
ಪರರ ವಿಚಾರ, ಧರ್ಮಗಳನ್ನು ಸಹಿಸುವುದೇ ನಾವು ಗಳಿಸಬಹುದಾದ ಆಸ್ತಿ
“ಕಸವರಮೆಂಬುದು ನೆರೆ ಸೈರಿಸಲಾರ್ಪೊಡೆ ಪರ ವಿಚಾರಮುಮಂ ಪರ ಧರ್ಮಮುಮಂ” ಇದು ಒಂಬತ್ತನೇ ಶತಮಾನದ ನಮ್ಮ ಕನ್ನಡದ ಜೈನ ಕವಿ ಶ್ರೀವಿಜಯ ತನ್ನ ‘ಕವಿರಾಜಮಾರ್ಗ’ ಕೃತಿಯಲ್ಲಿ ನುಡಿದ ಮಾತು. ‘ಕವಿರಾಜಮಾರ್ಗ’ ಕನ್ನಡದ ಆಚಾರ್ಯ ಕೃತಿ. ಕನ್ನಡಿಗರಿಗೆ ಸಾರ್ವಕಾಲಿಕವಾದ ಸ್ವಾಭಿಮಾನ ಹಾಗೂ ಸಹಿಷ್ಣುತೆಯ ಪಾಠವನ್ನು