ಭಾರತದ ಸಂವಿಧಾನ – ಭಾಗ 1: ಒಕ್ಕೂಟ ಮತ್ತು ಅದರ ರಾಜ್ಯಕ್ಷೇತ್ರ

1. ಒಕ್ಕೂಟದ ಹೆಸರು ಮತ್ತು ರಾಜ್ಯಕ್ಷೇತ್ರ:- (1) ಇಂಡಿಯಾ, ಅರ್ಥಾತ್ ಭಾರತವು, ರಾಜ್ಯಗಳ ಒಂದು ಒಕ್ಕೂಟವಾಗಿರತಕ್ಕದ್ದು. (2) ಅದರ ರಾಜ್ಯಗಳು ಮತ್ತು ಅವುಗಳ ರಾಜ್ಯಕ್ಷೇತ್ರಗಳು ಮೊದಲನೆಯ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿರುವಂಥವುಗಳು ಆಗಿರತಕ್ಕದ್ದು.] (1956ನೆಯ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ 2ನೆಯ ಪ್ರಕರಣದ ಮೂಲಕ ಮೂಲ (2)ನೆಯ ಖಂಡಕ್ಕೆ ಬದಲಾಗಿ ಪ್ರತ್ಯಾಯೋಜಿಸಲಾಗಿದೆ.) (3) ಭಾರತದ ರಾಜ್ಯಕ್ಷೇತ್ರವು –     (ಎ) ರಾಜ್ಯಗಳ ರಾಜ್ಯಕ್ಷೇತ್ರಗಳನ್ನು: (ಬಿ) ಮೊದಲನೆಯ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿರುವ ಒಕ್ಕೂಟ ರಾಜ್ಯಕ್ಷೇತ್ರಗಳನ್ನು: ಮತ್ತು) (2ನೆಯ ಪ್ರಕರಣದ ಮೂಲಕ ಮೂಲ (ಬಿ) ಉಪಖಂಡಕ್ಕೆ ಬದಲಾಗಿ ಪ್ರತ್ಯಾಯೋಜಿಸಲಾಗಿದೆ.) (ಸಿ) ಆರ್ಜಿಸಬಹುದಾದಂಥ ಇತರ ರಾಜ್ಯಕ್ಷೇತ್ರಗಳನ್ನು ಒಳಗೊಂಡಿರತಕ್ಕದ್ದು.

2. ನೂತನ ರಾಜ್ಯಗಳ ಸೇರ್ಪಡೆ ಅಥವಾ ಸ್ಥಾಪನೆ: ಸಂಸತ್ತು ಕಾನೂನಿನ ಮೂಲಕ ಸೂಕ್ತವೆಂದು ತೋರುವ ನಿಬಂಧನೆಗಳ ಮತ್ತು ಷರತ್ತುಗಳ ಮೇಲೆ ನೂತನ ರಾಜ್ಯಗಳನ್ನು ಒಕ್ಕೂಟಕ್ಕೆ ಸೇರಿಸಿಕೊಳ್ಳಬಹುದು ಅಥವಾ ನೂತನ ರಾಜ್ಯಗಳನ್ನು ಸ್ಥಾಪಿಸಬಹುದು.

2 ಎ. [ಒಕ್ಕೂಟದೊಂದಿಗೆ ಸಿಕ್ಕಿಂ ಸಹಯುಕ್ತವಾಗಿರತಕ್ಕದ್ದು.] 1975ನೆಯ ಇಸವಿಯ ಸಂವಿಧಾನದ (ಮೂವತ್ತಾರನೆಯ ತಿದ್ದುಪಡಿ) ಅಧಿನಿಯಮದ 5ನೆಯ ಪ್ರಕರಣದ ಮೇರೆಗೆ (26-4-1975ರಿಂದ ಜಾರಿಗೆ ಬರುವಂತೆ) ನಿರಸಿತವಾಗಿದೆ. (1974ನೆಯ ಇಸವಿಯ ಸಂವಿಧಾನ (ಮೂವತ್ತೈದನೆಯ ತಿದ್ದುಪಡಿ) ಅಧಿನಿಯಮದ 2ನೆಯ ಪ್ರಕರಣದ ಮೂಲಕ ಅನುಚ್ಛೇದ 2ಎಯನ್ನು (1.3.1975 ರಿಂದ ಜಾರಿಗೆ ಬರುವಂತೆ) ಸೇರಿಸಲಾಗಿತ್ತು.)

3. ನೂತನ ರಾಜ್ಯಗಳ ರಚನೆ ಮತ್ತು ಈಗಿರುವ ರಾಜ್ಯಗಳ ಪ್ರದೇಶಗಳ, ಸರಹದ್ದುಗಳ ಅಥವಾ ಹೆಸರುಗಳ ಬದಲಾವಣೆ:- ಸಂಸತ್ತು ಕಾನೂನಿನ ಮೂಲಕ – (ಎ) ಯಾವುದೇ ರಾಜ್ಯದಿಂದ ಯಾವುದೇ ರಾಜ್ಯಕ್ಷೇತ್ರವನ್ನು ಪ್ರತ್ಯೇಕಿಸುವುದರಿಂದಾಗಲಿ ಅಥವಾ ಎರಡು ಅಥವಾ ಹೆಚ್ಚು ರಾಜ್ಯಗಳನ್ನು ಅಥವಾ ರಾಜ್ಯಗಳ ಭಾಗಗಳನ್ನು ಒಂದುಗೂಡಿಸುವುದರಿಂದಾಗಲಿ ಅಥವಾ ಒಂದು ರಾಜ್ಯದ ಯಾವುದಾದರೂ ಭಾಗಕ್ಕೆ ಯಾವುದಾದರೂ ಕ್ಷೇತ್ರವನ್ನು ಸೇರಿಸುವುದರಿಂದಾಗಲಿ ಒಂದು ಹೊಸ ರಾಜ್ಯವನ್ನು ರಚಿಸಬಹುದು; (ಬಿ) ಯಾವುದೇ ರಾಜ್ಯದ ಪ್ರದೇಶವನ್ನು ಹೆಚ್ಚಿಸಬಹುದು; (ಸಿ) ಯಾವುದೇ ರಾಜ್ಯದ ಪ್ರದೇಶವನ್ನು ಕಡಿಮೆ ಮಾಡಬಹುದು; (ಡಿ) ಯಾವುದೇ ರಾಜ್ಯದ ಸರಹದ್ದುಗಳನ್ನು ಬದಲಾಯಿಸಬಹುದು; (ಇ) ಯಾವುದೇ ರಾಜ್ಯದ ಹೆಸರನ್ನು ಬದಲಾಯಿಸಬಹುದು: [ಪರಂತು, ಈ ಉದ್ದೇಶಕ್ಕಾಗಿ ಯಾವುದೇ ವಿಧೇಯಕವನ್ನು, ರಾಷ್ಟ್ರಪತಿಯ ಶಿಫಾರಸ್ಸಿನ ಮೇಲಲ್ಲದೆ ಮತ್ತು ಈ ವಿಧೇಯಕದಲ್ಲಿ ಅಡಕವಾದ ಪ್ರಸ್ತಾವವು (1955ನೆಯ ಇಸವಿಯ ಸಂವಿಧಾನ (ಐದನೆಯ ತಿದ್ದುಪಡಿ) ಅಧಿನಿಯಮದ 2ನೆಯ ಪ್ರಕರಣದ ಮೂಲಕ ಮೂಲ ಪರಂತುಕಕ್ಕೆ ಬದಲಾಗಿ ಪ್ರತ್ಯಾಯೋಜಿಸಲಾಗಿದೆ.) ರಾಜ್ಯಗಳ ಪೈಕಿ ಯಾವುದೇ ರಾಜ್ಯದ ಪ್ರದೇಶದ ಸರಹದ್ದುಗಳ ಅಥವಾ ಹೆಸರಿನ ಮೇಲೆ ಪರಿಣಾಮಬೀರುವಲ್ಲಿ, ಆ ರಾಜ್ಯದ ವಿಧಾನಮಂಡಲವು, ಉಲ್ಲೇಖದಲ್ಲಿ ನಿರ್ದಿಷ್ಟಪಡಿಸಬಹುದಾದ ಅವಧಿಯೊಳಗೆ ಅಥವಾ ರಾಷ್ಟ್ರಪತಿಯು ಕೊಡಬಹುದಾದ ಇನ್ನೂ ಹೆಚ್ಚಿನ ಅವಧಿಯೊಳಗೆ ಅದರ ಬಗ್ಗೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಲು, ರಾಷ್ಟ್ರಪತಿಯು ಆ ವಿಧೇಯಕವನ್ನು ಆ ವಿಧಾನಮಂಡಲಕ್ಕೆ ಕಳುಹಿಸಿರುವ ಹೊರತು ಮತ್ತು ಹಾಗೆ ನಿರ್ದಿಷ್ಟಪಡಿಸಿದ ಅವಧಿಯು ಅಥವಾ ಕೊಟ್ಟಿರತಕ್ಕಂಥ ಹೆಚ್ಚಿನ ಅವಧಿಯು ಮುಕ್ತಾಯವಾದ ಹೊರತು, ಸಂಸತ್ತಿನ ಯಾವುದೇ ಸದನದಲ್ಲಿ ಮಂಡಿಸತಕ್ಕದ್ದಲ್ಲ.] (1956ನೆಯ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ 29ನೆಯ ಪ್ರಕರಣದ ಹಾಗೂ ಅನುಸೂಚಿಯ ಮೂಲಕ “ಮೊದಲನೆಯ ಅನುಸೂಚಿಯ (ಎ) ಅಥವಾ (ಬಿ) ಭಾಗದಲ್ಲಿ ನಿರ್ದಿಷ್ಟಪಡಿಸಿರುವ” ಎಂಬ ಪದಗಳನ್ನು ಮತ್ತು ಅಕ್ಷರಗಳನ್ನು ಬಿಟ್ಟುಬಿಡಲಾಗಿದೆ.) [ವಿವರಣೆ I- ಈ ಅನುಚ್ಛೇದದಲ್ಲಿ (ಎ) ಯಿಂದ (ಇ) ವರೆಗಿನ ಖಂಡಗಳಲ್ಲಿರುವ “ರಾಜ್ಯ” ಎಂಬ ಪದವು ಒಕ್ಕೂಟ ರಾಜ್ಯಕ್ಷೇತ್ರವನ್ನು ಒಳಗೊಳ್ಳುತ್ತದೆ; ಆದರೆ ಪರಂತುಕದಲ್ಲಿನ “ರಾಜ್ಯ” ಎಂಬ ಪದವು ಒಕ್ಕೂಟ ರಾಜ್ಯಕ್ಷೇತ್ರವನ್ನು ಒಳಗೊಳ್ಳುವುದಿಲ್ಲ. (1966ನೆಯ ಇಸವಿಯ ಸಂವಿಧಾನ (ಹದಿನೆಂಟನೆಯ ತಿದ್ದುಪಡಿ) ಅಧಿನಿಯಮದ 2ನೆಯ ಪ್ರಕರಣದ ಮೂಲಕ ಸೇರಿಸಲಾಗಿದೆ.) ವಿವರಣೆ II- (ಎ) ಖಂಡದಿಂದ ಸಂಸತ್ತಿಗೆ ಪ್ರದತ್ತವಾದ ಅಧಿಕಾರವು, ಯಾವುದೇ ರಾಜ್ಯದ ಅಥವಾ ಒಕ್ಕೂಟ ರಾಜ್ಯಕ್ಷೇತ್ರದ ಒಂದು ಭಾಗವನ್ನು ಇತರ ಯಾವುದೇ ರಾಜ್ಯಕ್ಕೆ ಅಥವಾ ಒಕ್ಕೂಟ ರಾಜ್ಯಕ್ಷೇತ್ರಕ್ಕೆ ಸೇರಿಸಿ ಒಂದು ನೂತನ ರಾಜ್ಯವನ್ನು ಅಥವಾ ಒಂದು ನೂತನ ಒಕ್ಕೂಟ ರಾಜ್ಯಕ್ಷೇತ್ರವನ್ನು ರಚಿಸುವಂಥ ಅಧಿಕಾರವನ್ನು ಒಳಗೊಳ್ಳುತ್ತದೆ.]

4. ಎರಡನೆಯ ಮತ್ತು ಮೂರನೆಯ ಅನುಚ್ಛೇದಗಳ ಮೇರೆಗೆ ಮಾಡಲಾದ ಕಾನೂನುಗಳು, ಮೊದಲನೆಯ ಮತ್ತು ನಾಲ್ಕನೆಯ ಅನುಸೂಚಿಗಳ ತಿದ್ದುಪಡಿಯ ಬಗ್ಗೆ ಮತ್ತು ಪೂರಕ, ಪ್ರಾಸಂಗಿಕ ಮತ್ತು ಆನುಷಂಗಿಕ ವಿಷಯಗಳ ಬಗ್ಗೆ ಉಪಬಂಧವನ್ನು ಕಲ್ಪಿಸುವುದು:- (1) 2ನೆಯ ಅನುಚ್ಛೇದದಲ್ಲಿ ಅಥವಾ 3ನೆಯ ಅನುಚ್ಛೇದದಲ್ಲಿ ಉಲ್ಲೇಖಿಸಲಾದ ಯಾವುದೇ ಕಾನೂನು ಆ ಕಾನೂನಿನ ಉಪಬಂಧಗಳನ್ನು ಜಾರಿಗೊಳಿಸುವುದಕ್ಕಾಗಿ ಮೊದಲನೆಯ ಮತ್ತು ನಾಲ್ಕನೆಯ ಅನುಸೂಚಿಗಳ ತಿದ್ದುಪಡಿಗೆ ಅವಶ್ಯವಾಗಬಹುದಾದಂಥ ಉಪಬಂಧಗಳನ್ನು ಒಳಗೊಂಡಿರತಕ್ಕದ್ದು ಮತ್ತು (ಅಂಥ ಕಾನೂನಿನ ಪರಿಣಾಮಕ್ಕೆ ಒಳಗಾಗಿರುವ ರಾಜ್ಯಕ್ಕೆ ಅಥವಾ ರಾಜ್ಯಗಳಿಗೆ ಸಂಸತ್ತಿನಲ್ಲಿನ ಹಾಗೂ ಅಂಥ ರಾಜ್ಯದ ವಿಧಾನಮಂಡಲದಲ್ಲಿನ ಅಥವಾ ರಾಜ್ಯಗಳ ವಿಧಾನಮಂಡಲಗಳಲ್ಲಿನ ಪ್ರಾತಿನಿಧ್ಯಕ್ಕೆ ಸಂಬಂಧಿಸಿದ ಉಪಬಂಧಗಳು ಒಳಗೊಂಡು) ಸಂಸತ್ತು ಅವಶ್ಯವೆಂದು ಭಾವಿಸಬಹುದಾದಂಥ ಪೂರಕ, ಪ್ರಾಸಂಗಿಕ ಮತ್ತು ಆನುಷಂಗಿಕ ಉಪಬಂಧಗಳು ಸಹ ಆ ಕಾನೂನಿನಲ್ಲಿ ಒಳಗೊಂಡಿರಬಹುದು. (2) ಹಿಂದೆ ಹೇಳಿದಂಥ ಯಾವುದೇ ಕಾನೂನನ್ನು. 368ನೆಯ ಅನುಚ್ಛೇದದ ಉದ್ದೇಶಗಳಿಗಾಗಿ, ಈ ಸಂವಿಧಾನದ ಒಂದು ತಿದ್ದುಪಡಿಯೆಂದು ಭಾವಿಸತಕ್ಕದ್ದಲ್ಲ.

ಮೂಲ: ಭಾರತದ ಸಂವಿಧಾನ (1ನೇ ಮೇ, 2011ರಂದು ಇದ್ದಂತೆ), ಭಾರತ ಸರ್ಕಾರ, ಕಾನೂನು ಮತ್ತು ನ್ಯಾಯ ಮಂತ್ರಾಲಯ, ವಿಧಾಯಿ ಇಲಾಖೆ, ಕರ್ನಾಟಕ ರಾಜ ಭಾಷಾ (ವಿಧಾಯೀ) ಆಯೋಗ ಮತ್ತು ಭಾಷಾಂತರ ನಿರ್ದೇಶನಾಲಯ, ಕರ್ನಾಟಕ ಸರ್ಕಾರ, ಪು. 2 ಮತ್ತು 3

Share:

Leave a Reply

Your email address will not be published. Required fields are marked *

More Posts

ವಿಧಾನಸಭೆಗಳ ಸಂರಚನೆ

ವಿಧಾನಸಭೆಗಳ ಸಂರಚನೆ 170. ವಿಧಾನಸಭೆಗಳ ಸಂರಚನೆ:- (1956ನೆಯ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ 9ನೆಯ ಪ್ರಕರಣದ ಮೂಲಕ

ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು

169. ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು:- (1) 168ನೆಯ ಅನುಚ್ಛೇದದಲ್ಲಿ ಏನೇ ಇದ್ದಾಗ್ಯೂ, ವಿಧಾನಪರಿಷತ್ತು ಇರುವ ರಾಜ್ಯದಲ್ಲಿ

On Key

Related Posts

Composition of the Legislative Assemblies

Composition of the Legislative Assemblies:- (Subs. by the Constitution (Seventh Amendment) Act, 1956, s. 9, for art. 170.) (1) Subject to the provisions of article 333, the Legislative Assembly of

ವಿಧಾನಸಭೆಗಳ ಸಂರಚನೆ

ವಿಧಾನಸಭೆಗಳ ಸಂರಚನೆ 170. ವಿಧಾನಸಭೆಗಳ ಸಂರಚನೆ:- (1956ನೆಯ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ 9ನೆಯ ಪ್ರಕರಣದ ಮೂಲಕ ಮೂಲ ಅನುಚ್ಛೇದಕ್ಕೆ ಬದಲಾಗಿ ಪ್ರತ್ಯಾಯೋಜಿಸಲಾಗಿದೆ.) (1) 333ನೆಯ ಅನುಚ್ಛೇದದ ಉಪಬಂಧಗಳಿಗೊಳಪಟ್ಟು, ಪ್ರತಿಯೊಂದು ರಾಜ್ಯದ ವಿಧಾನಸಭೆಯು ಆ ರಾಜ್ಯದಲ್ಲಿನ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಿಂದ

ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು

169. ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು:- (1) 168ನೆಯ ಅನುಚ್ಛೇದದಲ್ಲಿ ಏನೇ ಇದ್ದಾಗ್ಯೂ, ವಿಧಾನಪರಿಷತ್ತು ಇರುವ ರಾಜ್ಯದಲ್ಲಿ ಅದನ್ನು ರದ್ದುಗೊಳಿಸಬೇಕೆಂದು ಅಥವಾ ಅಂಥ ಪರಿಷತ್ತು ಇಲ್ಲದ ರಾಜ್ಯದಲ್ಲಿ ಅಂಥ ಪರಿಷತ್ತನ್ನು ಸೃಜಿಸಬೇಕೆಂದು ಆ ರಾಜ್ಯದ ವಿಧಾನಸಭೆಯು ಆ ಸಭೆಯ ಒಟ್ಟು

CHAPTER III- THE STATE LEGISLATURE

General 168. Constitution of Legislatures in States:- (1) For every State there shall be a Legislature which shall consist of the Governor, and- (a) in the States of [Andhra Pradesh,]