ಬೆಂಗಳೂರು: ಮಾನವ ಬಂಧುತ್ವ ವೇದಿಕೆ ಬೆಂಗಳೂರು ಕಚೇರಿಯಲ್ಲಿ ತಿಂಗಳ ಬಂಧುತ್ವ ಮಾತುಕತೆ ಎಂಬ ವಿನೂತನ ಕಾರ್ಯಕ್ರಮವನ್ನು ಆರಂಭಿಸಲಾಯಿತು.
ಮೊದಲ ಸಂವಾದದಲ್ಲಿ ಹೆಸರಾಂತ ಸಾಹಿತಿ, ಚಿಂತಕ ಪ್ರೊ.ಪುರುಷೋತ್ತಮ ಬಿಳಿಮಲೆಯವರು ಪಾಲ್ಗೊಂಡು ಅನುಭವ ಹಂಚಿಕೊಂಡರು. ಅವರ ಜೀವನ ಚರಿತ್ರೆ ಆಧಾರಿತ, “ಕಾಗೆ ಮುಟ್ಟಿದ ನೀರು” ಕೃತಿಯ ಬಗ್ಗೆ ಕವಯಿತ್ರಿ ಡಾ.ಎಚ್.ಎಲ್.ಪುಷ್ಪ ಅವರು ಮಾತನಾಡಿದರು.

ವಿಧಾನಪರಿಷತ್ ಸದಸ್ಯರು, ಮಾಜಿ ಸಂಸದರಾದ ಬಿ.ಕೆ.ಹರಿಪ್ರಸಾದ್ ಅವರು ಎಂಬಿವಿ ಕಚೇರಿಯಲ್ಲಿ ಆರಂಭಿಸಲಾದ ಬಂಧುತ್ವ ಪುಸ್ತಕ ಮಳಿಗೆಯನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಚಿಂತಕ ಡಾ.ಕೆ.ಸಿ.ರಘು, ಸಾವಯವ ಕೃಷಿ ಚಳುವಳಿಯ ರೂವಾರಿ ಎಚ್.ಆರ್. ಜಯರಾಂ, ಕವಯಿತ್ರಿ ಡಾ.ಕೆ.ಷರೀಫಾ, ಹಿರಿಯ ಪತ್ರಕರ್ತರಾದ ಎಸ್.ಆರ್.ಆರಾಧ್ಯ, ಹೇಮಾ ವೆಂಕಟ್, ಡಾ.ಮಂಜುಶ್ರೀ ಕಡಕೋಳ, ವಿದ್ಯಾರಣ್ಯ, ವಿಜ್ಞಾನ ಚಳುವಳಿಯ ಈ. ಬಸವರಾಜು, ಎಂಬಿವಿ ಬೆಂಗಳೂರು ವಲಯ ಸಂಚಾಲಕ ಆರ್.ಜಯಕುಮಾರ್, ವಿದ್ಯಾರ್ಥಿ ಬಂಧುತ್ವ ರಾಜ್ಯ ಸಂಚಾಲಕ ತೋಳಿ ಭರಮಣ್ಣ ಹಾಗೂ ಹಲವು ಸಾಹಿತ್ಯಾಭಿಮಾನಿಗಳು ಬಿಳಿಮಲೆಯವರ ಸಾಹಿತ್ಯ ಜೀವನ ಅನುಭವ ಹಂಚಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಫೇಸ್ ಬುಕ್ ನಲ್ಲಿ ನೇರ ಪ್ರಸಾರವಾದ ಈ ಕಾರ್ಯಕ್ರಮವನ್ನು ವೀಕ್ಷಿಸಿದ ಅನೇಕ ವೀಕ್ಷಕರು ಕಾರ್ಯಕ್ರಮವನ್ನು ಮೆಚ್ಚಿಕೊಂಡರು.