March 25, 2023 4:53 pm

ರಷ್ಯಾ – ಉಕ್ರೇನ್ ಸಂಘರ್ಷ: ಭಾರತದ ಮೇಲಿನ ಪರಿಣಾಮಗಳು

ಬೆಂಗಳೂರು: ದಿನಾಂಕ 26/02/2022ರಂದು ಶನಿವಾರ ಸಂಜೆ 6:00 ಗಂಟೆಗೆ ಮಾನವ ಬಂಧುತ್ವ ವೇದಿಕೆ ವತಿಯಿಂದ ನಡೆಯಲಿರುವ 46ನೇ ವೆಬಿನಾರ್ ಸರಣಿಯಲ್ಲಿ “ರಷ್ಯಾ – ಉಕ್ರೇನ್ ಸಂಘರ್ಷ: ಭಾರತದ ಮೇಲಿನ ಪರಿಣಾಮಗಳು”ವಿಷಯದ  ಕುರಿತು ವಿಮರ್ಶಕ ಸಾಮಾಜಿಕ ಹೋರಾಟಗಾರ ಬಿ.ಶ್ರೀಪಾದ ಭಟ್ ವಿಶೇಷ ಉಪನ್ಯಾಸ ನೀಡಲಿದ್ದಾರೆ.  

ಪ್ರತಿ ವಾರದ ಮಾನವ ಬಂಧುತ್ವ ವೇದಿಕೆ ಪ್ರಚಲಿತ ವಿಷಯಗಳ ಕುರಿತು ಬಂಧುತ್ವ ಬೆಳಕು ಹೆಸರಿನಲ್ಲಿ ಜೂಮ್ ಮೂಲಕ ವೆಬಿನಾರ್ ಆಯೋಜಿಸುತ್ತಿದೆ. ಇದುವರೆಗೆ ಕೊರೊನಾ, ಕೃಷಿ, ಆರೋಗ್ಯ, ಶಿಕ್ಷಣ ಮೊದಲಾದ ವಿಷಯಗಳ ಕುರಿತು ವೆಬಿನಾರ್ ನಡೆದಿವೆ. ಅಭಿವೃದ್ಧಿ ಮತ್ತು ರಾಜಕಾರಣ, ಜನತೆಯ ಕವಿ ಡಾ.ಸಿದ್ದಲಿಂಗಯ್ಯ, ಭಾರತದ ಪ್ರಜಾಪ್ರಭುತ್ವಕ್ಕೆ ನೆಹರು ಅವರ ಕೊಡುಗೆಗಳು, ಜಾತಿವಾರು ಆರ್ಥಿಕ ಸಾಮಾಜಿಕ ಸಮೀಕ್ಷೆ ಮತ್ತು ಸಾಮಾಜಿಕ ನ್ಯಾಯ, ಹಿಂದಿ ಹೇರಿಕೆಯ ಅಪಾಯಗಳು, ಸಾಹಿತ್ಯ ಮತ್ತು ಚಳುವಳಿಗೆ ಡಾ.ಸಿದ್ದಲಿಂಗಯ್ಯನವರ ಕೊಡುಗೆ, ಅತ್ಯಾಚಾರ: ಕಾನೂನು ಅಥವಾ ವ್ಯವಸ್ಥೆಯ ವೈಫಲ್ಯವೇ?, ಅಫ್ಘಾನಿಸ್ತಾನದ ತಾಲಿಬಾನ್ ಬೆಳವಣಿಗೆಗಳ ಸುತ್ತಮುತ್ತ, ಹೊಸ ಶಿಕ್ಷಣ ನೀತಿ: ತಳಸಮುದಾಯಗಳ ಮೇಲಿನ ಪರಿಣಾಮ, ಕೇಂದ್ರ ಸರ್ಕಾರದ ವಿದ್ಯುತ್ ಖಾಸಗೀಕರಣ ಮಸೂದೆ ಮತ್ತು ಅದರ ಪರಿಣಾಮಗಳು, ಪ್ರಸಕ್ತ ಕೃಷಿ ಬಿಕ್ಕಟ್ಟು ಮತ್ತು ಪರಿಹಾರ, 12,000 ವರ್ಷಗಳ ಇತಿಹಾಸ ಅಧ್ಯಯನ: ಇತಿಹಾಸವನ್ನು ತಿರುಚುವ ಪ್ರಯತ್ನ, ಕೊರೊನಾ ನೆಪದಲ್ಲಿ ಮಾನವ ಹಕ್ಕುಗಳ ದಮನ, ಹೊಸತನವಿಲ್ಲದ ರಾಷ್ಟ್ರೀಯ ಶಿಕ್ಷಣ ನೀತಿ, ಪ್ರತ್ಯೇಕ ಲಿಂಗಾಯತ ಧರ್ಮ ಕಾರ್ಯಸಾಧುವೇ?, ಮಹಾತ್ಮಾ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಬಿಜೆಪಿ ರಾಜಕಾರಣ, ಪಠ್ಯ ಪುಸ್ತಕಗಳ ಪರಿಷ್ಕರಣೆಯ ರಾಜಕಾರಣ, ಸೂಫಿ ಪ್ರೇಮ ತತ್ವ ಮತ್ತು ಸಂಗೀತ, ಜೈಭೀಮ್ ಕನ್ನಡ ಚಿತ್ರರಂಗಕ್ಕೆ ಕೊಟ್ಟ ಸಂದೇಶ, ಹಂಸಲೇಖ ಹೇಳಿಕೆಯ ವಿವಾದದ ಸುತ್ತ, ರೈತ ಚಳುವಳಿ ಮತ್ತು ಮುಂದಿರುವ ಸವಾಲುಗಳು, ಮೇಕೆದಾಟು ಮತ್ತು ಕರ್ನಾಟಕದ ನೀರಿನ ಅಧಿಕಾರ, ಕೋಳಿ ಮೊಟ್ಟೆ ಮತ್ತು ಆಹಾರದ ಹಕ್ಕು, ಮತಾಂತರ ನಿಷೇಧ ಕಾಯ್ದೆಯ ಪರಿಣಾಮಗಳು ಮತ್ತು ಕುವುಂಪು ಅವರ ಚಿಂತನೆಗಳಲ್ಲಿ ವಿಶ್ವ ಮಾನವ ಸಂದೇಶ, ದ್ವೇಷ ಭಾಷಣ, ಅಭಿವ್ಯಕ್ತಿ ಸ್ವಾತಂತ್ರ್ಯ ಹರಣದ ಗುಪ್ತ ಕಾರ್ಯಸೂಚಿ, ಎಂಬಿವಿ ಮಾರ್ಗದರ್ಶಕಾಗಿದ್ದ ಪ್ರೊ. ಚಂಪಾರವರ ನೆನಪು ಮೊದಲಾದ ವಿಷಯಗಳ ಕುರಿತು ವೆಬಿನಾರ್ ಆಯೋಜಿಸಲಾಗಿದ್ದು,  ನಾರಾಯಣ ಗುರು, ಸುಭಾಷ್ ಚಂದ್ರ ಬೋಸ್ ಸ್ತಬ್ಧಚಿತ್ರ ನಿರಾಕರಣೆ: ಒಕ್ಕೂಟ ವ್ಯವಸ್ಥೆಗೆ ಬಂದೊದಗಿದ ಅಪಾಯ, ಅಂಬೇಡ್ಕರ್ ಫೋಟೋ ತೆರವು: ಸಂವಿಧಾನ ಬದಲಿ ಮುನ್ಸೂಚನೆಯೇ?, ಕೇಂದ್ರ ಬಜೆಟ್: ದಿಕ್ಕು ದೆಸೆ, ಪುರುಷ ಪ್ರಾಧಾನ್ಯತೆಯ ಬಲಿಪಶು ಮಹಿಳೆ, ಅತಿಥಿ ಉಪನ್ಯಾಸಕರ ಸಮಸ್ಯೆಗಳು ಮತ್ತು ಪರಿಹಾರದ ಸಾಧ್ಯತೆಗಳು ವಿಷಯದ ಕುರಿತು ವೆಬಿನಾರ್ ಗಳನ್ನು ಆಯೋಜಿಸಲಾಗಿದೆ. ರಷ್ಯಾ – ಉಕ್ರೇನ್ ಸಂಘರ್ಷ: ಭಾರತದ ಮೇಲಿನ ಪರಿಣಾಮಗಳು ವಿಷಯ  ವೆಬಿನಾರ್ ನ 46ನೆಯ ಸರಣಿಯಾಗಿದೆ.

ವೆಬಿನಾರ್ ನಲ್ಲಿ ನೇರವಾಗಿ ಭಾಗವಹಿಸಲು ಸಾಧ್ಯವಾಗದವರು ಮಾನವ ಬಂಧುತ್ವ ವೇದಿಕೆ – ಕರ್ನಾಟಕ ಫೇಸ್ ಬುಕ್ ಲೈವ್ ನಲ್ಲಿ ಕೂಡ ನೇರಪ್ರಸಾರವನ್ನು ವೀಕ್ಷಿಸಲು ಅವಕಾಶವಿರುತ್ತದೆ. ವೆಬಿನಾರ್ ನಲ್ಲಿ ಭಾಗವಹಿಸುವರು ವಿಷಯ ತಜ್ಞರ ಜೊತೆಗೆ ತಮಗೆ ಎದುರಾದ ಅನುಮಾನಗಳ ಕುರಿತ ಪ್ರಶ್ನೆಗಳನ್ನು ಕೂಡ ಕೇಳಲು ಅವಕಾಶವಿದೆ. ವೆಬಿನಾರ್ ನಂತರ ಈ ವಿಡಿಯೋವನ್ನು ಮಾನವ ಬಂಧುತ್ವ ವೇದಿಕೆಯ MBV Karnataka ಯೂಟ್ಯೂಬ್ ವಾಹಿನಿಯಲ್ಲಿ ಕೇಳಲು ಅವಕಾಶವಿದೆ.

ಆಸಕ್ತರು ಶನಿವಾರ 26/02/2022ರಂದು ಸಂಜೆ 6:00 ಗಂಟೆಗೆ Join Zoom Meeting ಐಡಿ https://us02web.zoom.us/j/86465689981?pwd=WlVnSzVyQitTNnhSMmRUYUpyaTBDQT09 ಬಳಸಿ ವೆಬಿನಾರ್ ನಲ್ಲಿ ಭಾಗವಹಿಸಬಹುದು. Meeting ID: 864 6568 9981, Passcode: 12345

Share:

Leave a Reply

Your email address will not be published. Required fields are marked *

More Posts

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ

On Key

Related Posts

ಸಂವಿಧಾನದ ಮೂಲ ತತ್ವಗಳು – ಮುಂದಿನ ಸವಾಲುಗಳು

ನಮ್ಮ ಸಂವಿಧಾನದ ಯಾವುದೇ ಅನುಚ್ಛೇದದಲ್ಲಿ ಅದರ ಮೂಲ ತತ್ವಗಳು ಯಾವುವು ಎಂಬುದನ್ನು ತಿಳಿಯಪಡಿಸಿಲ್ಲ. ಆದರೆ ಸರ್ವೋಚ್ಛ ನ್ಯಾಯಾಲಯ 1973ರಲ್ಲಿ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸಂವಿಧಾನದ ಮೂಲತತ್ವಗಳನ್ನು ಹೆಕ್ಕಿ ಪಟ್ಟಿ ಮಾಡಿ ಪ್ರಸ್ತುತಪಡಿಸಿದೆ. “ಈ ಮೂಲತತ್ವಗಳನ್ನು ಬದಲಿಸಲೂ ಆಗದು ಮತ್ತು ತಿದ್ದುಪಡಿ ಮಾಡಲು

ಭಕ್ತಿ ಪಂಥ: ಪ್ರೀತಿಯಲ್ಲಿ ರಾಜನು ಸೇವಕನಾಗುತ್ತಾನೆ

ಭಕ್ತಿ ಪಂಥ ‘ಭಜ’ಯೆಂಬ ಸಂಸ್ಕೃತ ಪದದ ಮೂಲದಿಂದ ‘ಭಕ್ತಿ’ಯೆಂಬ ಪದ ಬಂದಿದೆ. ಭಕ್ತಿಯೆಂದರೆ ಅರ್ಪಣೆ, ಪ್ರೀತಿ, ನಂಬಿಕೆ, ಆರಾಧನೆ. ಭಕ್ತಿಯೆಂಬ ಪದ ಭಗವದ್ಗೀತೆ ಮತ್ತು ಉಪನಿಷತ್‌ಗಳಲ್ಲಿ ಬಳಕೆಯಾಗಿದೆ. ಪ್ರಾಚೀನ ಕಾಲದಿಂದ ಭಾರತೀಯರಿಗೆ ಭಕ್ತಿಯೆಂಬ ಪದ ಚಿರಪರಿಚಿತ ಮತ್ತು ದಿನನಿತ್ಯ ಜೀವನದಲ್ಲಿ ಬಳಕೆಯಲ್ಲಿರುವ

ಕ್ರಾಂತಿ ಮತ್ತು ಕಾನೂನು

“ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯ. ಮಾನವನು ನಡೆದು ಬಂದ ಇತಿಹಾಸವನ್ನು ನಾವು ತಿಳಿದುಕೊಂಡರೆ ಮುಂದಿನ ದಾರಿ ಯಾವುದೆಂದು ತಿಳಿಯುತ್ತದೆ. ನಮ್ಮ ಹಿರಿಯರ ಅನುಭವಗಳಿಂದ ನಾವು ಪಾಠವನ್ನು ಕಲಿತರೆ ಮುಂದೆ ನಮ್ಮ ದಾರಿ

ಮಾತೃಭಾಷೆಯಲ್ಲಿ ಶಿಕ್ಷಣ

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ ಅನುಗುಣವಾಗಿ ರೂಪುಗೊಂಡಂತೆ ವಿವಿಧ ಭಾಷೆಗಳೂ ವಿಕಸನಗೊಂಡವು. ವಿಶ್ವಸಂಸ್ಥೆಯ ಒಂದು ಅಧ್ಯಯನದ ಪ್ರಕಾರ 1900ರಲ್ಲಿ 10,000 ಭಾಷೆಗಳು ಬಳಕೆಯಲ್ಲಿದ್ದವಂತೆ. ಆದರೆ ಇಂದು 6,700

ಮೌಢ್ಯಾಚರಣೆ – ವೈಚಾರಿಕತೆ

ಮೂಢನಂಬಿಕೆಗಳ ಪ್ರಾರಂಭ ಮಂಗ ಮಾನವನಾಗಿದ್ದು ಒಂದು ದೀರ್ಘಕಾಲದ ಪಯಣ. ಮಾನವನ ವಿಕಾಸದ ಒಂದು ಹಂತದಲ್ಲಿ ಅವನಿಗೂ ಬೇರೆ ಪ್ರಾಣಿಗಳಿಗೂ ಹೆಚ್ಚು ವ್ಯತ್ಯಾಸವಿರಲಿಲ್ಲ. ಉಳಿದ ಪ್ರಾಣಿಗಳಂತೆ ಹಸಿವಾದಾಗ ಬೇಟೆಯಾಡಿಕೊಂಡು, ಗೆಡ್ಡೆಗೆಣಸು ತಿಂದುಕೊಂಡು ಬದುಕುತ್ತಿದ್ದ. ಮಾನವನ ಮತ್ತು ಪ್ರಕೃತಿಯ ಕ್ರಿಯೆಗಳ ಮಧ್ಯೆ ನಿರಂತರವಾದ ಸಂಘರ್ಷ