October 1, 2023 8:24 am

ರಾಜ್ಯದಾದ್ಯಂತ ಮಾನವ ಬಂಧುತ್ವ ವೇದಿಕೆ ವತಿಯಿಂದ ಬಸವ ಪಂಚಮಿ ಆಚರಣೆ

ಬೆಂಗಳೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿಯವರ ನೇತೃತ್ವದ ಮಾನವ ಬಂಧುತ್ವ ವೇದಿಕೆ ವತಿಯಿಂದ ಬಸವ ಪಂಚಮಿ ಆಚರಿಸಲಾಗಿದೆ. ಕಲ್ಲ ನಾಗರ ಕಂಡರೆ ಹಾಲನೆರೆಯೆಂಬರು, ದಿಟದ ನಾಗರ ಕಂಡರೆ ಕೊಲ್ಲೆಂಬರು ಎಂಬ ವಚನದ ಆಶಯದಂತೆ ಹಾಲನ್ನು ವ್ಯರ್ಥಗೊಳಿಸುವ ಬದಲು ಮಕ್ಕಳಿಗೆ ಕುಡಿಸುವ ಮೂಲಕ ಬಸವ ಪಂಚಮಿಯನ್ನು ಆಚರಿಸಲಾಗಿದೆ.

ಬ್ಯಾಡಗಿಯಲ್ಲಿ ಬಸವ ಪಂಚಮಿ ಆಚರಣೆ

ಬ್ಯಾಡಗಿ ಪಟ್ಟಣದ ವಾಲ್ಮೀಕಿ ನಗರದಲ್ಲಿ ಬ್ಯಾಡಗಿ ತಾಲೂಕ ಮಾನವ ಬಂಧುತ್ವ ವೇದಿಕೆಯ ಸಂಚಾಲಕ ಪ್ರಕಾಶ ಬ ಬಣಕಾರ ಹಾಗೂ ಎಸ್.ಆರ್.ಪಾಟೀಲ ಅಭಿಮಾನಿ ಬಳಗದ ಕಲ್ಲಿಗೆ ಹಾಲು ಎರೆಯುವ ಬದಲು ಬಡವರಿಗೆ ನಿರ್ಗತಿಕರಿಗೆ ಹಾಲು ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಎಸ್.ಆರ್.ಪಾಟೀಲ, ಮಂಜುನಾಥ ಭೋವಿ, ಪ್ರಕಾಶ ಬಣಕಾರ, ಪರಶುರಾಮ ಗೆಜ್ಜಳ್ಳಿ, ಮಹೇಶ ಉಜನಿ, ರಮೇಶ ಮೊಟೇಬೆನ್ನೂರ, ರಾಜು ಶಿಗ್ಲಿ, ಯೂನಿಸಖಾನ ಸವಣೂರು, ಸೋಮಣ್ಣ ಕರ್ಚಡ,  ಶಿವಣ್ಣ ಅಂಬ್ಲಿ, ರಪೀಕ್ ಮುದಗಲ್, ನಜೀರ ಶೇಖ್, ಮಂಗಳಾ ಗೆಜ್ಜಳ್ಳಿ ಇನ್ನೂ ಮುಂತಾದವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ರಾಣಿಬೆನ್ನೂರು ನಗರದಲ್ಲಿ ಬಸವ ಪಂಚಮಿ

ರಾಣಿಬೆನ್ನೂರು ತಾಲೂಕ ಮಾನವ ಬಂಧುತ್ವ ವೇದಿಕೆಯ ತಾಲೂಕು ಸಂಚಾಲಕ ಕರಬಸು ಕೋಲಕಾರ ವತಿಯಿಂದ ಬಡವರಿಗೆ, ನಿರ್ಗತಿಕರಿಗೆ ಹಾಲು ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಚಂದ್ರನ ಬೇಡರ ರವೀಂದ್ರ ಗೌಡ ಪಾಟೀಲ, ಮಂಜುನಾಥ  ಮುಂತಾದವರು ಪಾಲ್ಗೊಂಡಿದ್ದರು.

ರಾಣಿಬೆನ್ನೂರಿನ ಮುಸ್ಟೂರು ಗ್ರಾಮದಲ್ಲಿ ಬಸವ ಪಂಚಮಿ

ರಾಣಿಬೆನ್ನೂರು ತಾಲೂಕು ಮಾನವ ಬಂಧುತ್ವ ವೇದಿಕೆಯ ಸಂಚಾಲಕ ಕರಬಸಪ್ಪ ಕೂಲೇರ ನೇತೃತ್ವದಲ್ಲಿ ಕಲ್ಲಿಗೆ ಹಾಲು ಎರೆಯುವ ಬದಲು ಬಡವರಿಗೆ ನಿರ್ಗತಿಕರಿಗೆ ಹಾಲು ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಚಂದ್ರನ ಬೇಡರ, ರವೀಂದ್ರ ಗೌಡ ಪಾಟೀಲ, ಹರಿಹರ ಗೌಡ್ರ,  ಮಂಜುನಾಥ, ಶಿವಕುಮಾರ ಮತ್ತು  ಮುಷ್ಟೂರು ಗ್ರಾಮದ ಗ್ರಾಮಸ್ಥರು  ಪಾಲ್ಗೊಂಡಿದ್ದರು.

ಮುಧೋಳದಲ್ಲಿ ಬಸವ ಪಂಚಮಿ ಆಚರಣೆ

ಮುಧೋಳ ತಾಲೂಕಿನ ಬಿದರಿ ಗ್ರಾಮದಲ್ಲಿ ಮಾನವ ಬಂಧುತ್ವ ವೇದಿಕೆ ಮತ್ತು ಶ್ರೀ ಕ್ರಾಂತಿವೀರ ಸಿಂಧೂರ ಲಕ್ಷ್ಮಣ ಯುವಸೇನೆ ಬಾಗಲಕೋಟೆ ನೇತೃತ್ವದಲ್ಲಿ ಬಸವ ಪಂಚಮಿ ಆಚರಿಸಲಾಯಿತು.

ಬೈಲಪ್ಪ ಶಿರಗುಂಪಿ, ಸುಭಾಷ ಗಸ್ತಿ, ಲಕ್ಷ್ಮಣ ಮಾಲಗಿ, ಹಣಮಂತ ಕುಡಚಿ, ರಂಗಪ್ಪ ಪಾಟೀಲ, ಹಣಮಂತ ಕಮದಿನ್ನಿ, ಬಸಪ್ಪ ತಿಗಳಪನವರ ಸೇರಿ ಗ್ರಾಮದ ಪ್ರಮುಖರು ಇದ್ದರು.

ಮಂಡ್ಯದಲ್ಲಿ‌ ಬಸವ ಪಂಚಮಿ‌ ಆಚರಣೆ

ಮಾನವ ಬಂಧುತ್ವ ವೇದಿಕೆ ಮಂಡ್ಯ ಜಿಲ್ಲಾ ಘಟಕದ ವತಿಯಿಂದ ಮಂಡ್ಯ ತಾಲ್ಲೂಕಿನ ತುಂಬಕರೆ ಗ್ರಾಮದ ಅಲೆಮಾರಿ ಜನಾಂಗದ ಶಿಬಿರದಲ್ಲಿ ಬಸವಪಂಚಮಿ ಅಂಗವಾಗಿ ಹಾಲು, ಬಿಸ್ಕೇಟ್ ವಿತರಿಸಲಾಯಿತು.

ವೇದಿಕೆಯ ಜಿಲ್ಲಾಧ್ಯಕ್ಷ ಡಿ.ದೇವರಾಜ್ ಕೊಪ್ಪ ಮಾತನಾಡಿ, ಇಂದು ನಾಗರಪಂಚಮಿ ನೆಪದಲ್ಲಿ ಮೌಢ್ಯಾಚರಣೆ ವ್ಯಾಪಕವಾಗಿ ನಡೆಯುತ್ತಿದೆ. ಹಾವು ಹಾಲುಕುಡಿಯುತ್ತದೆ ಎಂದು ನಂಬಿ ಹಾಲನ್ನು ಹುತ್ತಕ್ಕೆ ಸುರಿಯುತ್ತಾರೆ. ಆದರೆ ಹಾವು ಹಾಲು ಕುಡಿಯುವುದಿಲ್ಲವೆಂಬ ವೈಜ್ಞಾನಿಕ ಸತ್ಯ ಜನರಿಗೆ ತಿಳಿದಿಲ್ಲ ಎಂದರು.

ಹಾವು ಮಾಂಸಾಹಾರ ತಿನ್ನುವ ಸರೀಸೃಪ, ಅದಕ್ಕೆ ಕಿವಿ ಇಲ್ಲ, ಪುಂಗಿ ಊದಿದರೆ ಅದಕ್ಕೆ ಕೇಳಲ್ಲ, ಭೂಮಿಯ ಕಂಪನದಿಂದ ಅದು ಶತೃಗಳ ಬರುವಿಕೆ ಅರಿಯುತ್ತದೆ. ತಿಳುವಳಿಕೆ ಇಲ್ಲದವರು ಮೌಢ್ಯಾಚರಣೆ ಮಾಡುತ್ತಾರೆಂದರೆ ವಿದ್ಯಾವಂತರೂ ಇದನ್ನೆ ಆಚರಿಸುವುದು ಅಪಹಾಸ್ಯದ ಸಂಗತಿ ಎಂದರು.

ಕಾಂಗ್ರೆಸ್ ಮುಖಂಡ ಸಿ.ಎಂ.ದ್ಯಾವಪ್ಪ, ವಕೀಲ ಸುಂಡಹಳ್ಳಿ ಮಂಜುನಾಥ್ ಮಾತನಾಡಿದರು, ಗಾಯಕ ಹುರುಗಲವಾಡಿ ರಾಮಯ್ಯ ಬಡ ಮಕ್ಕಳ ಬವಣೆಯ ಗೀತೆ ಹಾಡಿದರು.

ಮಾರ್ಗದರ್ಶಿ ಟ್ರಸ್ಟ್ ಅಧ್ಯಕ್ಷ ಕೆ.ಸಿ. ಲೋಕೇಶ್, ಹನಿಯಂಬಾಡಿ ಶೇಖರ್, ವೈರಮುಡಿ, ಪರಸ್ಪರ ಸಂಸ್ಥೆಯ ಶೃತಿ, ಮೀನಾ ಉಪಸ್ಥಿತರಿದ್ದರು.

ಬೆಂಗಳೂರಿನಲ್ಲಿ ಬಸವ ಪಂಚಮಿ ಆಚರಣೆ

ಬೆಂಗಳೂರಿನ ಕೆ.ಆರ್.ಪುರದ, ಸಿ.ಟಿ.ಪಾಳ್ಯದಲ್ಲಿ ಶಿಶುಮಂದಿರದ ಮಕ್ಕಳಿಗೆ ಬಸವ ಪಂಚಮಿಯ ಅಂಗವಾಗಿ, MBV ಸ್ಥಳೀಯ ಸಂಚಾಲಕ ಜಯಪ್ರಕಾಶ್ ನೇತೃತ್ವದಲ್ಲಿ ಹಾಲನ್ನು ವಿತರಿಸಿದರು.

ಬೇಲೂರಿನಲ್ಲಿ ಬಸವ ಪಂಚಮಿ ಆಚರಣೆ

ಬೇಲೂರಿನ ಬಸ್‌ ನಿಲ್ದಾಣ ಬಳಿ ಇರುವ ಗುಡಿಸಲು ವಾಸಿಗಳಿಗೆ ಬಿಸ್ಕತ್, ಹಾಲು-ಹಣ್ಣು ಕೊಡುವ ಮೂಲಕ ನಾಗರ ಪಂಚಮಿ ಯನ್ನು ಬಸವ ಪಂಚಮಿಯನ್ನಾಗಿ ಆಚರಿಸಲಾಯಿತು. ಯಾಕೆ ಹುತ್ತಕ್ಕೆ ಹಾಲೆರೆಯಬಾರದು ಎಂಬ ವೈಜ್ಞಾನಿಕ ಸತ್ಯವನ್ನ ತಿಳಿಸುವ ಸರಳ ಕಾರ್ಯಕ್ರಮವನ್ನು  ಹಮ್ಮಿಕೊಳ್ಳಲಾಗಿತ್ತು.

ಹಾವೇರಿಯಲ್ಲಿ ಬಸವ ಪಂಚಮಿ ಆಚರಣೆ

ಹಾವೇರಿ ಜಿಲ್ಲಾ ಶಿಗ್ಗಾಂವ ತಾಲ್ಲೂಕು ಮಾನವಬಂಧುತ್ವವೇದಿಕೆ ಸಮಿತಿ ವತಿಯಿಂದ ಶಿಗ್ಗಾಂವ ನಗರದ ಅಲೆಮಾರಿ ಸಮುದಾಯದ  ಮಕ್ಕಳಿಗೆ ಮಾಸ್ಕ್ ಹಾಗೂ ಹಾಲನ್ನು ವಿತರಿಸುವ ಮೂಲಕ ನಾಗರ ಪಂಚಮಿಯನ್ನು  ಬಸವ ಪಂಚಮಿಯಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಶಿಗ್ಗಾಂವ ತಾಲೂಕ ಮಾನವ ಬಂಧುತ್ವ ವೇದಿಕೆಯ ಸಂಚಾಲಕ ವಿಶಾಲ ಮರಾಠೆ ಮಕ್ಕಳಿಗೆ ಹಾಲು ಹಾಗೂ ಮಾಸ್ಕ್ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಜಿಲ್ಲಾ ಸಂಚಾಲಕ ಪ್ರಕಾಶ ಹಾದಿಮನಿ ಮಾತನಾಡಿ, ದೇವರನ್ನು ನಂಬುವುದರ ಜೊತೆಗೆ ಮೌಢ್ಯವನ್ನು ತೊಡೆದು ಹಾಕುವ ಅನಿವಾರ್ಯತೆ ಇದೆ. ದೇಶದಲ್ಲಿ ಅನೇಕ ನಿರ್ಗತಿಕ ಮಕ್ಕಳು ಅಪೌಷ್ಠಿಕತೆಯಿಂದ ಸಾವನ್ನು ಹೊಂದುವ ಪರಿಸ್ಥಿತಿ ಇದೆ. ಹಾಗಾಗಿ ಹಾಲನ್ನು ಇಂತಹ ಮಕ್ಕಳಿಗೆ ನೀಡಿದರೆ ಅನುಕೂಲ ಎಂದರು.

ಶಿಗ್ಗಾಂವಿಯ ಭರಮಜ್ಜ ನವಲಗುಂದ ಮಕ್ಕಳಿಗೆ ಹಾಲು ವಿತರಿಸಿ ಮೌಢ್ಯತೆಯ ಕುರಿತು ಮಾತನಾಡಿದರು. ನ್ಯಾಯವಾದಿಗಳಾದ ರಾಗಿ ವಕೀಲ, ಬಸವರಾಜ ಜವಳಗಟ್ಟಿ, ಬಸನಗೌಡ ಸಣ್ಣಗೌಡ್ರ, ಮಾನವ ಬಂಧುತ್ವ ವೇದಿಕೆಯ ತಾಲೂಕ ಪಧಾಧಿಕಾರಿಗಳಾದ ಸುನೀಲ ಬಂಡಿವಡ್ಡರ, ಮುತ್ತುರಾಜ ಗೊಟಗೋಡಿ ಇದ್ದರು. ತಾಲೂಕ ಸಂಚಾಲಕ ವಿಶಾಲ ಮರಾಠೆ ವಂದಿಸಿದರು.

ಹಾವೇರಿಯ ವೃದ್ಧಾಶ್ರಮದಲ್ಲಿ ಬಸವ ಪಂಚಮಿ ಆಚರಣೆ

ಹಾವೇರಿ ನಗರದ ಶಕ್ತಿ ವೃದ್ಧಾಶ್ರಮದಲ್ಲಿ ಹಾವೇರಿ   ತಾಲೂಕು ಮಾನವ ಬಂಧುತ್ವ ವೇದಿಕೆ ಸಂಚಾಲಕ ಮಾಲತೇಶ ಅಂಗೊರ ನೇತೃತ್ವದಲ್ಲಿ  ಕಲ್ಲಿಗೆ ಹಾಲು ಎರೆಯುವ ಬದಲು ಬಡವರಿಗೆ ನಿರ್ಗತಿಕರಿಗೆ ಹಾಲು ವಿತರಣಾ ಕಾರ್ಯಕ್ರಮದ ಮೂಲಕ ಬಸವ ಪಂಚಮಿಯನ್ನು ಆಚರಿಸಲಾಯಿತು. 

ಕಾರ್ಯಕ್ರಮದಲ್ಲಿ ಶಿಗ್ಗಾವಿ ಜಿಲ್ಲಾ ಸಂಚಾಲಕ ಪ್ರಕಾಶ್ ಹಾದಿಮನಿ, ರಮೇಶ ಅನವಟ್ಟ, ನಾಶಿರಖಾನ ಪಠಾಣ ಮಾತನಾಡಿದರು. ನಾಗರಾಜ ಬಡ್ಡಮ್ಮನ್ನವರು ಮಾಲತೇಶ ಗಾಳ್ಲೆಮ್ಮನವರ ಸೇರಿದಂತೆ ಅನೇಕ ಮುಂಖಡರು ಪಾಲ್ಗೊಂಡಿದ್ದರು.

ಹಿರೇಕೆರೂರಿನಲ್ಲಿ ಬಸವ ಪಂಚಮಿ ಆಚರಣೆ

ಹಿರೇಕೆರೂರು ಹಾಗೂ ರಟ್ಟಿಹಳ್ಳಿ ತಾಲೂಕಿನ ಶಿರಗಂಬಿ ಪ್ರೌಢಶಾಲೆಯ ಮಕ್ಕಳಿಗೆ ನಾಗರ ಪಂಚಮಿಯ ಪ್ರಯುಕ್ತ ಮೂಢನಂಬಿಕೆಯನ್ನು ಹೋಗಲಾಡಿಸಲು ಹಾಲು ವಿತರಿಸುವ  ಕಾರ್ಯಕ್ರಮ ಬಸವ ಪಂಚಮಿಯನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಮಾನವ ಬಂದುತ್ವ ವೇದಿಕೆಯ ಹಿರೇಕೆರೂರು ತಾಲೂಕ ಸಂಚಾಲಕ, ರವೀಂದ್ರ ನಾಗೇಂದ್ರಪ್ಪ ಮದ್ನಳ್ಳಿ ಮೂಢನಂಬಿಕೆಯನ್ನು ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಧರ್ಮ ಗೌಡ ಸೊರಟೂರ್, ಸದಸ್ಯರಾದ ಪ್ರಶಾಂತ ಮಾಳಗಿ, ಮುಖಂಡ ಶಿವನಗೌಡ ಸೊರಟೂರ್ ಹಾಗೂ ಧರ್ಮಪ್ಪ ಗುಂಗರಗೊಪ್ಪ ಉಪಸ್ಥಿತರಿದ್ದರು.

ಅರಳಿಕಟ್ಟೆಯಲ್ಲಿ ಬಸವ ಪಂಚಮಿ ಆಚರಣೆ

ಬೆಂಗಳೂರಿನ ಅರಳಿಕಟ್ಟೆಯಲ್ಲಿ ಬಸವ ಪಂಚಮಿ ಮೂಲಕ ಹಾಲು ಮತ್ತು ಪುಸ್ತಕಗಳನ್ನು ಬಡ ಮಕ್ಕಳಿಗೆ ವಿತರಿಸಿದರು. ಆಲ್ಬೂರು ಶಿವರಾಜ್, ಲಯನ್ಸ್ ಕ್ಲಬ್ ನ ಸದಸ್ಯರಾದ ಪ್ರಕಾಶ್, ರವೀಶ್, ಯಶವಂತ್, ಕೆ.ಜೆ.ವಿ.ಎಸ್.ನ ಮಂಜಪ್ಪ, ಪತ್ರಕರ್ತ ರಾಜಣ್ಣ ಇದ್ದರು.

ದುಪದಾಳ್ ನಲ್ಲಿ ಬಸವ ಪಂಚಮಿ ಆಚರಣೆ

ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲ್ಲೂಕು ಘಟಕ ಹಾಗೂ ಮಾನವ ಬಂದುತ್ವ ವೇದಿಕೆ ದುಪದಾಳ ಘಟಕ ವತಿಯಿಂದ ಪಟ್ಟಣದ ಕೆ.ಎಚ್.ಐ. ಆಸ್ಪತ್ರೆಯಲ್ಲಿನ ಬಡ ರೋಗಿಗಳಿಗೆ ಯುವ ನಾಯಕ ರಾಹುಲ್ ಜಾರಕಿಹೊಳಿ ಹಾಲು, ಹಣ್ಣು ವಿತರಿಸಿ ಬಸವ ಪಂಚಮಿ ಆಚರಿಸಿದರು.

ತುಕ್ಕಾನಟ್ಟಿಯ ಬಾಗೇವಾಡಿ ಫೌಂಡೇಶನ್, ದುಪದಾಳದ ಅಭಾಜಿ ಕೆರಿಯರ್ ಅಕಾಡೆಮಿ, ಮಹಾಲಕ್ಷ್ಮಿ ಪತ್ತಿನ ಸಹಕಾರಿ ಸಂಘದ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.

ರಾಯಬಾಗದಲ್ಲಿ ಬಸವ ಪಂಚಮಿ

ಮಾನವ ಬಂಧುತ್ವ ವೇದಿಕೆಯ ಶ್ರವಣ ದೇವಮಾನೆ ನೇತೃತ್ವದಲ್ಲಿ ರಾಯಬಾಗ ಪಟ್ಟಣದಲ್ಲಿ ಬಡಮಕ್ಕಳಿಗೆ ಹಾಗೂ ಬಡಜನರಿಗೆ ಹಾಲು ವಿತರಿಸುವ ಮೂಲಕ  ಬಸವ ಪಂಚಮಿಯನ್ನು ಆಚರಿಸಲಾಯಿತು.  

ಶಿವಮೊಗ್ಗದಲ್ಲಿ ಬಸವ ಪಂಚಮಿ ಆಚರಣೆ

ಶಿವಮೊಗ್ಗ ಮಾನವ ಬಂಧುತ್ವ ವೇದಿಕೆ ವತಿಯಿಂದ ಬಸವ ಪಂಚಮಿ ಪ್ರಯುಕ್ತ ಮಕ್ಕಳಿಗೆ ಹಾಲು, ಬಾಳೆಹಣ್ಣು, ಬ್ರೆಡ್ ಅನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕರು‌ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ಶಿರಾ‌ದಲ್ಲಿ ಬಸವ ಪಂಚಮಿ‌ ಆಚರಣೆ

ಶಿರಾ ನಗರದಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಬಸವ ಪಂಚಮಿ ಪ್ರಯುಕ್ತ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಹಿಂಭಾಗದಲ್ಲಿ ಜಾಜೀಕಟ್ಟೆ ಪ್ರದೇಶ ವಾಸಿಗಳಿಗೆ ಬಡಮಕ್ಕಳಿಗೆ ಹಾಲು ವಿತರಿಸಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಸಂಚಾಲಕ ಎಸ್.ರಂಗರಾಜ್ ಹಾಗೂ ಜಿಲ್ಲಾ ಸಂಯೋಜಕ ಧರಣಿ ಕುಮಾರ್, ರಾಜೇಂದ್ರ ಪ್ರಸಾದ್, ರೂಪೇಶ್, ಎಸ್ಎನ್ ಕೃಷ್ಣಯ್ಯ ಹಾಗೂ ಜಾಜೀಕಟ್ಟೆ ಪ್ರದೇಶದ ಪುಟಾಣಿ ಮಕ್ಕಳು ಭಾಗವಹಿಸಿದ್ದರು.

ಜಮಖಂಡಿಯಲ್ಲಿ ಬಸವ ಪಂಚಮಿ ಆಚರಣೆ

ಜಮಖಂಡಿ ನಗರದಲ್ಲಿ ಮಾನವ ಬಂದುತ್ವ ವೇದಿಕೆ ವತಿಯಿಂದ ಬಸವ ಪಂಚಮಿಯನ್ನು ಆಚರಿಸಲಾಯಿತು.

ಬಾಗಲಕೋಟೆಯಲ್ಲಿ ಬಸವ ಪಂಚಮಿ ಆಚರಣೆ

ಮಾನವ ಬಂಧುತ್ವ ವೇದಿಕೆ ಬಾಗಲಕೋಟೆ ವತಿಯಿಂದ ಬಾಗಲಕೋಟೆ ಜಿಲ್ಲೆಯ ಬೇವಿನಮಟ್ಟಿ ಗ್ರಾಮದಲ್ಲಿ ನಾಗರ ಪಂಚಮಿಯನ್ನು ಬಸವ  ಪಂಚಮಿಯನ್ನಾಗಿ ಮೌಡ್ಯದ ವಿರುದ್ಧ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಬಾಗಲಕೋಟೆ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಕ್ಷಿತಾ ಈ.ಟಿ. ಮಾತನಾಡಿ, ಕಲ್ಲು ನಾಗರಕ್ಕೆ ಹಾಲನ್ನು ಹಾಕಿ ಪೋಲು ಮಾಡುವ ಬದಲು ಬಡ ಅಶಕ್ತ ಅಪೌಷ್ಟಿಕಾಂಶದಿಂದ ಬಳಲುತ್ತಿರುವ ಮಕ್ಕಳಿಗೆ ನೀಡುವುದರ ಮೂಲಕ ವಿಶಿಷ್ಟವಾಗಿ ಆಚರಿಸೋಣ ಎಂದು ಕರೆ ಕೊಟ್ಟರು.

ಕರ್ನಾಟಕ ಒಂದರಲ್ಲೇ ಪ್ರತಿವರ್ಷ ನಲವತ್ತು ಸಾವಿರ ಮಕ್ಕಳು ಅಪೌಷ್ಟಿಕಾಂಶದಿಂದ ಬಳಲುತ್ತಿದ್ದಾರೆ. ಈ ರೀತಿಯ ಕಾರ್ಯಕ್ರಮಗಳು ನಗರ ಮತ್ತು ಪಟ್ಟಣ ವ್ಯಾಪ್ತಿಗೆ ಸೀಮಿತವಾಗದೆ ಪ್ರತಿ ಹಳ್ಳಿಹಳ್ಳಿಯಲ್ಲೂ ನಡೆಸುವ ಮೂಲಕ ಜನರಲ್ಲಿ ಜಾಗೃತಿ ಮೂಡಬೇಕು ಎಂಬ ಸದುದ್ದೇಶದಿಂದ ಬೇವಿನಮಟ್ಟಿಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮುಂಬರುವ ದಿನಗಳಲ್ಲಿ ಮೌಢ್ಯದ ವಿರುದ್ಧ ಕಾರ್ಯಕ್ರಮಗಳನ್ನು ಪ್ರತಿ ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಹನಮವ್ವ ಕರಿಹೊಳಿ, ಗಂಗವ್ವ ರಾಥೋಡ್, ಕಾಂಗ್ರೆಸ್ ಮುಖಂಡರಾದ ದ್ಯಾಮಣ್ಣ, ಗಾಳಿ ಮಹೇಶ್ ಗದ್ದನಕೇರಿ, ಬಾಗಲಕೋಟೆ ತಾಲ್ಲೂಕು ಮಾನವ ಬಂಧುತ್ವ ವೇದಿಕೆ ಸಂಚಾಲಕ ಜಯರಾಜ ಹಾದಿಕರ್ ಹಾಗೂ ದಾಸನ ಗೌಡ ಪಾಟೀಲ್, ಗೋಪಾಲ್ ಕೆಂಪಣ್ಣವರ್,  ಪೀರಪ್ಪ ದಳವಾಯಿ, ಲೆಂಕೆಪ್ಪ ಮೊದಲಾದವರು ಇದ್ದರು.

ಬಸವ ಕಲ್ಯಾಣದಲ್ಲಿ ಬಸವ ಪಂಚಮಿ ಆಚರಣೆ

ಮಾನವ ಬಂಧುತ್ವ ವೇದಿಕೆ ವತಿಯಿಂದ ಬಸವಕಲ್ಯಾಣದಲ್ಲಿ‌‌‌‌‌ ಮಕ್ಕಳೆ ಬಸವ ಪಂಚಮಿ ಆಚರಿಸಿದರು. 

ಮೌಢ್ಯ ಸಾಮಾಜಿಕ ಮೌಲ್ಯವನ್ನು ಕಡಿಮೆಗೊಳಿಸಿದೆ: ಸುಭಾಷ್ ಮಾಡ್ರಹಳ್ಳಿ

ಮೌಢ್ಯದಿಂದ ಸಮಾಜದ ಮೌಲ್ಯ ಕಸಿದಿದೆ ಎಂದು ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ಸುಭಾಷ್ ಮಾಡ್ರಹಳ್ಳಿ ಹೇಳಿದರು.

ಮಾನವ ಬಂಧುತ್ವ ವೇದಿಕೆ ವತಿಯಿಂದ ಗುಂಡ್ಲುಪೇಟೆಯ ಸಿ ಎಂ ಎಸ್ ಮಕ್ಕಳ ಮನೆಯಲ್ಲಿ  ಹಮ್ಮಿಕೊಂಡಿದ್ದ ಬಸವ ಪಂಚಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾಗರ ಪಂಚಮಿಯನ್ನು ಇಂದು ನಾಡಿನಾದ್ಯಂತ ಹುತ್ತಕ್ಕೆ ಹಾಲು ಎರೆಯುವ ಮೂಲಕ ಆಚರಣೆ ಮಾಡಲಾಗುತ್ತಿದೆ. ಹಾವುಗಳು ಮಾಂಸಾಹಾರಿ ಪ್ರಾಣಿಗಳು. ಅವುಗಳು ಹಾಲನ್ನು ಕುಡಿಯುವುದಿಲ್ಲ. ಆದರೆ ದುರಂತವೆಂದರೆ ನಾಡಿನಲ್ಲಿ ಲಕ್ಷಾಂತರ ಲೀಟರ್ ಹಾಲು  ಪೋಲಾಗುತ್ತಿದೆ. ಇದರ ಜೊತೆಗೆ ಬೆಣ್ಣೆ, ಮೊಸರು ಹಾಗೂ ಹಣ್ಣು ಹಂಪಲುಗಳನ್ನು ನಾಶ ಮಾಡಲಾಗುತ್ತದೆ. ಇದು ಕಂದಾಚಾರವಲ್ಲದೆ ಮತ್ತೇನು? ಎಂದರು. 

ದೇಶದಲ್ಲಿ  ಲಕ್ಷಾಂತರ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವ ಸನ್ನಿವೇಶ ಇದೆ. ಸನ್ಮಾನ್ಯ ಸತೀಶ್ ಜಾರಕಿಹೊಳಿಯವರ ನೇತೃತ್ವದಲ್ಲಿ ಮಾನವ ಬಂಧುತ್ವ ವೇದಿಕೆಯು ಮೌಢ್ಯದ ವಿರುದ್ಧ ಜನ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದೆ.

ಜತೆಗೆ  ಪೌಷ್ಟಿಕಾಹಾರ  ಪೋಲು ಮಾಡುವುದರ  ಬದಲು ಬಡ ಮಕ್ಕಳು, ವೃದ್ಧರು ಹಾಗೂ ರೋಗಿಗಳಿಗೆ ನೀಡುವಂತೆ ಸಲಹೆಯನ್ನು ಅನುಸರಿಸಿ ಇಂದು ಪೃಥ್ವಿ  ಬುದ್ದಿಮಾಂದ್ಯ ಶಾಲೆಯ ಮಕ್ಕಳಿಗೆ  ಹಾಗೂ ಸಿ ಎಂ ಎಸ್ ಮಕ್ಕಳ ಮನೆಯ  ಮಕ್ಕಳಿಗೆ  ಉಪಹಾರ, ಹಾಲು ಸಿಹಿ ಹಣ್ಣು ಹಂಪಲು ವಿತರಣೆ ಮಾಡಲಾಯಿತು.

ನಿಪ್ಪಾಣಿಯಲ್ಲಿ ಬಸವ ಪಂಚಮಿ ಆಚರಣೆ

ಗಳತಗಾ ನಿಪ್ಪಾಣಿಯಲ್ಲಿ ಬಸವ ಪಂಚಮಿಯನ್ನು ಮಾನವ ಬಂಧುತ್ವ ವೇದಿಕೆ ಕಾರ್ಯಕರ್ತರು ಆಚರಿಸಿದರು. ಮಕ್ಕಳಿಗೆ ಹಾಲು ನೀಡುವ ಮೂಲಕ ಮೂಢನಂಬಿಕೆ ವಿರುದ್ಧ ಜಾಗೃತಿ ಮೂಡಿಸಲಾಯಿತು.

Share:

Leave a Reply

Your email address will not be published. Required fields are marked *

More Posts

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ

On Key

Related Posts

ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ,ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ

ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ. ಅಂದರೆ ಪೌಷ್ಟಿಕ ಆಹಾರ ಮಣ್ಣುಪಾಲಾಗುತ್ತದೆ. ಅದೇ ಹಾಲನ್ನು ಅವಶ್ಯಕತೆ ಇರುವವರಿಗೆ ಆಹಾರವಾಗಿ ನೀಡಬಹುದಲ್ಲವೇ? ದೈವ ಭಕ್ತಿಗೂ, ಧರ್ಮ ಭಕ್ತಿಗೂ, ಪರಿಸರ

ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

ಇಂದು ಆಗಸ್ಟ್ 20. ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಮಾತುಕತೆ…….. ವಿಜ್ಞಾನ ಮತ್ತು ಧರ್ಮ ಒಂದಕ್ಕೊಂದು ಪೂರಕವೇ ಅಥವಾ ವಿರುದ್ದವೇ ಅಥವಾ ಪರ್ಯಾಯವೇ ಅಥವಾ ಸಮಾನಾಂತರವೇ ಅಥವಾ ಪ್ರತಿಸ್ಪರ್ಧಿಗಳೇ ಅಥವಾ ಸಂಬಂಧವಿಲ್ಲವೇ….. ಧರ್ಮ ( ಮತ ) ಎಂಬುದು

ಬಸವ ಪಂಚಮಿ: ಒಂದು ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ

ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಆದರೆ ಸಾಂಪ್ರದಾಯವಾದಿಗಳು ಆ ಆಚರಣೆಗಳನ್ನು ತಿರುಚಿ ಅವುಗಳಿಗೆ ಧಾರ್ಮಿಕ ಮೌಢ್ಯದ ಹಿನ್ನೆಲೆಯನ್ನು ಹೆಣೆದಿದ್ದಾರೆ. ಕೇವಲ ಧಾರ್ಮಿಕ ಹಿನ್ನೆಲೆಯಷ್ಟೆಯಲ್ಲದೆ ಅನೇಕ ಬಗೆಯ ಮೌಢ್ಯಗಳನ್ನು ಜನಮನದಲ್ಲಿ ಬಿತ್ತಿದ್ದಾರೆ.

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದಿದ್ದಾರೆ. ಎಲ್ಲಾ ರೀತಿಯ ಅಸಮಾನತೆಯನ್ನು ಕೊನೆಗಾಣಿಸಿ ಸಮಾನತೆಯನ್ನು ತರುವುದು ನಮ್ಮ ಸಂವಿಧಾನದ

ಮೀಸಲಾತಿ ನೀತಿಯನ್ನು ಪುನರ್ ರಚಿಸಬೇಕಾದ ಅಗತ್ಯತೆ

ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಮೀಸಲಾತಿ ನೀತಿಯ ಅನುಷ್ಠಾನದಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಆದರೂ ಇಂದು ಹಲವು ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗಿವೆ. ಒಳಮೀಸಲಾತಿ, ಕೆನೆಪದರ ಬಡ್ತಿಯಲ್ಲಿ ಮೀಸಲಾತಿ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಎಂಬ ಪ್ರಶ್ನೆಗಳು ಕಾಡುತ್ತಿವೆ. ಮೀಸಲಾತಿ ಎಂದರೇನು