ಬೆಂಗಳೂರು: ದಿನಾಂಕ 08/01/2022ರಂದು ಶನಿವಾರ ಸಂಜೆ 6:00 ಗಂಟೆಗೆ ಮಾನವ ಬಂಧುತ್ವ ವೇದಿಕೆ ವತಿಯಿಂದ ನಡೆಯಲಿರುವ 38ನೇ ವೆಬಿನಾರ್ ಸರಣಿಯಲ್ಲಿ “ದ್ವೇಷ ಭಾಷಣ, ಅಭಿವ್ಯಕ್ತಿ ಸ್ವಾತಂತ್ರ್ಯ ಹರಣದ ಗುಪ್ತ ಕಾರ್ಯಸೂಚಿ” ವಿಷಯದ ಕುರಿತು ಮಾನವ ಹಕ್ಕು ಹೋರಾಟಗಾರ ಮತ್ತು ಹಿರಿಯ ವಕೀಲರಾದ ಎಸ್.ಬಾಲನ್ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಹಿರಿಯ ಪತ್ರಕರ್ತ ನವೀನ್ ಸೂರಿಂಜೆ ಪ್ರತಿಕ್ರಿಯೆ ನೀಡಲಿದ್ದಾರೆ.
ಪ್ರತಿ ವಾರದ ಮಾನವ ಬಂಧುತ್ವ ವೇದಿಕೆ ಪ್ರಚಲಿತ ವಿಷಯಗಳ ಕುರಿತು ಬಂಧುತ್ವ ಬೆಳಕು ಹೆಸರಿನಲ್ಲಿ ಜೂಮ್ ಮೂಲಕ ವೆಬಿನಾರ್ ಆಯೋಜಿಸುತ್ತಿದೆ. ಇದುವರೆಗೆ ಕೊರೊನಾ, ಕೃಷಿ, ಆರೋಗ್ಯ, ಶಿಕ್ಷಣ ಮೊದಲಾದ ವಿಷಯಗಳ ಕುರಿತು ವೆಬಿನಾರ್ ನಡೆದಿವೆ. ಅಭಿವೃದ್ಧಿ ಮತ್ತು ರಾಜಕಾರಣ, ಜನತೆಯ ಕವಿ ಡಾ.ಸಿದ್ದಲಿಂಗಯ್ಯ, ಭಾರತದ ಪ್ರಜಾಪ್ರಭುತ್ವಕ್ಕೆ ನೆಹರು ಅವರ ಕೊಡುಗೆಗಳು, ಜಾತಿವಾರು ಆರ್ಥಿಕ ಸಾಮಾಜಿಕ ಸಮೀಕ್ಷೆ ಮತ್ತು ಸಾಮಾಜಿಕ ನ್ಯಾಯ, ಹಿಂದಿ ಹೇರಿಕೆಯ ಅಪಾಯಗಳು, ಸಾಹಿತ್ಯ ಮತ್ತು ಚಳುವಳಿಗೆ ಡಾ.ಸಿದ್ದಲಿಂಗಯ್ಯನವರ ಕೊಡುಗೆ, ಅತ್ಯಾಚಾರ: ಕಾನೂನು ಅಥವಾ ವ್ಯವಸ್ಥೆಯ ವೈಫಲ್ಯವೇ?, ಅಫ್ಘಾನಿಸ್ತಾನದ ತಾಲಿಬಾನ್ ಬೆಳವಣಿಗೆಗಳ ಸುತ್ತಮುತ್ತ, ಹೊಸ ಶಿಕ್ಷಣ ನೀತಿ: ತಳಸಮುದಾಯಗಳ ಮೇಲಿನ ಪರಿಣಾಮ, ಕೇಂದ್ರ ಸರ್ಕಾರದ ವಿದ್ಯುತ್ ಖಾಸಗೀಕರಣ ಮಸೂದೆ ಮತ್ತು ಅದರ ಪರಿಣಾಮಗಳು, ಪ್ರಸಕ್ತ ಕೃಷಿ ಬಿಕ್ಕಟ್ಟು ಮತ್ತು ಪರಿಹಾರ, 12,000 ವರ್ಷಗಳ ಇತಿಹಾಸ ಅಧ್ಯಯನ: ಇತಿಹಾಸವನ್ನು ತಿರುಚುವ ಪ್ರಯತ್ನ, ಕೊರೊನಾ ನೆಪದಲ್ಲಿ ಮಾನವ ಹಕ್ಕುಗಳ ದಮನ, ಹೊಸತನವಿಲ್ಲದ ರಾಷ್ಟ್ರೀಯ ಶಿಕ್ಷಣ ನೀತಿ, ಪ್ರತ್ಯೇಕ ಲಿಂಗಾಯತ ಧರ್ಮ ಕಾರ್ಯಸಾಧುವೇ?, ಮಹಾತ್ಮಾ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಬಿಜೆಪಿ ರಾಜಕಾರಣ, ಪಠ್ಯ ಪುಸ್ತಕಗಳ ಪರಿಷ್ಕರಣೆಯ ರಾಜಕಾರಣ, ಸೂಫಿ ಪ್ರೇಮ ತತ್ವ ಮತ್ತು ಸಂಗೀತ, ಜೈಭೀಮ್ ಕನ್ನಡ ಚಿತ್ರರಂಗಕ್ಕೆ ಕೊಟ್ಟ ಸಂದೇಶ, ಹಂಸಲೇಖ ಹೇಳಿಕೆಯ ವಿವಾದದ ಸುತ್ತ, ರೈತ ಚಳುವಳಿ ಮತ್ತು ಮುಂದಿರುವ ಸವಾಲುಗಳು, ಮೇಕೆದಾಟು ಮತ್ತು ಕರ್ನಾಟಕದ ನೀರಿನ ಅಧಿಕಾರ, ಕೋಳಿ ಮೊಟ್ಟೆ ಮತ್ತು ಆಹಾರದ ಹಕ್ಕು, ಮತಾಂತರ ನಿಷೇಧ ಕಾಯ್ದೆಯ ಪರಿಣಾಮಗಳು ಮತ್ತು ಕುವುಂಪು ಅವರ ಚಿಂತನೆಗಳಲ್ಲಿ ವಿಶ್ವ ಮಾನವ ಸಂದೇಶ ಮೊದಲಾದ ವಿಷಯಗಳ ಕುರಿತು ವೆಬಿನಾರ್ ಆಯೋಜಿಸಲಾಗಿದ್ದು, ದ್ವೇಷ ಭಾಷಣ, ಅಭಿವ್ಯಕ್ತಿ ಸ್ವಾತಂತ್ರ್ಯ ಹರಣದ ಗುಪ್ತ ಕಾರ್ಯಸೂಚಿ ವಿಷಯ ಕುರಿತ ವೆಬಿನಾರ್ 39ನೆಯದಾಗಿದೆ.
ವೆಬಿನಾರ್ ನಲ್ಲಿ ನೇರವಾಗಿ ಭಾಗವಹಿಸಲು ಸಾಧ್ಯವಾಗದವರು ಮಾನವ ಬಂಧುತ್ವ ವೇದಿಕೆ – ಕರ್ನಾಟಕ ಫೇಸ್ ಬುಕ್ ಲೈವ್ ನಲ್ಲಿ ಕೂಡ ನೇರಪ್ರಸಾರವನ್ನು ವೀಕ್ಷಿಸಲು ಅವಕಾಶವಿರುತ್ತದೆ. ವೆಬಿನಾರ್ ನಲ್ಲಿ ಭಾಗವಹಿಸುವರು ವಿಷಯ ತಜ್ಞರ ಜೊತೆಗೆ ತಮಗೆ ಎದುರಾದ ಅನುಮಾನಗಳ ಕುರಿತ ಪ್ರಶ್ನೆಗಳನ್ನು ಕೂಡ ಕೇಳಲು ಅವಕಾಶವಿದೆ. ವೆಬಿನಾರ್ ನಂತರ ಈ ವಿಡಿಯೋವನ್ನು ಮಾನವ ಬಂಧುತ್ವ ವೇದಿಕೆಯ MBV Karnataka ಯೂಟ್ಯೂಬ್ ವಾಹಿನಿಯಲ್ಲಿ ಕೇಳಲು ಅವಕಾಶವಿದೆ.
ಆಸಕ್ತರು ಶನಿವಾರ 08/01/2022ರಂದು ಸಂಜೆ 6:00 ಗಂಟೆಗೆ Join Zoom Meeting ಐಡಿ https://us02web.zoom.us/j/86465689981?pwd=WlVnSzVyQitTNnhSMmRUYUpyaTBDQT09 ಬಳಸಿ ವೆಬಿನಾರ್ ನಲ್ಲಿ ಭಾಗವಹಿಸಬಹುದು. Meeting ID: 864 6568 9981, Passcode: 12345