
ಹಾವೇರಿ: ಹಾವೇರಿ ಜಿಲ್ಲಾ ಬ್ಯಾಡಗಿ ತಾಲೂಕು ಮಾನವ ಬಂಧುತ್ವ ವೇದಿಕೆ ವತಿಯಿಂದ ನಾಗರ ಪಂಚಮಿ ಹಬ್ಬವನ್ನು ಬಸವ ಪಂಚಮಿ ಹಬ್ಬವನ್ನಾಗಿ ಅತ್ಯಂತ ಅರ್ಥ ಪೂರ್ಣವಾಗಿ ಆಚರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ ಮುಖಂಡರಾದ ಎಸ್.ಆರ್.ಪಾಟೀಲ್ ಹಾಗು ಪ್ರಕಾಶ್ ಬನ್ನಿಹಟ್ಟಿ, ಶಿವಪ್ಪ ಅಂಬ್ಲಿ, ಮಂಜುನಾಥ ಬೋವಿ, ಪ್ರಕಾಶ ಬಣಕಾರ, ಬ್ಯಾಡಗಿ ತಾಲೂಕ್ ಮಾನವ ಬಂದತ್ವ ವೇದಿಕೆಯ ಸಂಚಾಲಕ ದುರ್ಗೇಶ್ ಗೋಣಮ್ಮನವರ, ಬೀರಪ್ಪ ಮೆಡ್ಲೇರಿ ಯುವಕಾಂಗ್ರೆಸ್ ಅಧ್ಯಕ್ಷ ಬ್ಯಾಡಗಿ ಕುಮಾರ್, ಹಾವೇರಿ ಉದಯ್, ಚೌದ್ರಿ ಬಸವರಾಜ್ ತಡಸದ್, ಸೋಮಣ್ಣ ಖರ್ಚಡ್, ಜಗದೀಶ್ ಗೌಡ ಪಾಟೀಲ್, ಸುಮಂಗಲಕ್ಕ ರಾರಾವಿ ಇನ್ನೂ ಅನೇಕ ಮಾನವ ಬಂದುತ್ವ ವೇದಿಕೆಯ ಕಾರ್ಯಕರ್ತರು, ಕಾಂಗ್ರೆಸ್ ಪಕ್ಷದ ಮುಖಂಡರು ಭಾಗವಹಿಸಿ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟರು.

ನಾಗರ ಪಂಚಮಿಯಂದು ಹುತ್ತ, ಕಲ್ಲು ಮತ್ತು ಲೋಹದ ನಾಗರ ಮೂರ್ತಿಗಳಿಗೆ ಹಾಲನ್ನು ಎರೆಯುವ ಬದಲಾಗಿ ಬಡವರು, ಶ್ರಮಿಕರು, ಅಸಹಾಕರು, ಅಶಕ್ತರು, ರೋಗಿಗಳು ಮತ್ತು ಅನಾಥಾಶ್ರಮದಲ್ಲಿರುವ ವೃದ್ಧರಿಗೆ ಅಥವಾ ತಮ್ಮ ಮನೆಯಲ್ಲಿರುವ ಮಕ್ಕಳಿಗೆ ಹಾಲನ್ನು ಕುಡಿಸಿ ಎಂದು ಮಾನವ ಬಂಧುತ್ವ ವೇದಿಕೆ ಸಂಸ್ಥಾಪಕ ಸತೀಶ್ ಜಾರಕಿಹೊಳಿ ಕರೆನೀಡಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ ರಾಜ್ಯದ ವಿವಿಧೆಡೆ ಹಾಲನ್ನು ವ್ಯರ್ಥಮಾಡುವ ಬದಲು ಮಕ್ಕಳಿಗೆ, ರೋಗಿಗಳಿಗೆ ಮತ್ತು ವೃದ್ಧರಿಗೆ ನೀಡಲಾಗುತ್ತಿದೆ.