October 1, 2023 7:40 am

ಹೊಸ ಶಿಕ್ಷಣ ನೀತಿ ಹೇಗೆ ತಳಸಮುದಾಯಗಳ ಮೇಲೆ ಪರಿಣಾಮ: ಡಾ.ಬಾಲಾಜಿ ನಾಯ್ಕ

ಬೆಂಗಳೂರು: ಹೊಸ ಶಿಕ್ಷಣ ನೀತಿ ಹೇಗೆ ತಳಸಮುದಾಯಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ನಾವು ತಿಳಿದುಕೊಳ್ಳಬೇಕು. ಇದು ತಳಸಮುದಾಯಗಳನ್ನು ಶಿಕ್ಷಣದಿಂದ ವಂಚಿತಗೊಳಿಸುವ ಹುನ್ನಾರವಾಗಿದೆ ಎಂದು ದೆಹಲಿಯ ಕಾನೂನು ವಿಶ್ವವಿದ್ಯಾಲಯದ ಕಾನೂನು ವಿಭಾಗದ ಸಹಾಯಕ ಪ್ರಧ್ಯಾಪಕ ಡಾ.ಬಾಲಾಜಿ ನಾಯ್ಕ ಹೇಳಿದರು.

ಹೊಸ ಶಿಕ್ಷಣ ನೀತಿ: ತಳಸಮುದಾಯಗಳ ಮೇಲಾಗುವ ಪರಿಣಾಮಗಳು ವಿಷಯ ಕುರಿತು ದೆಹಲಿ ವಿಶ್ವವಿದ್ಯಾಲಯದ ಡಾ.ಬಾಲಾಜಿನಾಯ್ಕ ಉಪನ್ಯಾಸ ನೀಡಿದರು. ವೆಬಿನಾರ್ ಅಧ್ಯಕ್ಷತೆಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ವಹಿಸಿಕೊಂಡಿದ್ದರು. 

ವೆಬಿನಾರ್ ನಲ್ಲಿ ಮಾತಾಡಿದ ಬಾಲಾಜಿ ನಾಯ್ಕ, ರಾಷ್ಟ್ರೀಯ ಶಿಕ್ಷಣ ನೀತಿ ಹೇಗೆ ರಾಷ್ಟ್ರೀಯ ಶಿಕ್ಷಣ ನೀತಿಯು ಅಪಾಯಕಾರಿಯಾಗಿದೆ ಎಂದು ಕೆಲವು ಅಂಕಿ ಅಂಶಗಳೊಡನೆ ವಿವರಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿ

10+2 ಇದ್ದ ಪ್ರಾಥಮಿಕ  ಶಿಕ್ಷಣ ವ್ಯವಸ್ಥೆ ಈಗ 5+3+4 ಆಗಿ ಬದಲಾಗಿದೆ.

1.      ಮಕ್ಕಳನ್ನು ಶಿಕ್ಷಣಕ್ಕೆ ಮೂರನೇ ವರ್ಷದಿಂದಲೇ ತೆಗೆದುಕೊಳ್ಳುವುದಾಗಿದೆ.

2.      ಅವರಲ್ಲಿ ವಿವಿಧ ರೀತಿಯ ಚಟುವಟಿಕೆ ಆಧಾರಿತ ಸಾಮರ್ಥ್ಯ ಪರೀಕ್ಷಿಸುವುದು.  

3.      ಮಕ್ಕಳ ಓದುವ, ಲೆಕ್ಕ ಮಾಡುವ ಸಾಮರ್ಥ್ಯ ಕಡಿಮೆ ಇರುವುದರಿಂದ  ರಾಷ್ಟ್ರ ಮಟ್ಟದ ಕಮಿಟಿ ರಚಿಸುವುದು.

4.      ಆರ್.ಟಿ.ಇ ಬಂದ ನಂತರ ಶಾಲೆಯಿಂದ ಹೊರಗುಳಿಯುವ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಕಾಲೇಜಿನ ಹಂತದಲ್ಲಿ ಅಧಿಕವಾಗಿದೆ. ಅದರ ಸುಧಾರಣೆಗೆ ಹೊಸ ಯೋಜನೆಗಳನ್ನು ಪರಿಚಯಿಸಿದ್ದಾರೆ.

5.      5-8 ತರಗತಿಯವರೆಗೆ ಮಾತೃಭಾಷೆಯಲ್ಲಿ ಶಿಕ್ಷಣ ನೀಡಬೇಕು. ನಂತರದಲ್ಲಿ  ಮಾತೃ ಭಾಷೆ ಅಥವಾ ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ. ನಂತರದಲ್ಲಿ ತ್ರಿಭಾಷಾ ಸೂತ್ರದನ್ವಯ ಶಿಕ್ಷಣ ನೀಡುವುದು.

6.      ಹಳ್ಳಿಹಳ್ಳಿಗಳಲ್ಲಿ ಶಾಲೆಯನ್ನು ತೆಗೆಯುವುದು ಅಗತ್ಯವಿಲ್ಲ, ಮಕ್ಕಳ ಸಂಖ್ಯೆ ಆಧರಿಸಿ ನಿರ್ಧರಿಸಬೇಕು ಎಂದಿದ್ದಾರೆ.

7.      ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿಗಳ ಸಮಖ್ಯೆಯನ್ನು ಹೆಚ್ಚಿಸಬೇಕು ಎಂದಿದ್ದಾರೆ.

8.      ಯುಜಿಸಿ ಯಂತಹ ಹೊಸ ಸಂಸ್ಥೆಗಳನ್ನು ತರಲಿದ್ದಾರೆ.

9.      ಪದವಿಯಲ್ಲಿ ಬೇರೆ ಬೇರೆ ವಿಷಯಗಳ ಆಯ್ಕೆ ಮತ್ತು ಕೈಬಿಡಲು ಅವಕಾಶ ನೀಡಿದ್ದಾರೆ.

10.    ಆಯಾ ಪದವಿಗಳಿಗೆ ಬೇರೆ ಬೇರೆ ಪ್ರತ್ಯೇಕ ವಿಶ್ವವಿದ್ಯಾಲಯಗಳನ್ನು ಸೂಚಿಸಿದ್ದಾರೆ.

11.    ವಿದೇಶಿ ವಿಶ್ವವಿದ್ಯಾಲಯಗಳನ್ನು ಭಾರತದಲ್ಲಿ ಸ್ಥಾಪಿಸಲು ಅವಕಾಶ ನೀಡಲಾಗಿದೆ.

12.    ಕೌಶಲ್ಯಾಭಿವೃದ್ಧಿಗೆ ಒತ್ತು.

13.    ಹಣಕಾಸು ನೆರವು ಮತ್ತು ಡಿಜಿಟಲ್ ಶಿಕ್ಷಣ.

ದುಷ್ಪರಿಣಾಮಗಳು:

1. ರಾಜ್ಯಗಳ ಅಧಿಕಾರ ನಾಶಪಡಿಸುತ್ತದೆ.

2. ಸಾಮಾಜಿಕ ನ್ಯಾಯ ವ್ಯವಸ್ಥೆಯನ್ನು ದೂರವಿಡುತ್ತದೆ.

3. ಬಾಲ್ಯದಿಂದಲೇ ಶಿಕ್ಷಣ ಪ್ರಾರಂಭಿಸುವುದು ಹಣ ಗಳಿಸುವ ಅಜೆಂಡಾ ಆಗಿದೆ.

4. ಆರ್.ಟಿ.ಇ ದುರ್ಬಲಗೊಳಿಸುವುದಾಗಿದೆ.

5. ಕೌಶಲ್ಯಾಭಿವೃದ್ಧಿ ಶಿಕ್ಷಣದ ಮೂಲಕ ತಳ ಸಮುದಾಯಗಳ ಮಕ್ಕಳನ್ನು ಉನ್ನತ ಶಿಕ್ಷಣದಿಂದ ದೂರವಿಡುವುದು.

6. ಪದವಿ ಬಿಟ್ಟು ಹೋದವರು ಮತ್ತೆ ಬಂದು ಮುಗಿಸಿಕೊಳ್ಳಬಹುದು.

7. ಸಂಸ್ಕೃತ ಭಾಷೆಯ ಪ್ರಾಬಲ್ಯ.

8. ತ್ರಿಭಾಷಾ ಸೂತ್ರ

9. ಉನ್ನತ ಶಿಕ್ಷಣ ಮತ್ತು ಹಣ ಗಳಿಸುವ ಹುನ್ನಾರ

10. ತಳಸಮುದಾಯಗಳ ಮಕ್ಕಳನ್ನು, ಯುವಕರನ್ನು ಶಿಕ್ಷಣದಿಂದ ಹೊರಗಿಡುವುದು.

11. ಮೀಸಲಾತಿಗಳನ್ನು ಸಿಗದಂತೆ ಮಾಡುವುದು.

12. ಮೆರಿಟ್ ಆಧಾರದಲ್ಲಿ ಸಾಮಾಜಿಕ ಅಂತರವನ್ನು ಕಾಯುವುದು.

13. ರಾಜ್ಯಗಳ ಅಧಿಕಾರವನ್ನು ದುರ್ಬಲಗೊಳಿಸುವುದು.

14. ಪ್ರಜಾಸತ್ತಾತ್ಮಕವಾಗಿ ಯುನಿಯನ್ ಗಳಿಗೆ ಅವಕಾಶ ನೀಡಿಲ್ಲ.

15. ಸರಕಾರಿ ವಿಶ್ವವಿದ್ಯಾಲಯಗಳ ಬಗ್ಗೆ ನಿರಾಸಕ್ತಿ.

ಪರಿಹಾರಗಳು:

1. ಶಿಕ್ಷಣದ ವ್ಯಾಪಾರೀಕರಣವನ್ನು ತಡೆಗಟ್ಟುವುದು.

2. ಪ್ರತಿಭಟಿಸುವ ಅವಶ್ಯಕತೆ ಇದೆ.

3. ವಿಶ್ವವಿದ್ಯಾಲಯಗಳ ಪ್ರಜಾಸತ್ತಾತ್ಮಕ ಅಧಿಕಾರವನ್ನು ರಕ್ಷಿಸುವುದು.

4. ಸಾಮಾಜಿಕ ನ್ಯಾಯವನ್ನು ರಕ್ಷಿಸುವುದು.

5. ಸಾಂವಿಧಾನಿಕ ಮೌಲ್ಯಗಳ ರಕ್ಷಣೆ ಮಾಡುವುದು.

ಪ್ರತಿಕ್ರಿಯೆ

ವ್ಯಾಪಾರೀಕರಣ ಮತ್ತು ಕೇಸರೀಕರಣ ಈ ಹೊಸ ಶಿಕ್ಷಣದಲ್ಲಿ ಅಡಗಿದೆ. ಈಗಾಗಲೇ ಇರುವ ಸಾರ್ವತ್ರಿಕ ಶಿಕ್ಷಣ ಇರುವಾಗಲೇ, ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಇರುವ ಮಕ್ಕಳ ಹಕ್ಕುಗಳ ಕಾಯ್ದೆಯನ್ನು ಕಡೆಗಣೆಸುತ್ತಿದೆ. ಡಿಜಿಟಲ್ ಶಿಕ್ಷಣದ ಮಾತಾಡುತ್ತಿದ್ದಾರೆ. ಆದರೆ ಬಡ ಮತ್ತು ಆದಿವಾಸಿ ಸಮುದಾಯಗಳು ಹೇಗೆ ಇದರಲ್ಲಿ ಬರುತ್ತವೆ. ದೇಸೀಯ ಶಿಕ್ಷಣದ ಮಾತಾಡುತ್ತಿದ್ದಾರೆ. ಅದರಂತೆ ಮತ್ತೆ ಬಡವರನ್ನು, ಮಹಿಳೆಯರನ್ನು ಶಿಕ್ಷಣದಿಂದ ವಂಚಿಸಲಾಗುತ್ತದೆ. ಬಾಲ ಕಾರ್ಮಿಕ, ಬಾಲ್ಯ ವಿವಾಹ ಪಿಡುಗುಗಳಿಂದ ಈಗಾಗಲೇ ಮಕ್ಕಳು ಶಿಕ್ಷಣದಿಂದ ಹೊರಗುಳಿಯುತ್ತಿದ್ದಾರೆ. ಈ ಹೊಸ ಶಿಕ್ಷಣ ನೀತಿಯಿಂದ ಮತ್ತಷ್ಟು ಶಿಕ್ಷಣದಿಂದ ವಂಚಿತಗೊಳಿಸಲಾಗುತ್ತೆ. ಆರ್ಥಿಕವಾಗಿ ಮೇಲಿರುವ, ಮೇಲ್ಜಾತಿಯವರಿಗೆ ಮಾತ್ರ ಇದು ಉಪಕಾರಿಯಾಗಿದೆ.

ಜ್ಯೋತಿ. ಕೆ., ಎ.ಐ.ಎಸ್.ಎಫ್

ಯಾವುದೇ ನೀತಿ ಜಾರಿಯಾಗುವ ಸಂದರ್ಭದಲ್ಲಿ ತಳಸಮುದಾಯಗಳನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಸರಕಾರದ ಗಮನವಿರಬೇಕಾಗುತ್ತದೆ. ಶಿಕ್ಷಣದ ಉದ್ಧೇಶ ಬಹಳ ವಿಶಾಲವಾದುದು. ದೇಶದ ಶ್ರಮಿಕರ ಬೆವರು, ರಕ್ತದಿಂದ ದೇಶವನ್ನು ಕಟ್ಟಲಾಗುತ್ತದೆ. ಹಾಗಾಗಿ ಅವರನ್ನು ಬಿಟ್ಟು ಶಿಕ್ಷಣ ನೀಡಲಾಗದು ಎಂದು ಜ್ಯೋತಿಬಾ ಫುಲೆ ಅವರು ಹೇಳುತ್ತಾರೆ. ಪ್ರತಿ ಹತ್ತು ವರ್ಷಕ್ಕೊಮ್ಮೆ ಇಲ್ಲಿ ಹೊಸ ಶಿಕ್ಷಣ ನೀತಿಗಳು ಬರುತ್ತವೆಯೇ ಹೊರತು ಯಶಸ್ವಿಯಾಗುವುದಿಲ್ಲ. ಉನ್ನತ ಶಿಕ್ಷಣವನ್ನು ತಳಸಮುದಾಯದ ಮಕ್ಕಳು/ಯುವಕರು ಪಡೆಯಲು ಸಾಧ್ಯವಾಗುತ್ತಿರುವುದಕ್ಕೆ ಕಾರಣಗಳನ್ನು ನೋಡಿದಾಗ ಕಾಲೇಜು, ವಿಶ್ವವಿದ್ಯಾಲಯಗಳು ದೂರದಲ್ಲಿರುವುದು, ಸರಿಯಾದ ಸಾರಿಗೆ ಅನುಕೂಲ ಇಲ್ಲದಿರುವುದು. ಹೊಸ ಶಿಕ್ಷಣದಲ್ಲಿ ಕ್ಲಸ್ಟರ್ ಮಟ್ಟದಲ್ಲಿ ಎಜುಕೇಶನ್ ಕಾಂಪಸ್ ಮಾಡಲು ಹೊರಟಿದ್ದಾರೆ. ಇದರಲ್ಲಿ ಯಾವುದೇ ಸಾಮಾಜಿಕ ನ್ಯಾಯ, ಶೋಷಿತರ ಪರ ಪ್ರಾತಿನಿಧ್ಯಗಳಿಲ್ಲ. ಪದವಿ ನಾಲ್ಕು ವರ್ಷ ಮಾಡಲಿದ್ದಾರೆ ಮತ್ತು ಪದವಿ ಮುಗಿದ ಬಳಿಕವಷ್ಟೇ ಪ್ರೋತ್ಸಾಹಧನ ಸಿಗಲಿದೆ. ನಾಲ್ಕು ವರ್ಷ ಮಾಡುವುದರಿಂದ ತಳಸಮುದಾಯಗಳನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿ ಅವರು ಕೌಶಲ್ಯಾಭಿವೃದ್ಧಿ ಕೋರ್ಸುಗಳಿಗೆ ಸೇರುವಂತೆ, ಅವರು ಮುಂದೆ ದೊಡ್ಡ ದೊಡ್ಡ ಕಂಪನಿಗಳಿಗೆ ಜೀತದಾಳುಗಳಾಗುವಂತೆ ಮಾಡುತ್ತದೆ. ಹಾಗಾಗಿ ಎಲ್ಲಾ ಸಂಘಟನೆಗಳು ಇದರ ಕುರಿತು ದೊಡ್ಡ ಹೋರಾಟವನ್ನು ರೂಪಿಸುವ ಅಗತ್ಯವಿದೆ.

  • ಸರೋವರ ಬೆಂಕಿಕೆರೆ, ಕೆ.ವಿ.ಎಸ್

ಕಾರ್ಮಿಕರ ವಿರೋಧಿ ಬಿಲ್, ರೈತ ವಿರೋಧಿ ಬಿಲ್ ಈಗ ರಾಷ್ಟ್ರೀಯ ಶಿಕ್ಷಣ ನೀತಿ – ಹೀಗೆ ಕೇಂದ್ರ ಸರಕಾರ ಜನ ವಿರೋಧಿ ನೀತಿಗಳನ್ನು ರೂಪಿಸಿ ಜಾರಿಗೊಳಿಸುತ್ತಲೇ ಇದೆ. ಸಂವಿಧಾನ ಬದಲಾಯಿಸುವ ದುರುದ್ದೇಶ ಇರುವ ಅವರು ಅದಕ್ಕೆ ಪೂರಕವಾಗಿಯೇ ಇಂಥ ನೀತಿಗಳನ್ನು ರೂಪಿಸುತ್ತಿದೆ. ಶಿಕ್ಷಣ ಸೇವೆಯಾಗಿಸದೇ ವ್ಯಾಪಾರದ ಸರಕಾಗಿಸುತ್ತಿದ್ದಾರೆ. ಸಂವಿಧಾನ ವಿರೋಧಿಯಾಗಿ ಈ ಶಿಕ್ಷಣ ನೀತಿಯನ್ನು ಜಾರಿಗೊಳಿಸುತ್ತಿದ್ದಾರೆ. ಇದರಿಂದ ತಳಸಮುದಾಯಗಳಿಗೆ ಇದು ಅತ್ಯಂತ ಅಪಾಯಕಾರಿಯಾಗಿದೆ. ಇದು ದೀರ್ಘಕಾಲದ ಕೆಟ್ಟ ಅಜೆಂಡಾ ಆಗಿದ್ದು, ನಮ್ಮನ್ನು ಪ್ರಶ್ನಿಸದಂತೆ ಮಾಡುತ್ತದೆ ಮತ್ತು ಸಂಪೂರ್ಣವಾಗಿ ಶಿಕ್ಷಣದ ಕೇಸರಿಕರಣವಾಗಿದೆ. ಉನ್ನತ ಶಿಕ್ಷಣ ಸಂಸ್ಥೆಗಳನ್ನು ಕಡಿಮೆಗೊಳಿಸುವುದೇ ಅವರ ಗುರಿ. ತಳಸಮುದಾಯಗಳನ್ನು ಸಾಮಾಜಿಕವಾಗಿ ಮೇಲಕ್ಕೆ ಎತ್ತದೇ ಮತ್ತಷ್ಟು ತುಳಿಯುವುದೇ ಆಗಿದೆ.

  • ವಾಸುದೇವ ರೆಡ್ಡಿ, ಎಸ್.ಎಫ್.ಐ

ಹೊಸ ಶಿಕ್ಷಣ ನೀತಿ ಕೇವಲ ಶಿಕ್ಷಣ ಕ್ಷೇತ್ರದ ಮೇಲೆ ಪರಿಣಾಮ ಬೀರದೇ ಇಡಿಯ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅದರ ಮುನ್ನುಡಿಯಿಂದಲೇ ಸಮಸ್ಯೆಗಳು ಶುರುವಾಗುತ್ತವೆ. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಯಾವ ಸಮಸ್ಯೆಗಳ ಬಗ್ಗೆಯೂ ಅದು ಮಾತನಾಡುವುದಿಲ್ಲ. ನೀತಿ ರಚಿಸುವವರು ಯಾಕೆ ಸರಕಾರಿ ಶಾಲೆಗಳಿಗೆ ಮಕ್ಕಳು ಹೋಗುತ್ತಿಲ್ಲ ಎಂಬುದನ್ನು ಅವರು ಯೋಚಿಸುವುದಿಲ್ಲ. ಆನ್ಲೈನ್ ಶಿಕ್ಷಣಕ್ಕೆ ಒತ್ತು ಕೊಡುವುದರ ಬಗ್ಗೆ ಮಾತಾಡುತ್ತಾರೆ ಅದರ ಅಪಾಯಕಾರಿ ವಿಷಯಗಳ ಬಗ್ಗೆ ನಾವು ತಿಳಿಸಬೇಕು.

  • ಅಜಯ ಕಾಮತ್ , ಎ.ಐ.ಡಿ.ಎಸ್

ಹಾಲಿ ಇರುವ ಶಿಕ್ಷಣ ನೀತಿಯಲ್ಲಿ ನಾವು ಯಾವುದೇ ಸಾಧನೆ ಮಾಡಿಲ್ಲ. ಈಗ ಮತ್ತೊಂದು ನೀತಿಯನ್ನು ಹೇರಲಾಗುತ್ತಿದೆ. ಇದರಲ್ಲಿ ಯಾವುದೇ ಶಿಕ್ಷಣ ತಜ್ಞರಿಲ್ಲ. ಇದನ್ನು ತರಾತುರಿಯಿಂದ ಮಾಡುತ್ತಿದ್ದಾರೆ. ಹಾಡಿಗಳು, ಹಳ್ಳಿಗಳ ಬಡ ಜನರಿಗೆ ಹೇಗೆ ಆನ್ಲೈನ್ ಶಿಕ್ಷಣ ಸಾಧ್ಯ ಎಂಬುದನ್ನು ಯೋಚಿಸಬೇಕು. ಇದರಿಂದ ತಳಸಮುದಾಯಗಳ ಶಿಕ್ಷಣದ ಮೇಲೆ ಕೆಟ್ಟ ಪರಿಣಾಮ ಆಗುತ್ತದೆ. ಶಿಕ್ಷಣ ಕಬ್ಬಿಣದ ಕಡಲೆಯಾಗಿ ಮರೀಚಿಕೆಯಾಗುತ್ತದೆ.

  • ಜೆ.ಟಿ. ಚಂದ್ರಶೇಖರಪ್ಪ, ಜಲ ಸಂಪನ್ಮೂಲ ಇಲಾಖೆಯ ನಿವೃತ್ತ ಕಾರ್ಯದರ್ಶಿಗಳು, ಕರ್ನಾಟಕ ಲೋಕಸೇವಾ ಆಯೋಗದ ನಿವೃತ್ತ ಸದಸ್ಯರು.

ಅಧ್ಯಕ್ಷೀಯ ನುಡಿ

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಕೇವಲ ತಳ ಸಮುದಾಯಗಳಿಗೆ ತೊಂದರೆಯಾಗದೇ ಎಲ್ಲ ಬಡ ಮಕ್ಕಳಿಗೂ ತೊಂದರೆಯಾಗುತ್ತದೆ.  ಇದು ಅಪಾಯಕಾರಿ ನೀತಿಯಾಗಿದ್ದು ಆರ್.ಎಸ್.ಎಸ್ ಪ್ರೇರಿತವಾಗಿದೆ. ಇದರ ಅಪಾಯದ ಬಗ್ಗೆ ನಾವು ಜನರಿಗೆ ತಿಳಿಸಬೇಕಾಗಿದೆ.

  • ಸತೀಶ ಜಾರಕಿಹೊಳಿ, ಕೆಪಿಸಿಸಿ ಕಾರ್ಯಾಧ್ಯಕ್ಷರು

Share:

Leave a Reply

Your email address will not be published. Required fields are marked *

More Posts

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ

On Key

Related Posts

ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ,ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ

ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ. ಅಂದರೆ ಪೌಷ್ಟಿಕ ಆಹಾರ ಮಣ್ಣುಪಾಲಾಗುತ್ತದೆ. ಅದೇ ಹಾಲನ್ನು ಅವಶ್ಯಕತೆ ಇರುವವರಿಗೆ ಆಹಾರವಾಗಿ ನೀಡಬಹುದಲ್ಲವೇ? ದೈವ ಭಕ್ತಿಗೂ, ಧರ್ಮ ಭಕ್ತಿಗೂ, ಪರಿಸರ

ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

ಇಂದು ಆಗಸ್ಟ್ 20. ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಮಾತುಕತೆ…….. ವಿಜ್ಞಾನ ಮತ್ತು ಧರ್ಮ ಒಂದಕ್ಕೊಂದು ಪೂರಕವೇ ಅಥವಾ ವಿರುದ್ದವೇ ಅಥವಾ ಪರ್ಯಾಯವೇ ಅಥವಾ ಸಮಾನಾಂತರವೇ ಅಥವಾ ಪ್ರತಿಸ್ಪರ್ಧಿಗಳೇ ಅಥವಾ ಸಂಬಂಧವಿಲ್ಲವೇ….. ಧರ್ಮ ( ಮತ ) ಎಂಬುದು

ಬಸವ ಪಂಚಮಿ: ಒಂದು ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ

ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಆದರೆ ಸಾಂಪ್ರದಾಯವಾದಿಗಳು ಆ ಆಚರಣೆಗಳನ್ನು ತಿರುಚಿ ಅವುಗಳಿಗೆ ಧಾರ್ಮಿಕ ಮೌಢ್ಯದ ಹಿನ್ನೆಲೆಯನ್ನು ಹೆಣೆದಿದ್ದಾರೆ. ಕೇವಲ ಧಾರ್ಮಿಕ ಹಿನ್ನೆಲೆಯಷ್ಟೆಯಲ್ಲದೆ ಅನೇಕ ಬಗೆಯ ಮೌಢ್ಯಗಳನ್ನು ಜನಮನದಲ್ಲಿ ಬಿತ್ತಿದ್ದಾರೆ.

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದಿದ್ದಾರೆ. ಎಲ್ಲಾ ರೀತಿಯ ಅಸಮಾನತೆಯನ್ನು ಕೊನೆಗಾಣಿಸಿ ಸಮಾನತೆಯನ್ನು ತರುವುದು ನಮ್ಮ ಸಂವಿಧಾನದ

ಮೀಸಲಾತಿ ನೀತಿಯನ್ನು ಪುನರ್ ರಚಿಸಬೇಕಾದ ಅಗತ್ಯತೆ

ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಮೀಸಲಾತಿ ನೀತಿಯ ಅನುಷ್ಠಾನದಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಆದರೂ ಇಂದು ಹಲವು ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗಿವೆ. ಒಳಮೀಸಲಾತಿ, ಕೆನೆಪದರ ಬಡ್ತಿಯಲ್ಲಿ ಮೀಸಲಾತಿ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಎಂಬ ಪ್ರಶ್ನೆಗಳು ಕಾಡುತ್ತಿವೆ. ಮೀಸಲಾತಿ ಎಂದರೇನು