ಚಿಕ್ಕಮಗಳೂರು: ಮಾನವ ಬಂಧುತ್ವ ವೇದಿಕೆ ವತಿಯಿಂದ “ಮೌಡ್ಯದ ಕತ್ತಲೆಯಲ್ಲಿ ವೈಚಾರಿಕ ದೀಪಾವಳಿ” ಕಾರ್ಯಕ್ರಮವನ್ನು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯ ಗಾಳಿಹಳ್ಳಿ ಬಳಿಯ ಕ್ರೈಸ್ತ ಮತ್ತು ಹಿಂದೂ ರುದ್ರಭೂಮಿಯಲ್ಲಿ ಆಯೋಜಿಸಲಾಗಿತ್ತು.
ನಾಗರ ಪಂಚಮಿಯ ಬದಲಾಗಿ ಬಸವ ಪಂಚಮಿ ಕಾರ್ಯಕ್ರಮವನ್ನು ಮಾನವ ಬಂಧುತ್ವ ವೇದಿಕೆ ವತಿಯಿಂದ ರಾಜ್ಯದಾದ್ಯಂತ ಆಚರಿಸಲಾಗುತ್ತದೆ. ನಾಗರ ಪಂಚಮಿ ಪ್ರಯುಕ್ತ ಕಲ್ಲಿನ ಹಾವಿನ ಮೂರ್ತಿಗಳಿಗೆ ಮತ್ತು ಹುತ್ತಕ್ಕೆ ಹಾಲನೆರೆಯುವ ಬದಲು ಮಕ್ಕಳು, ರೋಗಿಗಳಿಗೆ ಹಾಲು ವಿತರಿಸುವ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಅದೇ ಮಾದರಿಯಲ್ಲಿ ಮೌಡ್ಯವನ್ನು ವಿರೋಧಿಸುವ ನಿಟ್ಟಿನಲ್ಲಿ ಮೌಡ್ಯದ ಕತ್ತಲೆಯಲ್ಲಿ ವೈಚಾರಿಕ ದೀಪಾವಳಿ ಕಾರ್ಯಕ್ರಮವನ್ನು ಸ್ಮಶಾನದಲ್ಲಿ ಆಚರಿಸಲಾಯಿತು. ಈ ಮೂಲಕ ಜನರಲ್ಲಿರುವ ಮೌಡ್ಯವನ್ನು ತೊಡೆದು ಹಾಕಲು ಯತ್ನಿಸಲಾಯಿತು.
