December 3, 2023 5:47 am

ಖಾಸಗಿಯಲ್ಲಿ ಮೀಸಲಾತಿ ಜಾರಿಯಾಗಲಿ

೨೦೦೪ರಲ್ಲಿ ಖಾಸಗಿ ರಂಗದಲ್ಲಿ ಮೀಸಲಾತಿ ಕುರಿತು ಯುಪಿಎ ಸರ್ಕಾರ ಪ್ರಸ್ತಾಪಿಸಿತು. ಆದರೆ ಆಕಾಶವೇ ಕಳಚಿ ಬಿದ್ದಂತೆ ಖಾಸಗಿ ಕಂಪೆನಿಗಳು ಹುಯಿಲೆಬ್ಬಿಸಿದವು.

ಭಾರತದಲ್ಲಿ ಮೀಸಲಾತಿ ಬ್ರಿಟಿಷ್ ಸರ್ಕಾರದಿಂದ ಅಧಿಕೃತವಾಗಿ ಜಾರಿಗೆ ಬಂದದ್ದು ೧೯೦೮ರಲ್ಲಿ. ಅದಕ್ಕಿಂತ ಪೂರ್ವದಲ್ಲಿ (೧೮೮೧) ಜ್ಯೋತಿಬಾ ಫುಲೆ ಕಡ್ಡಾಯ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿಗಾಗಿ ಒತ್ತಾಯಿಸಿದ್ದರು. ೧೯೦೨ರಲ್ಲಿ ಶಾಹು ಮಹರಾಜ್ ತಮ್ಮ ಸಂಸ್ಥಾನದಲ್ಲಿ ಮೀಸಲಾತಿಯನ್ನು ಜಾರಿಗೆ ತಂದಿದ್ದರು. ಇದರ ಜತೆಗೆ ಮೈಸೂರು ಅರಸರೂ ಮೀಸಲಾತಿ ಪರವಾಗಿದ್ದರು.

ಈ ಆಧಾರದ ಪ್ರಕಾರ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಜಾರಿಗೆ ಒತ್ತಾಯ ಮತ್ತು ಆರಂಭವಾಗಿ ಇನ್ನೂ ೧೩೮ ವರ್ಷಗಳಷ್ಟೇ ಆಗಿದೆ. ಅದು ಜಾರಿಯಾಗಿ ೧೧೧ ವರ್ಷಗಳು ಕಳೆದಿವೆ. ಆದರೆ ಭಾರತದ ಚರಿತ್ರೆ ಆರಂಭವಾದ ದಿನದಿಂದ ಇಂದಿನವರೆಗೆ ಅನೈಚ್ಛಿಕವಾಗಿ ಜಾರಿಯಲ್ಲಿರುವ ಮೀಸಲಾತಿಯನ್ನು ಇದುವರೆಗೆ ಯಾರೂ ವಿರೋಧಿಸುವುದಿಲ್ಲ. ವರ್ಣಾಶ್ರಮವನ್ನು ಆಧರಿಸಿ ಶ್ರಮ ವಿಭಜಿಸಿದ ಕಾರಣದಿಂದ ಮೇಲ್ವರ್ಗದವರಿಗೆ ಸೀಮಿತವಾಗಿದ್ದ ಅಧಿಕಾರ, ಆಸ್ತಿ, ಸಂಪತ್ತಿನ ಒಡೆತನವನ್ನು ಅನುಭವಿಸಿರುವವರು ಇಂದಿಗೂ ಆರಾಮವಾಗಿದ್ದಾರೆ. ಆರಂಭದಿಂದಲೂ ದಮನಿತರಿಗೆ ಅಕ್ಷರ ಜ್ಞಾನವನ್ನೂ ಒಳಗೊಂಡಂತೆ ಯಾವುದರ ಮೇಲೂ ಅಧಿಕಾರವಿರಲಿಲ್ಲ. ಇವರಲ್ಲಿ ಬಹುಪಾಲು ಮಂದಿ ಇನ್ನೂ ಆದಿಮ ಸ್ಥಿತಿಯಲ್ಲೇ ಜೀವಿಸುತ್ತಿದ್ದಾರೆ.

ಕೇವಲ ೧೧೧ ವರ್ಷಗಳ ಮೀಸಲಾತಿ ಜಾರಿಗೆ ಬಂದು ಅದೂ ಕಟ್ಟುನಿಟ್ಟಾಗಿ ಜಾರಿಯಾಗಲೇಬೇಕೆಂದು ನ್ಯಾಯಾಲಯಗಳು ಆಜ್ಞೆ ಹೊರಡಿಸಿದ ನಂತರ ಕೆಲವೇ ದಶಕಗಳಿಂದ ಸರ್ಕಾರದಿಂದ ನಿಗದಿತ ಪ್ರಮಾಣದ ಮೀಸಲಾತಿಯನ್ನು ಅನುಸರಿಸಲಾಗುತ್ತಿದೆ. ಆದರೆ ಇದರ ಅರಿವಿಲ್ಲದವರಂತೆ ವರ್ತಿಸುತ್ತಿರುವ ಮೀಸಲಾತಿ ವಿರೋಧಿಗಳು ದೇಶದ ಕರಾಳ ಇತಿಹಾಸವನ್ನು ಉದ್ದೇಶಪೂರ್ವಕವಾಗಿ ಮರೆಯುತ್ತಾರೆ.   ದುರಂತವೆಂದರೆ ಮೀಸಲಾತಿ ವಿರೋಧಿಗಳಲ್ಲಿ ಇತರೆ ಹಿಂದುಳಿದ ವರ್ಗಗಳಿಗೆ ಸೇರಿದವರ ಪಾಲು ಹೆಚ್ಚಿರುವುದು.

ಶಂಬೂಕ, ಏಕಲವ್ಯರ ಪಾಂಡಿತ್ಯವನ್ನು ನಿರುಪಯುಕ್ತಗೊಳಿಸಲು ನಡೆಸಿರುವ ಹುನ್ನಾರವನ್ನು ಈ ಶೂದ್ರ ಸಮುದಾಯದವರು ಮರೆತಿದ್ದಾರೆ. ವಿದ್ಯಾಭ್ಯಾಸದಲ್ಲಿ ಎಲ್ಲರಿಗೂ ಅವಕಾಶ ಮುಕ್ತವಾಗಿದೆಯಾದರೂ ಉದ್ಯೋಗದಲ್ಲಿ ಈ ಅವಕಾಶ ಎಲ್ಲರಿಗೂ ಅಷ್ಟು ಸುಲಭವಾಗಿ ಸಿಗುವುದು ಸಾಧ್ಯವಿಲ್ಲ. ಇದುವರೆಗೆ ಶಿಕ್ಷಣ, ಅಧಿಕಾರ, ಅಂತಸ್ತು ಹಾಗೂ ಆಸ್ತಿ ಸಂಪಾದಿಸಿರುವವರಿಗೆ ತಂತಾನೇ ಅವಕಾಶಗಳ ದಿಡ್ಡಿಬಾಗಿಲು ತೆರೆದುಕೊಂಡಿದ್ದರೆ, ಈ ಯಾವುದೂ ಇಲ್ಲದವರು ಮತ್ತೆ ಉದ್ಯೋಗಕ್ಕಾಗಿ ಅಲೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಶಂಬೂಕನ ತಲೆ ಕತ್ತರಿಸಿ ಅವನ ಜ್ಞಾನ ಅವನ ಸಮುದಾಯಕ್ಕೆ ಸಿಗದಂತೆ, ಏಕಲವ್ಯನ ಬೆರಳು ಕತ್ತರಿಸುವ ಮೂಲಕ ಅವನ ಜ್ಞಾನವನ್ನೇ ಇಲ್ಲವಾಗಿಸಿದ್ದಕ್ಕಿಂತ ಭೀಕರ ಸನ್ನಿವೇಶಗಳನ್ನು ಆಧುನಿಕ ಸಂದರ್ಭದಲ್ಲಿ ಸೃಜಿಸಲಾಗಿದೆ. ಹೇಗೆಂದರೆ ವಿದ್ಯಭ್ಯಾಸ ಪಡೆದ ತಳಸಮುದಾಯದ ಪ್ರತಿಭಾವಂತರಿಗೆ ತಮ್ಮ ಪರವಾಗಿ ಕರ್ತವ್ಯ ನಿರ್ವಹಿಸುವವರ ಬೆಂಬಲವಿಲ್ಲದೆ ಅವರ ವಿದ್ಯೆ ಅನುಪಯುಕ್ತವಾಗುವಂತೆ ವ್ಯವಸ್ಥಿತ ಸಂಚು ರೂಪಿಸಲಾಗಿದೆ. ಭವಿಷ್ಯದಲ್ಲಿ ಅವರು ಓದಿದ್ದೇ ವ್ಯರ್ಥ ಎಂಬ ನಿರ್ಧಾರಕ್ಕೆ ಬರಲು ಪ್ರೇರಣೆ ನೀಡಲಾಗುತ್ತಿದೆ. ಇದರ ಮುಂದುವರೆದ ರೂಪವನ್ನೇ ಈಗಲೂ ಹೊಸರೂಪದಲ್ಲಿ ಅಸ್ತಿತ್ವದಲ್ಲಿಡಲು ಈ ಮೇಲ್ವರ್ಗ ಹಗಲಿರುಳೂ ಕಾರ್ಯನಿರತವಾಗಿರುವಂತಿದೆ. ಮೀಸಲಾತಿ ವಿರೋಧಕ್ಕೆ ಪೂರಕ ಜನಾಭಿಪ್ರಾಯ ರೂಪಿಸುವಲ್ಲಿ ಕೂಡ ಯಶಸ್ವಿಯಾಗಿರುವುದು ಇದಕ್ಕೆ ನಿದರ್ಶನ.

ಇನ್ನು ಗ್ಯಾಟ್, ವಿದೇಶಿ ನೇರ ಬಂಡವಾಳ ಹೂಡಿಕೆ ಒಪ್ಪಂದ, ಬಂಡವಾಳ ಹಿಂತೆಗೆತ ಮೊದಲಾದವುಗಳಿಂದ ದೇಶದಲ್ಲಿ ಸರ್ಕಾರಿ ಉದ್ಯೋಗಗಳ ಲಭ್ಯತೆ ಕನಿಷ್ಠಮಟ್ಟಕ್ಕೆ ಕುಸಿಯಲಿದೆ. ಮೀಸಲಾತಿ ವಿರೋಧಿಗಳು ಇದನ್ನು ಯಶಸ್ವಿಯಾಗಿ ಆಗುಮಾಡುತ್ತಿದ್ದಾರೆ. ರೋಗಗ್ರಸ್ಥತೆಯ ಹೆಸರಿನಲ್ಲಿ ಹಂತಹಂತವಾಗಿ ಸರ್ಕಾರಿ ಕೈಗಾರಿಕೆ, ಉದ್ಯಿಮೆಗಳನ್ನು ಮುಚ್ಚುತ್ತಿರುವ ಹೊತ್ತಿನಲ್ಲಿ ಖಾಸಗಿ ಕೈಗಾರಿಕೆಗಳು ಹಾಗೂ ಉದ್ಯಿಮೆಗಳು ಸಾವಿರಾರು ಕೋಟಿ ರೂ.ಗಳ ಲಾಭ ಗಳಿಸುತ್ತಿವೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಖಾಸಗಿ ಉದಿಮೆಗಳನ್ನುಳಿದು ಸರ್ಕಾರದ ಯಾವುದೇ ಕೈಗಾರಿಕೆಗಳೂ ಅಸ್ತಿತ್ವದಲ್ಲಿರುವುದು ಸಾಧ್ಯವಿಲ್ಲ.ಆದ್ದರಿಂದ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಯನ್ನು ಜಾರಿಗೆ ತರಬೇಕಿದೆ. ಭಾರತದಲ್ಲಿ ದಕ್ಷ ಕೆಲಸಗಾರರಿಗೆ ಕೊರತೆ ಇಲ್ಲ. ಆದರೆ ಸ್ವಜಾತಿಯ ಕಾರಣದಿಂದ ದಕ್ಷತೆ ಮತ್ತು ಅದಕ್ಷತೆಯನ್ನು ಅಳೆಯುವ ಕೆಲಸ ಸದ್ಯಕ್ಕೆ ಅಸ್ತಿತ್ವದಲ್ಲಿದೆ. ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಕಡ್ಡಾಯವಾಗಿ ಜಾರಿಗೆ ಬಂದಲ್ಲಿ ಈಗ ವಿದ್ಯಾಭ್ಯಾಸದಲ್ಲಿ ಇರುವ ಸ್ಪರ್ಧೆ ಉದ್ಯೋಗ ಕ್ಷೇತ್ರದಲ್ಲೂ ಏರ್ಪಟ್ಟು ಎಲ್ಲರಿಗೂ ಉದ್ಯೋಗದ ಅವಕಾಶ ನಿರ್ಮಾಣವಾಗಬಹುದು.

ಡಾ. ಪ್ರದೀಪ್ ಮಾಲ್ಗುಡಿ, ಪತ್ರಕರ್ತ, ಸಂಶೋಧಕ

Share:

Leave a Reply

Your email address will not be published. Required fields are marked *

More Posts

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ

On Key

Related Posts

ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ,ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ

ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ. ಅಂದರೆ ಪೌಷ್ಟಿಕ ಆಹಾರ ಮಣ್ಣುಪಾಲಾಗುತ್ತದೆ. ಅದೇ ಹಾಲನ್ನು ಅವಶ್ಯಕತೆ ಇರುವವರಿಗೆ ಆಹಾರವಾಗಿ ನೀಡಬಹುದಲ್ಲವೇ? ದೈವ ಭಕ್ತಿಗೂ, ಧರ್ಮ ಭಕ್ತಿಗೂ, ಪರಿಸರ

ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

ಇಂದು ಆಗಸ್ಟ್ 20. ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಮಾತುಕತೆ…….. ವಿಜ್ಞಾನ ಮತ್ತು ಧರ್ಮ ಒಂದಕ್ಕೊಂದು ಪೂರಕವೇ ಅಥವಾ ವಿರುದ್ದವೇ ಅಥವಾ ಪರ್ಯಾಯವೇ ಅಥವಾ ಸಮಾನಾಂತರವೇ ಅಥವಾ ಪ್ರತಿಸ್ಪರ್ಧಿಗಳೇ ಅಥವಾ ಸಂಬಂಧವಿಲ್ಲವೇ….. ಧರ್ಮ ( ಮತ ) ಎಂಬುದು

ಬಸವ ಪಂಚಮಿ: ಒಂದು ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ

ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಆದರೆ ಸಾಂಪ್ರದಾಯವಾದಿಗಳು ಆ ಆಚರಣೆಗಳನ್ನು ತಿರುಚಿ ಅವುಗಳಿಗೆ ಧಾರ್ಮಿಕ ಮೌಢ್ಯದ ಹಿನ್ನೆಲೆಯನ್ನು ಹೆಣೆದಿದ್ದಾರೆ. ಕೇವಲ ಧಾರ್ಮಿಕ ಹಿನ್ನೆಲೆಯಷ್ಟೆಯಲ್ಲದೆ ಅನೇಕ ಬಗೆಯ ಮೌಢ್ಯಗಳನ್ನು ಜನಮನದಲ್ಲಿ ಬಿತ್ತಿದ್ದಾರೆ.

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದಿದ್ದಾರೆ. ಎಲ್ಲಾ ರೀತಿಯ ಅಸಮಾನತೆಯನ್ನು ಕೊನೆಗಾಣಿಸಿ ಸಮಾನತೆಯನ್ನು ತರುವುದು ನಮ್ಮ ಸಂವಿಧಾನದ

ಮೀಸಲಾತಿ ನೀತಿಯನ್ನು ಪುನರ್ ರಚಿಸಬೇಕಾದ ಅಗತ್ಯತೆ

ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಮೀಸಲಾತಿ ನೀತಿಯ ಅನುಷ್ಠಾನದಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಆದರೂ ಇಂದು ಹಲವು ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗಿವೆ. ಒಳಮೀಸಲಾತಿ, ಕೆನೆಪದರ ಬಡ್ತಿಯಲ್ಲಿ ಮೀಸಲಾತಿ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಎಂಬ ಪ್ರಶ್ನೆಗಳು ಕಾಡುತ್ತಿವೆ. ಮೀಸಲಾತಿ ಎಂದರೇನು