ಮನುಸ್ಮೃತಿಯು ಭಾರತೀಯ ಮಹಿಳೆಯರಿಗೆ ಗೌರವಾನ್ವಿತ ಸ್ಥಾನ ಮಾನ ನೀಡಿದೆ ಎಂದು ದೆಹಲಿಯ ಹೈಕೋರ್ಟ್ ನ್ಯಾಯಮೂರ್ತಿಗಳಾದ ಪ್ರತಿಭಾ ಸಿಂಗ್ ಅವರು ಹೇಳಿಕೆ ನೀಡಿರುವುದು ಪ್ರಜಾಪ್ರಭುತ್ವದ ದುರಂತ.
ಮಹಿಳೆಯರ ಸಮಾನ ಹಕ್ಕುಗಳು ಮತ್ತು ಘನತೆಗಾಗಿ ಹೋರಾಟ ನಡೆಸಿ ಹಿಂದೂ ಕೋಡ್ ಬಿಲ್ ಜಾರಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸಿದ ಬಾಬಾ ಸಾಹೇಬರನ್ನು ಇವರು ನೆನೆಯದೇ ಇರುವುದು ನಿಜಕ್ಕೂ ಬೇಸರದ ಸಂಗತಿ
ವಾಸ್ತವವಾಗಿ ನೋಡುವುದಾದರೆ,
ತನ್ನ ಸ್ವಂತ ಮನೆಯಲ್ಲಿ ಕೂಡ ಮಹಿಳೆಯು, ಆಕೆ ಮಗು ಅಥವಾ ಯುವತಿ ಅಥವಾ ವೃದ್ಧೆಯಾಗಿರಲಿ, ಎಂದಿಗೂ ಯಾವುದೇ ಕಾರ್ಯವನ್ನು ಸ್ವತಂತ್ರವಾಗಿ ನಿರ್ವಹಿಸಬಾರದು. ಆಕೆ ಮಗುವಾಗಿ ತನ್ನ ತಂದೆಯ ನಿಯಂತ್ರಣದಲ್ಲಿ, ಪತ್ನಿಯಾಗಿ ತನ್ನ ಪತಿಯ ಅಧೀನದಲ್ಲಿ ಮತ್ತು ಪತಿಯ ನಿಧನಾನಂತರ ತನ್ನ ಮಕ್ಕಳ ಅಧೀನದಲ್ಲಿರಬೇಕು
ಎಂದು ಮನುಸ್ಮೃತಿಯ 5 ಮತ್ತು 10 ನೇ ಅಧ್ಯಾಯಗಳು ಉಲ್ಲೇಖಿಸುತ್ತವೆ.
ಇನ್ನು ಪುರುಷನು
ಸದ್ಗುಣಗಳನ್ನು ಕಳೆದುಕೊಂಡಿದ್ದರೂ, ಆತ ಕಾಮಪಿಪಾಸುವಾಗಿದ್ದರೂ ಮತ್ತು ಉತ್ತಮ ಗುಣಗಳಿಂದ ಸಂಪೂರ್ಣವಾಗಿ ವಂಚಿತನಾಗಿದ್ದರೂ ಒಳ್ಳೆಯ ಮಹಿಳೆಯು ಯಾವಾಗಲೂ ತನ್ನ ಪತಿಯನ್ನು ದೇವರಂತೆ ಪೂಜಿಸಬೇಕು ಎಂದು ಅಧ್ಯಾಯ 5 ರ 154 ನೇ ಶ್ಲೋಕದಲ್ಲಿ ನಮೂದಾಗಿದೆ.
ಅಲ್ಲದೇ
ಪತ್ನಿ,ಪುತ್ರ ಮತ್ತು ಗುಲಾಮ-ಈ ಎಲ್ಲ ಮೂವರೂ ಆಸ್ತಿಯಿಲ್ಲದವರು ಎಂದು ಸಂಪ್ರದಾಯವು ನಮಗೆ ಹೇಳುತ್ತದೆ. ಅವರು ಏನು ಸಂಪಾದಿಸಿದರೂ ಅದು ಅವರು ಅಧೀನದಲ್ಲಿರುವ ಪುರುಷನ ಆಸ್ತಿಯಾಗುತ್ತದೆ ಎಂದು ಮನುಸ್ಮೃತಿಯ ಅಧ್ಯಾಯ 8ರ 416 ನೇ ಶ್ಲೋಕವು ನಮಗೆ ತಿಳಿಸುತ್ತದೆ.
ಪರಿಸ್ಥಿತಿ ಹೀಗಿದ್ದಾಗಲೂ ಕೂಡಾ ಮಾನ್ಯ ನ್ಯಾಯಮೂರ್ತಿಗಳ ಹೇಳಿಕೆಯನ್ನು ಗಮನಿಸಿದರೆ ಅವರು ಈ ವಿಷಯದಲ್ಲಿ ಪೂರ್ವಾಗ್ರಹ ಹೊಂದಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.
- H.C. Mahadevappa
