ಸರ್ವೋಚ್ಚ ನ್ಯಾಯಾಲಯದ ಅಧಿಕಾರಿಗಳು ಮತ್ತು ನೌಕರರು ಹಾಗೂ ವೆಚ್ಚಗಳು

146. ಸರ್ವೋಚ್ಚ ನ್ಯಾಯಾಲಯದ ಅಧಿಕಾರಿಗಳು ಮತ್ತು ನೌಕರರು ಹಾಗೂ ವೆಚ್ಚಗಳು:- (1) ಸರ್ವೋಚ್ಚ ನ್ಯಾಯಾಲಯದ ಅಧಿಕಾರಿಗಳ ಮತ್ತು ನೌಕರರ ನೇಮಕಗಳನ್ನು ಭಾರತದ ಮುಖ್ಯ ನ್ಯಾಯಮೂರ್ತಿಯು ಅಥವಾ ಅವನು ನಿರ್ದೇಶಿಸಬಹುದಾದಂಥ ಆ ನ್ಯಾಯಾಲಯದ ಇತರ ನ್ಯಾಯಾಧೀಶನು ಅಥವಾ ಅಧಿಕಾರಿಯು ಮಾಡತಕ್ಕದ್ದು:

ಪರಂತು, ರಾಷ್ಟ್ರಪತಿಯು ನಿಯಮದ ಮೂಲಕ, ಆ ನಿಯಮದಲ್ಲಿ ನಿರ್ದಿಷ್ಟಪಡಿಸಬಹುದಾದಂಥ ಸಂದರ್ಭಗಳಲ್ಲಿ ಆ ನ್ಯಾಯಾಲಯಕ್ಕೆ ಆ ಮೊದಲೇ ಸೇರಿಲ್ಲದ ಯಾರೇ ವ್ಯಕ್ತಿಯನ್ನು, ಕೇಂದ್ರ ಲೋಕಸೇವಾ ಆಯೋಗದೊಡನೆ ಸಮಾಲೋಚನೆ ಮಾಡಿದ ಹೊರತು ನ್ಯಾಯಾಲಯಕ್ಕೆ ಸಂಬಂಧಪಟ್ಟ ಯಾವುದೇ ಪದಕ್ಕೆ ನೇಮಕ ಮಾಡತಕ್ಕದ್ದಲ್ಲವೆಂದು ಅಗತ್ಯಪಡಿಸಬಹುದು.

(2) ಸಂಸತ್ತು ಮಾಡಿದ ಯಾವುದೇ ಕಾನೂನಿನ ಉಪಬಂಧಗಳಿಗೊಳಪಟ್ಟು, ಸರ್ವೋಚ್ಚ ನ್ಯಾಯಾಲಯದ ಅಧಿಕಾರಿಗಳ ಮತ್ತು ನೌಕರರ ಸೇವಾ ಷರತ್ತುಗಳು, ಭಾರತದ ಮುಖ್ಯ ನ್ಯಾಯಮೂರ್ತಿಯು ಅಥವಾ ಆ ಉದ್ದೇಶಕ್ಕಾಗಿ ನಿಯಮಗಳನ್ನು ರಚಿಸಲು ಅವನು ಅಧಿಕೃತಗೊಳಿಸಿದ ಆ ನ್ಯಾಯಾಲಯದ ಇತರ ನ್ಯಾಯಾಧೀಶನು ಅಥವಾ ಅಧಿಕಾರಿಯು ರಚಿಸಿದ ನಿಯಮಗಳ ಮೂಲಕ ನಿಯಮಿಸಬಹುದಾದಂತೆ ಇರತಕ್ಕದ್ದು:

ಪರಂತು. ಈ ಖಂಡದ ಮೇರೆಗೆ ರಚಿತವಾದ ನಿಯಮಗಳು ಸಂಬಳಗಳಿಗೆ, ಭತ್ಯೆಗಳಿಗೆ, ರಜೆಗೆ ಅಥವಾ ನಿವೃತ್ತಿ ವೇತನಗಳಿಗೆ ಸಂಬಂಧಪಡುವಷ್ಟರ ಮಟ್ಟಿಗೆ, ಆ ನಿಯಮಗಳಿಗೆ ರಾಷ್ಟ್ರಪತಿಯ ಅನುಮೋದನೆಯು ಅಗತ್ಯವಾಗಿರತಕ್ಕದ್ದು.

(3) ಸರ್ವೋಚ್ಚ ನ್ಯಾಯಾಲಯದ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಅಥವಾ ಅವರಿಗೆ ಸಂಬಂಧಿಸಿದಂತೆ ಸಂದಾಯವಾಗಬೇಕಾದ ಎಲ್ಲ ಸಂಬಳಗಳು, ಭತ್ಯೆಗಳು ಮತ್ತು ನಿವೃತ್ತಿವೇತನಗಳು ಸೇರಿದಂತೆ ಆ ನ್ಯಾಯಾಲಯದ ಆಡಳಿತ ವೆಚ್ಚವನ್ನು ಭಾರತದ ಸಂಚಿತ ನಿಧಿಯ ಮೇಲೆ ಹೊರಿಸತಕ್ಕದ್ದು ಮತ್ತು ಆ ನ್ಯಾಯಾಲಯವು ಸ್ವೀಕರಿಸುವ ಯಾವುದೇ ಫೀಜುಗಳು ಮತ್ತು ಇತರ ಹಣವು ಆ ನಿಧಿಯ ಭಾಗವಾಗಿರತಕ್ಕದ್ದು.

147. ಅರ್ಥ ವಿವರಣೆ:- ಈ ಅಧ್ಯಾಯದಲ್ಲಿ ಮತ್ತು VIನೇ ಭಾಗದ Vನೇ ಅಧ್ಯಾಯದಲ್ಲಿ ಈ ಸಂವಿಧಾನದ ಅರ್ಥ ವಿವರಣೆಗೆ ಸಂಬಂಧಿಸಿದ ಯಾವುದೇ ಮುಖ್ಯ ಕಾನೂನು ಪ್ರಶ್ನೆಯ ಉಲ್ಲೇಖಗಳು, 1935ನೆಯ ಇಸವಿಯ ಭಾರತ ಸರ್ಕಾರ ಅಧಿನಿಯಮದ (ಆ ಅಧಿನಿಯಮವನ್ನು ತಿದ್ದುಪಡಿ ಮಾಡುವ ಅಥವಾ ಅದಕ್ಕೆ ಸೇರ್ಪಡೆ ಮಾಡುವ ಯಾವುದೇ ಅಧಿನಿಯಮವೂ ಸೇರಿದಂತೆ) ಅಥವಾ ಅದರ ಮೇರೆಗೆ ಮಾಡಿದ ಯಾವುದೇ ಆದೇಶದ ಅಥವಾ ಮಂತ್ರಾಲೋಚನಾ ಸಭೆಯ ಯಾವುದೇ ಆದೇಶದ ಅಥವಾ 1947ರ ಭಾರತ ಸ್ವಾತಂತ್ರ್ಯ ಅಧಿನಿಯಮದ ಅಥವಾ ಅದರ ಮೇರೆಗೆ ಮಾಡಿದ ಯಾವುದೇ ಆದೇಶದ ಅರ್ಥ ವಿವರಣೆಗೆ ಸಂಬಂಧಪಟ್ಟ ಯಾವುದೇ ಮುಖ್ಯ ಕಾನೂನು ಪ್ರಶ್ನೆಯ ಉಲ್ಲೇಖಗಳನ್ನೂ ಒಳಗೊಂಡಿರುವ ಹಾಗೆ ಅವುಗಳನ್ನು ಅರ್ಥೈಸತಕ್ಕದ್ದು.

Source: The Constitution Of India (AS ON 14th JANUARY 2019), Government Of India, Ministry of Law and Justice, Legislative Department, Karnataka Official Language (Legislative) Commission and Directorate of Translations, Government of Karnataka, Page No. 58-59

Share:

Leave a Reply

Your email address will not be published. Required fields are marked *

More Posts

ವಿಧಾನಸಭೆಗಳ ಸಂರಚನೆ

ವಿಧಾನಸಭೆಗಳ ಸಂರಚನೆ 170. ವಿಧಾನಸಭೆಗಳ ಸಂರಚನೆ:- (1956ನೆಯ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ 9ನೆಯ ಪ್ರಕರಣದ ಮೂಲಕ

ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು

169. ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು:- (1) 168ನೆಯ ಅನುಚ್ಛೇದದಲ್ಲಿ ಏನೇ ಇದ್ದಾಗ್ಯೂ, ವಿಧಾನಪರಿಷತ್ತು ಇರುವ ರಾಜ್ಯದಲ್ಲಿ

On Key

Related Posts

Composition of the Legislative Assemblies

Composition of the Legislative Assemblies:- (Subs. by the Constitution (Seventh Amendment) Act, 1956, s. 9, for art. 170.) (1) Subject to the provisions of article 333, the Legislative Assembly of

ವಿಧಾನಸಭೆಗಳ ಸಂರಚನೆ

ವಿಧಾನಸಭೆಗಳ ಸಂರಚನೆ 170. ವಿಧಾನಸಭೆಗಳ ಸಂರಚನೆ:- (1956ನೆಯ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ 9ನೆಯ ಪ್ರಕರಣದ ಮೂಲಕ ಮೂಲ ಅನುಚ್ಛೇದಕ್ಕೆ ಬದಲಾಗಿ ಪ್ರತ್ಯಾಯೋಜಿಸಲಾಗಿದೆ.) (1) 333ನೆಯ ಅನುಚ್ಛೇದದ ಉಪಬಂಧಗಳಿಗೊಳಪಟ್ಟು, ಪ್ರತಿಯೊಂದು ರಾಜ್ಯದ ವಿಧಾನಸಭೆಯು ಆ ರಾಜ್ಯದಲ್ಲಿನ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಿಂದ

ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು

169. ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು:- (1) 168ನೆಯ ಅನುಚ್ಛೇದದಲ್ಲಿ ಏನೇ ಇದ್ದಾಗ್ಯೂ, ವಿಧಾನಪರಿಷತ್ತು ಇರುವ ರಾಜ್ಯದಲ್ಲಿ ಅದನ್ನು ರದ್ದುಗೊಳಿಸಬೇಕೆಂದು ಅಥವಾ ಅಂಥ ಪರಿಷತ್ತು ಇಲ್ಲದ ರಾಜ್ಯದಲ್ಲಿ ಅಂಥ ಪರಿಷತ್ತನ್ನು ಸೃಜಿಸಬೇಕೆಂದು ಆ ರಾಜ್ಯದ ವಿಧಾನಸಭೆಯು ಆ ಸಭೆಯ ಒಟ್ಟು

CHAPTER III- THE STATE LEGISLATURE

General 168. Constitution of Legislatures in States:- (1) For every State there shall be a Legislature which shall consist of the Governor, and- (a) in the States of [Andhra Pradesh,]