ವೆಬಿನಾರ್ ನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಲೇಖಕ, ಚಿಂತಕ, ಸಂಶೋಧಕ ಡಾ.ಬಂಜಗೆರೆ ಜಯಪ್ರಕಾಶ್ ಅವರು ವಿಷಯವನ್ನು ಮಂಡಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಜನವಾದಿ ಮಹಿಳಾ ಸಂಘಟನೆಯ ನಾಯಕಿ, ಜನಪರ ಚಳವಳಿಗಾರ್ತಿ ಕೆ.ಎಸ್.ವಿಮಲ ಭಾಗವಹಿಸಲಿದ್ದಾರೆ.
ಪ್ರತಿ ವಾರದ ಮಾನವ ಬಂಧುತ್ವ ವೇದಿಕೆ ಪ್ರಚಲಿತ ವಿಷಯಗಳ ಕುರಿತು ಬಂಧುತ್ವ ಬೆಳಕು ಹೆಸರಿನಲ್ಲಿ ಜೂಮ್ ಮೂಲಕ ವೆಬಿನಾರ್ ಆಯೋಜಿಸುತ್ತಿದೆ. ಇದುವರೆಗೆ ಕೊರೊನಾ, ಕೃಷಿ, ಆರೋಗ್ಯ, ಶಿಕ್ಷಣ, ಹೊಸ ಶಿಕ್ಷಣ ನೀತಿ ಮೊದಲಾದ ವಿಷಯಗಳ ಕುರಿತು ವೆಬಿನಾರ್ ಆಯೋಜಿಸಲಾಗಿದ್ದು, ಪಠ್ಯ ಪುಸ್ತಕ ಪರಿಷ್ಕರಣೆಯ ರಾಜಕಾರಣ ವಿಷಯ ಕುರಿತ ವೆಬಿನಾರ್ 30ನೆಯ ವೆಬಿನಾರ್ ಆಗಿದೆ.
ವೆಬಿನಾರ್ ನಲ್ಲಿ ನೇರವಾಗಿ ಭಾಗವಹಿಸಲು ಸಾಧ್ಯವಾಗದವರು ಮಾನವ ಬಂಧುತ್ವ ವೇದಿಕೆ – ಕರ್ನಾಟಕ ಫೇಸ್ ಬುಕ್ ಲೈವ್ ನಲ್ಲಿ ಕೂಡ ನೇರಪ್ರಸಾರವನ್ನು ವೀಕ್ಷಿಸಲು ಅವಕಾಶವಿರುತ್ತದೆ. ವೆಬಿನಾರ್ ನಲ್ಲಿ ಭಾಗವಹಿಸುವರು ವಿಷಯ ತಜ್ಞರ ಜೊತೆಗೆ ತಮಗೆ ಎದುರಾದ ಅನುಮಾನಗಳ ಕುರಿತ ಪ್ರಶ್ನೆಗಳನ್ನು ಕೂಡ ಕೇಳಲು ಅವಕಾಶವಿದೆ. ವೆಬಿನಾರ್ ನಂತರ ಈ ವಿಡಿಯೋವನ್ನು ಮಾನವ ಬಂಧುತ್ವ ವೇದಿಕೆಯ MBV Karnataka ಯೂಟ್ಯೂಬ್ ವಾಹಿನಿಯಲ್ಲಿ ಕೇಳಲು ಅವಕಾಶವಿದೆ. ಆಸಕ್ತರು ಶನಿವಾರ 6/11/2021ರಂದು ಸಂಜೆ 6 ಗಂಟೆಗೆ Join Zoom Meeting ಐಡಿ https://us02web.zoom.us/j/86465689981?pwd=WlVnSzVyQitTNnhSMmRUYUpyaTBDQT09
ಬಳಸಿ ವೆಬಿನಾರ್ ನಲ್ಲಿ ಭಾಗವಹಿಸಬಹುದು. Meeting ID: 864 6568 9981, Passcode: 12345