ಮೌಲ್ಯಗಳನ್ನು ದೇಶದಲ್ಲಿ ಬಿತ್ತುವ ಕೆಲಸ ಮಾಡಿದವರು ನೆಹರೂ. ಆರ್ ಎಸ್ ಎಸ್ ವೈದಿಕ ಮನಸ್ಥಿತಿಗೆ ವಿರುದ್ಧವಾಗಿ ನೆಹರೂ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಕೊಟ್ಟರು. ಅಹಿಂಸಾ ನೀತಿಯನ್ನು ವಿಶ್ವದಲ್ಲಿಯೇ ಮೊದಲಿಗೆ ನೀಡಿದವರು ಗಾಂಧಿ. ನೂರಾರು ದೇಶಗಳು ಅದಕ್ಕೆ ಸ್ಪಂದಿಸುತ್ತವೆ. ನೆಹರೂ ದೊಡ್ಡ ಮಾನವೀಯ ಅಂಶಗಳನ್ನು ಕಾರ್ಯರೂಪಕ್ಕೆ ತಂದ ಪ್ರಧಾನಿಯಾಗಿದ್ದರು. ಹಸಿರು ಕ್ರಾಂತಿಯ ಮೂಲಕ ನೀರಾವರಿ ವ್ಯವಸ್ಥೆ ಕಟ್ಟಿ ಹಸಿವು ಮುಕ್ತವಾಗಿಸಿದರು. 40 ಲಕ್ಷ ಕಿ.ಮೀ ರಸ್ತೆ ನಿರ್ಮಾಣ ಮಾಡಿದರು. ಶೇ 14 ರಿಂದ ಇವತ್ತು ಶೇ 74ರಷ್ಟು ಸಾಕ್ಷರತೆಯನ್ನು ಸಾಧಿಸಿದ್ದರೆ ಅದಕ್ಕೆ ಕಾರಣ ನೆಹರೂ. ಜಾತ್ಯತೀತ, ವೈಜ್ಞಾನಿಕ, ದೂರದೃಷ್ಟಿ ಉಳ್ಳ ನಾಯಕ ನೆಹರೂ.

  • ಮಂಜುನಾಥ ಅದ್ದೆ, ಕೆಪಿಸಿಸಿ ವಕ್ತಾರ

Share:

Leave a Reply

Your email address will not be published. Required fields are marked *

More Posts

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ

On Key

Related Posts

ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ,ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ

ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ. ಅಂದರೆ ಪೌಷ್ಟಿಕ ಆಹಾರ ಮಣ್ಣುಪಾಲಾಗುತ್ತದೆ. ಅದೇ ಹಾಲನ್ನು ಅವಶ್ಯಕತೆ ಇರುವವರಿಗೆ ಆಹಾರವಾಗಿ ನೀಡಬಹುದಲ್ಲವೇ? ದೈವ ಭಕ್ತಿಗೂ, ಧರ್ಮ ಭಕ್ತಿಗೂ, ಪರಿಸರ

ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

ಇಂದು ಆಗಸ್ಟ್ 20. ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಮಾತುಕತೆ…….. ವಿಜ್ಞಾನ ಮತ್ತು ಧರ್ಮ ಒಂದಕ್ಕೊಂದು ಪೂರಕವೇ ಅಥವಾ ವಿರುದ್ದವೇ ಅಥವಾ ಪರ್ಯಾಯವೇ ಅಥವಾ ಸಮಾನಾಂತರವೇ ಅಥವಾ ಪ್ರತಿಸ್ಪರ್ಧಿಗಳೇ ಅಥವಾ ಸಂಬಂಧವಿಲ್ಲವೇ….. ಧರ್ಮ ( ಮತ ) ಎಂಬುದು

ಬಸವ ಪಂಚಮಿ: ಒಂದು ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ

ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಆದರೆ ಸಾಂಪ್ರದಾಯವಾದಿಗಳು ಆ ಆಚರಣೆಗಳನ್ನು ತಿರುಚಿ ಅವುಗಳಿಗೆ ಧಾರ್ಮಿಕ ಮೌಢ್ಯದ ಹಿನ್ನೆಲೆಯನ್ನು ಹೆಣೆದಿದ್ದಾರೆ. ಕೇವಲ ಧಾರ್ಮಿಕ ಹಿನ್ನೆಲೆಯಷ್ಟೆಯಲ್ಲದೆ ಅನೇಕ ಬಗೆಯ ಮೌಢ್ಯಗಳನ್ನು ಜನಮನದಲ್ಲಿ ಬಿತ್ತಿದ್ದಾರೆ.

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದಿದ್ದಾರೆ. ಎಲ್ಲಾ ರೀತಿಯ ಅಸಮಾನತೆಯನ್ನು ಕೊನೆಗಾಣಿಸಿ ಸಮಾನತೆಯನ್ನು ತರುವುದು ನಮ್ಮ ಸಂವಿಧಾನದ

ಮೀಸಲಾತಿ ನೀತಿಯನ್ನು ಪುನರ್ ರಚಿಸಬೇಕಾದ ಅಗತ್ಯತೆ

ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಮೀಸಲಾತಿ ನೀತಿಯ ಅನುಷ್ಠಾನದಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಆದರೂ ಇಂದು ಹಲವು ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗಿವೆ. ಒಳಮೀಸಲಾತಿ, ಕೆನೆಪದರ ಬಡ್ತಿಯಲ್ಲಿ ಮೀಸಲಾತಿ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಎಂಬ ಪ್ರಶ್ನೆಗಳು ಕಾಡುತ್ತಿವೆ. ಮೀಸಲಾತಿ ಎಂದರೇನು