ಸತೀಶ್ ಜಾರಕಿಹೊಳಿ ಫೌಂಡೇಷನ್ ವತಿಯಿಂದ ಉಚಿತ ಯೂಟ್ಯೂಬರ್ ಮತ್ತು ವೆಬ್ಸೈಟ್ ಡಿಸೈನರ್ ತರಬೇತಿ
ಬೆಂಗಳೂರು: ಸತೀಶ್ ಜಾರಕಿಹೊಳಿಯವರು ಉತ್ಸಾಹಿ ಯುವಜನಾಂಗ ಮತ್ತು ಕ್ರಿಯಾಶೀಲರಿಗೆ ಯೂಟ್ಯೂಬರ್ ಮತ್ತು ವೆಬ್ಸೈಟ್ ಡಿಜೈನರ್ ತರಬೇತಿ ನೀಡುವ ಮೂಲಕ ಸ್ವಂತ ಉದ್ಯೋಗಕ್ಕೆ ಅವಕಾಶ ಮಾಡಿಕೊಡಲು ನಿರ್ಧರಿಸಿದ್ದಾರೆ. ಸತೀಶ್ ಜಾರಕಿಹೊಳಿ ಫೌಂಡೇಷನ್ ವತಿಯಿಂದ ಉಚಿತವಾಗಿ ತರಬೇತಿಯನ್ನು ನೀಡಲಾಗುತ್ತದೆ.
ಈ ಕೆಳಗಿನ ಗೂಗಲ್ ಫಾರಂ ಅನ್ನು ತುಂಬುವ ಮೂಲಕ ಯೂಟ್ಯೂಬರ್ ಮತ್ತು ವೆಬ್ಸೈಟ್ ಡಿಸೈನರ್ ತರಬೇತಿಗೆ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದವರಿಗೆ ಕರೆಮಾಡಿ ತರಬೇತಿ ನಡೆಯುವ ಸ್ಥಳ ಮತ್ತು ದಿನಾಂಕವನ್ನು ತಿಳಿಸಲಾಗುವುದು.