10 ದಿನಗಳ ಸಂಪೂರ್ಣ ಉಚಿತ ಕಲಾ ತರಬೇತಿ ಶಿಬಿರ
ಬೆಳಗಾವಿ: ಸತೀಶ್ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಅಭಿನಯ, ಗಾಯನ, ಸಂಗೀತ ವಾದ್ಯಗಳು, ಮಾಸ್ಕ್ ಮೇಕಿಂಗ್ ಮತ್ತು ನಾಟಕ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ. ಮೊದಲು ಕರೆಮಾಡಿದ 75 ಅಭ್ಯರ್ಥಿಗಳಿಗೆ ಮಾತ್ರ ಅವಕಾಶವಿದ್ದು, ಇದರಲ್ಲಿ 50 ಯುವಕರಿಗೆ ಮತ್ತು 25 ಯುವತಿಯರನ್ನು ಆಯ್ಕೆ ಮಾಡಿಕೊಳ್ಳಲಾಗುವುದು.
ಗೋಕಾಕ್ ನಲ್ಲಿ 10 ದಿನಗಳ ಕಾಲ ನಡೆಯಲಿರುವ ಕಲೆಗಳ ಕಲರವ ಶಿಬಿರ ಸಂಪೂರ್ಣ ಉಚಿತವಾಗಿದ್ದು, ಊಟ ಮತ್ತು ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಪ್ರಯತ್ನ ನಿಮ್ಮದು ಪ್ರೋತ್ಸಾಹ ನಮ್ಮದು ಧ್ಯೇಯವಾಕ್ಯದಡಿ ಸತೀಶ್ ಜಾರಕಿಹೊಳಿ ಫೌಂಡೇಶನ್ ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು, ಕಲೆಗಳ ಕಲರವ ಶಿಬಿರದಲ್ಲಿ ಭಾಗವಹಿಸಲು ಆಸಕ್ತಿಯುಳ್ಳವರು ಈ ಕೆಳಗಿನ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡುವ ಮೂಲಕ ನೋಂದಾಯಿಸಬಹುದು.
ಮೊ: 9481457576, 7975591515