April 23, 2024 3:00 pm

ಕೋಳಿ ಮೊಟ್ಟೆ ಮತ್ತು ಆಹಾರದ ಹಕ್ಕು

ಬೆಂಗಳೂರು: ದಿನಾಂಕ 18/12/2021ರಂದು ಶನಿವಾರ ಸಂಜೆ 6:00 ಗಂಟೆಗೆ ಮಾನವ ಬಂಧುತ್ವ ವೇದಿಕೆ ವತಿಯಿಂದ ನಡೆಯಲಿರುವ 36ನೇ ವೆಬಿನಾರ್ ಸರಣಿಯಲ್ಲಿ “ಕೋಳಿ ಮೊಟ್ಟೆ ಮತ್ತು ಆಹಾರದ ಹಕ್ಕು” ವಿಷಯದ ಕುರಿತು ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ ಅಧ್ಯಕ್ಷ ಕೆ.ಎಸ್.ಶಿವರಾಮ್  ವಿಶೇಷ ಉಪನ್ಯಾಸ ನೀಡಲಿದ್ದಾರೆ. SFI ರಾಜ್ಯ ಕಾರ್ಯದರ್ಶಿ ಕೆ.ವಾಸುದೇವರೆಡ್ಡಿ, AIDSO ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಪ್ರತಿಕ್ರಿಯೆ ನೀಡಲಿದ್ದಾರೆ.

ಪ್ರತಿ ವಾರದ ಮಾನವ ಬಂಧುತ್ವ ವೇದಿಕೆ ಪ್ರಚಲಿತ ವಿಷಯಗಳ ಕುರಿತು ಬಂಧುತ್ವ ಬೆಳಕು ಹೆಸರಿನಲ್ಲಿ ಜೂಮ್ ಮೂಲಕ ವೆಬಿನಾರ್ ಆಯೋಜಿಸುತ್ತಿದೆ. ಇದುವರೆಗೆ ಕೊರೊನಾ, ಕೃಷಿ, ಆರೋಗ್ಯ, ಶಿಕ್ಷಣ ಮೊದಲಾದ ವಿಷಯಗಳ ಕುರಿತು ವೆಬಿನಾರ್ ನಡೆದಿವೆ. ಅಭಿವೃದ್ಧಿ ಮತ್ತು ರಾಜಕಾರಣ, ಜನತೆಯ ಕವಿ ಡಾ.ಸಿದ್ದಲಿಂಗಯ್ಯ, ಭಾರತದ ಪ್ರಜಾಪ್ರಭುತ್ವಕ್ಕೆ ನೆಹರು ಅವರ ಕೊಡುಗೆಗಳು, ಜಾತಿವಾರು ಆರ್ಥಿಕ ಸಾಮಾಜಿಕ ಸಮೀಕ್ಷೆ ಮತ್ತು ಸಾಮಾಜಿಕ ನ್ಯಾಯ, ಹಿಂದಿ ಹೇರಿಕೆಯ ಅಪಾಯಗಳು, ಸಾಹಿತ್ಯ ಮತ್ತು ಚಳುವಳಿಗೆ ಡಾ.ಸಿದ್ದಲಿಂಗಯ್ಯನವರ ಕೊಡುಗೆ, ಅತ್ಯಾಚಾರ: ಕಾನೂನು ಅಥವಾ ವ್ಯವಸ್ಥೆಯ ವೈಫಲ್ಯವೇ?, ಅಫ್ಘಾನಿಸ್ತಾನದ ತಾಲಿಬಾನ್ ಬೆಳವಣಿಗೆಗಳ ಸುತ್ತಮುತ್ತ, ಹೊಸ ಶಿಕ್ಷಣ ನೀತಿ: ತಳಸಮುದಾಯಗಳ ಮೇಲಿನ ಪರಿಣಾಮ, ಕೇಂದ್ರ ಸರ್ಕಾರದ ವಿದ್ಯುತ್ ಖಾಸಗೀಕರಣ ಮಸೂದೆ ಮತ್ತು ಅದರ ಪರಿಣಾಮಗಳು, ಪ್ರಸಕ್ತ ಕೃಷಿ ಬಿಕ್ಕಟ್ಟು ಮತ್ತು ಪರಿಹಾರ, 12,000 ವರ್ಷಗಳ ಇತಿಹಾಸ ಅಧ್ಯಯನ: ಇತಿಹಾಸವನ್ನು ತಿರುಚುವ ಪ್ರಯತ್ನ, ಕೊರೊನಾ ನೆಪದಲ್ಲಿ ಮಾನವ ಹಕ್ಕುಗಳ ದಮನ, ಹೊಸತನವಿಲ್ಲದ ರಾಷ್ಟ್ರೀಯ ಶಿಕ್ಷಣ ನೀತಿ, ಪ್ರತ್ಯೇಕ ಲಿಂಗಾಯತ ಧರ್ಮ ಕಾರ್ಯಸಾಧುವೇ?, ಮಹಾತ್ಮಾ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಬಿಜೆಪಿ ರಾಜಕಾರಣ, ಪಠ್ಯ ಪುಸ್ತಕಗಳ ಪರಿಷ್ಕರಣೆಯ ರಾಜಕಾರಣ, ಸೂಫಿ ಪ್ರೇಮ ತತ್ವ ಮತ್ತು ಸಂಗೀತ, ಜೈಭೀಮ್ ಕನ್ನಡ ಚಿತ್ರರಂಗಕ್ಕೆ ಕೊಟ್ಟ ಸಂದೇಶ, ಹಂಸಲೇಖ ಹೇಳಿಕೆಯ ವಿವಾದದ ಸುತ್ತ, ರೈತ ಚಳುವಳಿ ಮತ್ತು ಮುಂದಿರುವ ಸವಾಲುಗಳು, ಮೇಕೆದಾಟು ಮತ್ತು ಕರ್ನಾಟಕದ ನೀರಿನ ಅಧಿಕಾರ ಮೊದಲಾದ ವಿಷಯಗಳ ಕುರಿತು ವೆಬಿನಾರ್ ಆಯೋಜಿಸಲಾಗಿದ್ದು, ಕೋಳಿ ಮೊಟ್ಟೆ ಮತ್ತು ಆಹಾರದ ಹಕ್ಕು ವಿಷಯ ಕುರಿತ ವೆಬಿನಾರ್ 36ನೆಯದಾಗಿದೆ.  

ವೆಬಿನಾರ್ ನಲ್ಲಿ ನೇರವಾಗಿ ಭಾಗವಹಿಸಲು ಸಾಧ್ಯವಾಗದವರು ಮಾನವ ಬಂಧುತ್ವ ವೇದಿಕೆ – ಕರ್ನಾಟಕ ಫೇಸ್ ಬುಕ್ ಲೈವ್ ನಲ್ಲಿ ಕೂಡ ನೇರಪ್ರಸಾರವನ್ನು ವೀಕ್ಷಿಸಲು ಅವಕಾಶವಿರುತ್ತದೆ. ವೆಬಿನಾರ್ ನಲ್ಲಿ ಭಾಗವಹಿಸುವರು ವಿಷಯ ತಜ್ಞರ ಜೊತೆಗೆ ತಮಗೆ ಎದುರಾದ ಅನುಮಾನಗಳ ಕುರಿತ ಪ್ರಶ್ನೆಗಳನ್ನು ಕೂಡ ಕೇಳಲು ಅವಕಾಶವಿದೆ. ವೆಬಿನಾರ್ ನಂತರ ಈ ವಿಡಿಯೋವನ್ನು ಮಾನವ ಬಂಧುತ್ವ ವೇದಿಕೆಯ MBV Karnataka ಯೂಟ್ಯೂಬ್ ವಾಹಿನಿಯಲ್ಲಿ ಕೇಳಲು ಅವಕಾಶವಿದೆ.

ಆಸಕ್ತರು ಶನಿವಾರ 18/12/2021ರಂದು ಸಂಜೆ 6:00 ಗಂಟೆಗೆ Join Zoom Meeting ಐಡಿ https://us02web.zoom.us/j/86465689981?pwd=WlVnSzVyQitTNnhSMmRUYUpyaTBDQT09 ಬಳಸಿ ವೆಬಿನಾರ್ ನಲ್ಲಿ ಭಾಗವಹಿಸಬಹುದು. Meeting ID: 864 6568 9981, Passcode: 12345

Share:

Leave a Reply

Your email address will not be published. Required fields are marked *

More Posts

On Key

Related Posts

ಗಾಂಧಿ – ಅಂಬೇಡ್ಕರ್ ಜುಗಲ್ಬಂದಿ 

[ 8.1.2024 ರಂದು ಮೈಸೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರದ ವತಿಯಿಂದ  ಇತಿಹಾಸತಜ್ಞ ರಾಮಚಂದ್ರ ಗುಹಾ ಅವರೊಂದಿಗೆ ನಡೆದ “ಗಾಂಧಿ-ಅಂಬೇಡ್ಕರ್ ಪ್ರಸ್ತುತತೆ” ಮಾತುಕತೆಯ ಸಂದರ್ಭದಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ವಿಸ್ತೃತ ಅಕ್ಷರ ರೂಪ]  ಇತಿಹಾಸತಜ್ಞ ರಾಮಚಂದ್ರ ಗುಹಾ ಅವರನ್ನು

ನ್ಯಾಯಾಂಗದ ವಿಸ್ತರಣೆ ಮತ್ತು ಸಾಧನೆ

ಸಮಾಜದ ಜನರ ನಡುವೆ ಬೆಳೆದು ಬರುವ ವ್ಯಾಜ್ಯಗಳನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳಬೇಕು. ಶಾಂತಿ ಇರುವೆಡೆಯಲ್ಲಿ ಅಭಿವೃದ್ಧಿ ಇರುತ್ತದೆ. ಜನರಿಗೆ ನ್ಯಾಯ ಸಿಕ್ಕಿದರೆ ತೃಪ್ತಿಪಡುತ್ತಾರೆ. ನ್ಯಾಯ ದೊರಕಿಸಿಕೊಳ್ಳುವಲ್ಲಿ ಸೋತರೆ ಅನ್ಯ ಮಾರ್ಗಗಳನ್ನು ಅನುಸರಿಸುತ್ತಾರೆ. ಮುಂದುವರೆದು ದಂಗೆಯೇಳುತ್ತಾರೆ. ಯಾವುದೇ ರೀತಿಯ ಭೇದಭಾವವಿಲ್ಲದೆ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ

ಮಂಡ್ಯದ ಜನತೆಗೆ ಕರಾವಳಿಯ ಬಂಧುವೊಬ್ಬ ಬರೆದ ಪತ್ರ

ಮಂಗಳೂರಿನಿಂದ ಶ್ರೀ ಎಂ. ಜಿ. ಹೆಗಡೆ ಯವರು ನಮಗೆ, ಅಂದರೆ ಮಂಡ್ಯ ಜಿಲ್ಲೆಯವರಿಗೆ ತಮ್ಮ ಅನುಭವದ ಹಿನ್ನೆಲೆಯಲ್ಲಿ ಬರೆದ ಪತ್ರ ಇಲ್ಲಿದೆ. ದಯಮಾಡಿ ಶಾಂತಚಿತ್ತರಾಗಿ ಓದಿ. ಯಾರದೋ ದಾಳಕ್ಕೆ ನಮ್ಮ ನಿಮ್ಮ ಮಕ್ಕಳು ಬಲಿಯಾಗುವುದು ಬೇಡ. ವಿವೇಕದಿಂದ  ವರ್ತಿಸೋಣ. ಸಕ್ಕರೆ ನಾಡಿನ

ಅಂಬೇಡ್ಕರರ ‘ಹಿಂದೂ ಧರ್ಮದ ಒಗಟುಗಳು’ ಪ್ರಕಟವಾಗಿ ದೊಡ್ಡ ಅಲ್ಲೋಲ ಕಲ್ಲೋಲ ಹುಟ್ಟು ಹಾಕಿತ್ತು

1987ರಲ್ಲಿ ಅಂಬೇಡ್ಕರರ ‘ಹಿಂದೂ ಧರ್ಮದ ಒಗಟುಗಳು’ ಪ್ರಕಟವಾಗಿ ದೊಡ್ಡ ಅಲ್ಲೋಲ ಕಲ್ಲೋಲ ಹುಟ್ಟು ಹಾಕಿತ್ತು. ಅದರಲ್ಲೂ ಆ ಕೃತಿಯ ‘ರಾಮ-ಕೃಷ್ಣರ ಒಗಟುಗಳು’ ಭಾಗ. ಮಹಾರಾಷ್ಟ್ರದಲ್ಲಂತೂ 1988ರ ಜನವರಿಯಲ್ಲಿ ಆ ಕೃತಿಯನ್ನೇ ಸುಟ್ಟು ಹಾಕಿದ್ದರು. ಆ ಸಂದರ್ಭದಲ್ಲಿ ಕನ್ನಡದ ಓದುಗರಿಗೂ ಆ ಕೃತಿ

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಹೇಳಿರುವ Educate, Unite ಮತ್ತು Agitate ಪದಗಳ ಅರ್ಥವೇನು?

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಕುರಿತು ಮಾತನಾಡುವ ಬಹುತೇಕರು ಅವರು ಹೇಳಿರುವ Educate, Unite ಮತ್ತು Agitate ಪದಗಳನ್ನು ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂದು ವಿವರಿಸಿದ್ದಾರೆ. ಆರಂಭದಲ್ಲಿ ಅಂಬೇಡ್ಕರ್ ಅವರ ಚಿಂತನೆಯನ್ನು ಸೂತ್ರ ರೂಪದಲ್ಲಿ ಸರಳವಾಗಿ ವಿವರಿಸುವ ಸಲುವಾಗಿ ಶಿಕ್ಷಣ, ಸಂಘಟನೆ