ಭೂ ಸುಧಾರಣೆ ಕಾಯ್ದೆಯ ಹಿನ್ನೆಲೆ ಮತ್ತು ಅರಸು

ವೈದ್ಯಕೀಯ ಪದವಿ ಪಡೆದಿರುವ ಎಚ್.ಸಿ.ಮಹದೇವಪ್ಪ ಅಂಬೇಡ್ಕರ್ ವಾದಿ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಗ್ರಾಮೀಣಾಭಿವೃದ್ಧಿ, ಲೋಕೋಪಯೋಗಿ ಸಚಿವರಾಗಿ ಸೇವೆ ಸಲ್ಲಿಸಿರುವ ಇವರು, ಈಗ ಸಮಾಜ ಕಲ್ಯಾಣ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಂವಿಧಾನದ ನೆರಳಲ್ಲಿ ಎಂಬ ಕೃತಿಯನ್ನು ರಚಿಸಿದ್ದು, ದಲಿತ ಚಳುವಳಿಗೆ ಶಕ್ತಿ ತುಂಬುವ ಕೆಲಸದಲ್ಲಿ ನಿರತರಾಗಿದ್ದಾರೆ.

ದೇವರಾಜ ಅರಸು ಭೂ ಸುಧಾರಣೆಯ ಶಾಸನ ರಚನೆ ಮಾಡುವ, ಜಾರಿಗೆ ತರುವ, ವಿಧಾನಮಂಡಲದಲ್ಲಿ ಈ ಶಾಸನವನ್ನು ಮಂಡಿಸುವ ಮಹತ್ವದ ಜವಾಬ್ದಾರಿಯನ್ನು ಅಂದಿನ ಕಂದಾಯ ಸಚಿವ ಹುಚ್ಚಮಾಸ್ತಿಗೌಡರಿಗೆ ವಹಿಸಿಕೊಟ್ಟರು. ಭೂ ಸುಧಾರಣೆ ಖಾತೆ ಮಂತ್ರಿ ಸುಬ್ಬಯ್ಯ ಶೆಟ್ಟರನ್ನು ಜಂಟಿ ಸಮಿತಿಗೆ ನೇಮಕ ಮಾಡಿದರು. ಜೆ.ಎಚ್.ಪಟೇಲ್ ರಂತಹ ಬಹುದೊಡ್ಡ ಜಮೀನ್ದಾರರು ಅರಸು ಬೆಂಬಲಕ್ಕಿದ್ದರು.

ಅಲ್ಲಿಗೆ ಭೂ ಮಾಲೀಕರಾದ ಒಕ್ಕಲಿಗರು, ಕರಾವಳಿಯ ಬಂಟರು ಮತ್ತು ಲಿಂಗಾಯತರು ಅರಸು ಅವರ ಪರ ನಿಂತಂತಾಯಿತು. ಅದೆಲ್ಲಕ್ಕಿಂತ ಹೆಚ್ಚಾಗಿ ಬಹುಸಂಖ್ಯಾತ ಬಡವರು, ಭೂರಹಿತರು ಅರಸರ ಬೆನ್ನಿಗಿದ್ದರು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಬಹುಮತ ಗೇಣಿದಾರರ ಪರವಾಯಿತು, ಸೋಲು ಭೂ ಮಾಲೀಕರದ್ದಾಯಿತು.

ಮತ್ತೊಂದು ಮುಖ್ಯವಾದ ಗಮನಿಸಲೇಬೇಕಾದ ಅಂಶವೆಂದರೆ, ಭೂ ಶಾಸನ ಮಸೂದೆಯನ್ನು ಬಹಳ ಪ್ರಮುಖವಾಗಿ ಕೋರ್ಟ್ ಗಳ ವ್ಯಾಪ್ತಿಯಿಂದ ಹೊರಗಿಟ್ಟು ಶಾಸನಸಭೆ ತೀರ್ಮಾನಿಸಿತ್ತು. ಕಾಯ್ದೆಯನ್ನು ಜಾರಿಗೆ ತರುವಾಗ ಹಿಂದುಳಿದ ವರ್ಗಗಳ ವರ್ಗೀಕರಣ, ಅರ್ಹರನ್ನು ಆಯ್ಕೆ ಮಾಡಲು ತಾಲೂಕು ಮಟ್ಟದಲ್ಲಿ ಭೂ ನ್ಯಾಯಮಂಡಳಿ ರಚಿಸಲಾಗಿತ್ತು.

ಮಂಡಳಿಯಲ್ಲಿ ಸ್ಥಳೀಯ ಶಾಸಕರು, ಹಿಂದುಳಿದ ವರ್ಗದವರೊಬ್ಬರು, ಪರಿಶಿಷ್ಟ ಜಾತಿ ಮತ್ತು ಪಂಗಡದವರೊಬ್ಬರು  ಗೇಣಿದಾರ ರೈತರೊಬ್ಬರು ಸದಸ್ಯರಾಗಿರಬೇಕೆಂದು ಕಡ್ಡಾಯ ಮಾಡಿದ್ದಲ್ಲದೇ, ಭೂಮಾಲೀಕ ಮೇಲಿನ ಕೋರ್ಟಿಗೆ ಹೋಗದಂತೆ ಭೂ ನ್ಯಾಯಮಂಡಳಿ ತೀರ್ಮಾನವೇ ಅಂತಿಮ ಎಂಬ ಆದೇಶವನ್ನು ಹೊರಡಿಸಿ, ಗೇಣಿದಾರರನ್ನು ರಕ್ಷಿಸುವ ಕೆಲಸವೂ ನಡೆದಿತ್ತು.

ಇದರ ಫಲವಾಗಿ 7,80,000ಕ್ಕಿಂತ ಹೆಚ್ಚು ಬಡ ಗೇಣಿದಾರರು ಭೂ ಮಾಲೀಕರಾದರು. ಇದು ಅಲ್ಲಿಯವರೆಗೆ ದೇಶದ ಯಾವ ರಾಜ್ಯದಲ್ಲೂ ಆಗದ ಮತ್ತು ಕರ್ನಾಟಕದಲ್ಲಿ ಮಾತ್ರ ಸಾಧ್ಯವಾದಂತಹ ಕ್ರಾಂತಿಕಾರಕ ಕಾಯ್ದೆಯ ಫಲ.

70ರ ದಶಕದಲ್ಲಿ ಹಳ್ಳಿಗಳಲ್ಲಿ ಜಮೀನ್ದಾರಿ ಪದ್ಧತಿ ಚಾಲ್ತಿಯಲ್ಲಿತ್ತು. ನೂರಾರು ಎಕರೆ ಭೂಮಿಯುಳ್ಳ ಜಮೀನ್ದಾರರು, ಶ್ರೀಮಂತಿಕೆಯ ಮದದ ಜೊತೆಗೆ ಜಾತಿ ಬಲದೊಂದಿಗೆ ದೌರ್ಜನ್ಯ, ದಬ್ಬಾಳಿಕೆಯಿಂದ ಮೆರೆಯುತ್ತಿದ್ದರು. ಅಧಿಕಾರವರ್ಗ ಕೂಡ ಇವರ ಪರವೇ ಇತ್ತು. ಭೂರಹಿತ ಬಡವರು ಅಸಹಾಯಕತೆಯಿಂದ ನಲುಗಿಹೋಗಿದ್ದರು. ಆದರೆ ದೇವರಾಜ ಅರಸರ ಚಿಂತನಾ ಕ್ರಮಗಳೇ ಬೇರೆಯಾಗಿತ್ತು.

’ಉಳುವವನೆ ಹೊಲದೊಡೆಯ’ ಎಂಬ ಘೋಷವಾಕ್ಯದೊಂದಿಗೆ ಭೂ ಸುಧಾರಣಾ ಕಾಯ್ದೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಸಮಿತಿ ರಚನೆ, ಚರ್ಚೆ, ಕಾನೂನಾತ್ಮಕ ಕ್ರಮಗಳ ಮೂಲಕ ಹೇಳಿದ್ದನ್ನು ಮಾಡಿ ತೋರಿಸಿದರು. ಕಾಯ್ದೆ ಜಾರಿಗೆ ತಂದು, ಬಡವರಿಗೆ ಭೂಮಿಯ ಒಡೆತನ ನೀಡುವ ಮೂಲಕ ದನಿ ಮತ್ತು ಧೈರ್ಯ ನೀಡಿದರು.

ಭೂ ಒಡೆತನ ಎನ್ನುವುದು ಬಡವರಿಗೆ ಸಮಾಜದಲ್ಲಿ ಸ್ಥಾನಮಾನ ತಂದುಕೊಟ್ಟಿತು. ಆರ್ಥಿಕ ಸ್ಥಿತಿಗತಿಯನ್ನು ಸುಧಾರಿಸಿತು. ಸ್ವಾಭಿಮಾನದಿಂದ ಬದುಕುವ ವಾತಾವರಣವನ್ನು ಸೃಷ್ಟಿಸಿತು. ಆ ಮೂಲಕ ದೇವರಾಜ ಅರಸರು ಸಮಾಜದಲ್ಲಿ ಚಾಲ್ತಿಯಲ್ಲಿದ್ದ ಶ್ರೀಮಂತ-ಬಡವ ಎಂಬ ತಾರತಮ್ಯವನ್ನು ಹೊಡೆದುಹಾಕಿದರು.

ಕಾಯ್ದೆ ಜಾರಿಗೆ ತರುವಲ್ಲಿ ಅರಸು ತೋರಿದ ಇಚ್ಛಾಶಕ್ತಿ, ಜನರಲ್ಲಿ ನಂಬಿಕೆ ಹುಟ್ಟಿಸಿತು. ಬಡವರು ಸಹಜವಾಗಿಯೇ ಅರಸರನ್ನು ನಂಬಿದರು, ಬೆಂಬಲಿಸಿದರು.

Share:

Leave a Reply

Your email address will not be published. Required fields are marked *

More Posts

ವಿಧಾನಸಭೆಗಳ ಸಂರಚನೆ

ವಿಧಾನಸಭೆಗಳ ಸಂರಚನೆ 170. ವಿಧಾನಸಭೆಗಳ ಸಂರಚನೆ:- (1956ನೆಯ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ 9ನೆಯ ಪ್ರಕರಣದ ಮೂಲಕ

ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು

169. ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು:- (1) 168ನೆಯ ಅನುಚ್ಛೇದದಲ್ಲಿ ಏನೇ ಇದ್ದಾಗ್ಯೂ, ವಿಧಾನಪರಿಷತ್ತು ಇರುವ ರಾಜ್ಯದಲ್ಲಿ

On Key

Related Posts

Composition of the Legislative Assemblies

Composition of the Legislative Assemblies:- (Subs. by the Constitution (Seventh Amendment) Act, 1956, s. 9, for art. 170.) (1) Subject to the provisions of article 333, the Legislative Assembly of

ವಿಧಾನಸಭೆಗಳ ಸಂರಚನೆ

ವಿಧಾನಸಭೆಗಳ ಸಂರಚನೆ 170. ವಿಧಾನಸಭೆಗಳ ಸಂರಚನೆ:- (1956ನೆಯ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ 9ನೆಯ ಪ್ರಕರಣದ ಮೂಲಕ ಮೂಲ ಅನುಚ್ಛೇದಕ್ಕೆ ಬದಲಾಗಿ ಪ್ರತ್ಯಾಯೋಜಿಸಲಾಗಿದೆ.) (1) 333ನೆಯ ಅನುಚ್ಛೇದದ ಉಪಬಂಧಗಳಿಗೊಳಪಟ್ಟು, ಪ್ರತಿಯೊಂದು ರಾಜ್ಯದ ವಿಧಾನಸಭೆಯು ಆ ರಾಜ್ಯದಲ್ಲಿನ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಿಂದ

ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು

169. ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು:- (1) 168ನೆಯ ಅನುಚ್ಛೇದದಲ್ಲಿ ಏನೇ ಇದ್ದಾಗ್ಯೂ, ವಿಧಾನಪರಿಷತ್ತು ಇರುವ ರಾಜ್ಯದಲ್ಲಿ ಅದನ್ನು ರದ್ದುಗೊಳಿಸಬೇಕೆಂದು ಅಥವಾ ಅಂಥ ಪರಿಷತ್ತು ಇಲ್ಲದ ರಾಜ್ಯದಲ್ಲಿ ಅಂಥ ಪರಿಷತ್ತನ್ನು ಸೃಜಿಸಬೇಕೆಂದು ಆ ರಾಜ್ಯದ ವಿಧಾನಸಭೆಯು ಆ ಸಭೆಯ ಒಟ್ಟು

CHAPTER III- THE STATE LEGISLATURE

General 168. Constitution of Legislatures in States:- (1) For every State there shall be a Legislature which shall consist of the Governor, and- (a) in the States of [Andhra Pradesh,]