May 12, 2026 10:24 pm

ಜನತೆ ಸೋಲಬಾರದು ಎಂದರೆ, ಜನತೆಗಾಗಿಯೇ ಮಿಡಿಯುವ ನಾಯಕ ಕೂಡಾ ಸೋಲಬಾರದು

ಜನತೆ ಸೋಲಬಾರದು ಎಂದರೆ, ಜನತೆಗಾಗಿಯೇ ಮಿಡಿಯುವ ನಾಯಕ ಕೂಡಾ ಸೋಲಬಾರದು.

ಅಧಿಕಾರ ಮುಖ್ಯವಲ್ಲ; ಜನತೆಯ ಬದುಕು ಹಸನಾಗಬೇಕು‌. ಅವರು ಮೂಢನಂಬಿಕೆಗಳು ಜಾತಿವಾದ ಅನಕ್ಷರತೆ ಬಡತನ ದಾರಿದ್ರ್ಯಗಳಿಂದ ಹೊರಬಂದು ಘನತೆಯ ಬದುಕು ಬದುಕಬೇಕು ಎಂಬ ದೃಢ ನಿರ್ಧಾರದಲ್ಲಿ ತನ್ನ ರಾಜಕೀಯ ಅಧಿಕಾರದ ಭವಿಷ್ಯ ಏನಾದರೂ ಆಗಿಲಿ, ಇಟ್ಟ ಹೆಜ್ಜೆ ಹಿಂದಕ್ಕೆ ಎತ್ತಲಾರೆ ಎಂಬ ಛಲದಿಂದ ಬದುಕುತ್ತಿರುವ ಕರ್ನಾಟಕದ ಅಪರೂಪದ ನಾಯಕ ಸತ್ಯಪ್ಪ.

ಇಂದು ರಾಜಕೀಯದ ರೀತಿನೀತಿಗಳು, ತಂತ್ರ-ಪ್ರತಿತಂತ್ರಗಳು, ನಡೆಗಳು, ವಾದ, ಪ್ರತಿಕ್ರಿಯೆಗಳು ಅತ್ಯಂತ ಅಮಾನುಷಗೊಂಡಿವೆ. ಅಧಿಕಾರಕ್ಕಾಗಿ ರಾಜಕಾರಣಿ, ರಾಜಕೀಯ ಪಕ್ಷಗಳು ಯಾವ ಹೀನಮಟ್ಟಕ್ಕೂ ಇಳಿಯಲು ಹೇಸದ ಈ ಕಾಲದಲ್ಲಿ, ಮಾತೃತ್ವದ ಅಂತಃಕ್ಕರಣ ಇಟ್ಟುಕೊಂಡು ರಾಜಕೀಯ ಮಾಡುವುದು ಅಂತಿಂಥವರಿಂದ ಸಾಧ್ಯವಿಲ್ಲ. ಅಂತಹಾ ತಾಯಿ ಹೃದಯದ ನಾಯಕ ಸತ್ಯಪ್ಪ. ಅದನ್ನು ಸಾಧಿಸುತ್ತಾ ಸಾಗುತ್ತಿರುವುದು ಸತೀಶ್ ಜಾರಕಿಹೊಳಿ ಮಾತ್ರ.

ಬೆಳಗಾವಿಗೆ ಲೋಕಸಭೆಗೆ ಉಪ ಚುನಾವಣೆ ನಡೆಯುತ್ತಿದೆ. ಇಡಿ ನಾಡೇ ಬೆಳಗಾವಿಯತ್ತ ದೃಷ್ಟಿ ನೆಟ್ಟಿದೆ. ಪ್ರತಿಪಕ್ಷದವರು ಚುನಾವಣೆಯನ್ನು ನೈತಿಕ ಮಾರ್ಗದಲ್ಲಿ ಮಾಡದೆ ಒಬ್ಬ ವ್ಯಕ್ತಿಯನ್ನು ಹೀಗಳೆಯುವ ಅವಮಾನಿಸುವ ವೈಯಕ್ತಿಕ ತೇಜೋವಧೆ ಮಾಡವ, ಆ ಮೂಲಕ ಹಿಂದೂ ಧರ್ಮದ ದ್ವೇಷಿಯೆಂದು ಬಿಂಬಿಸಲು ನಿರಂತರ ಯತ್ನಿಸಿದ್ದರೂ ಸತೀಶ್ ಜಾರಕಿಹೊಳಿಯವರು ತಾಳ್ಮೆಯಿಂದ, ಯಾರಿಗೂ ನೋಯಿಸದ ಪ್ರಬುದ್ಧವೂ ವಿವೇಕಯುಕ್ತವೂ ಆದ ಭಾಷಣಗಳಿಂದ ಮಾಧ್ಯಮಗಳಿಗೆ ಹೇಳಿಕೆ ಕೊಡುವಾಗಲೂ ಯಾರಿಗೂ ಮುಜುಗರವಾಗದ, ಅವಮಾನವಾಗದ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಇದು ಅವರ ನಿಜಗುಣ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ಹೇಗೆ ನಡೆಯಬೇಕು ಚುನಾವಣೆಯಲ್ಲಿ ಅಭ್ಯರ್ಥಿಗಳಾಗಲೀ ಮುಖಂಡರಾಗಲೀ ಎಂತಹಾ ಬಾಯಿಭಾಷೆ, ದೇಹಭಾಷೆಗಳನ್ನು ಬಳಸಬೇಕು ನಡೆದುಕೊಳ್ಳಬೇಕು ಎಂಬುದನ್ನು ಸತ್ಯಪ್ಪ ಜಾರಕಿಹೊಳಿ ರಾಜಕಾರಣಿಗಳಿಗೆ ಜನತೆಗೆ, ಯುವಕರಿಗೆ ತೋರಿಸಿಕೊಟ್ಟಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ರಾಜಕೀಯವನ್ನು ಒಬ್ಬ ರಾಜಕಾರಣಿ ಎಷ್ಟು ಗೌರವಯುತವಾಗಿ ಸ್ನೇಹ, ಪ್ರೀತಿ, ಆದರಗಳನ್ನು ಇರಿಸಿಕೊಂಡೇ ಮಾಡಬೇಕು ಎಂಬುದನ್ನು ಸತೀಶ್ ಜಾರಕಿಹೊಳಿಯವರನ್ನು ನೋಡಿ ಕಲಿಯಬೇಕು. ಇಂತವರು ನಮ್ಮ ದೇಶದಲ್ಲಿ ಅರ್ಧದಷ್ಟು ಜನವಿದ್ದರೂ ಸಾಕಿತ್ತು. ಇವತ್ತು ಸಂವಿಧಾನವೂ ದುರ್ಬಲವಾಗುತ್ತಿರಲಿಲ್ಲ. ಉಳಿದ ರಾಜಕಾರಣಿಗಳೂ ಭ್ರಷ್ಟರಾಗುತ್ತಿರಲಿಲ್ಲ. ಮೋದಿಯಂತಹಾ ಸುಳ್ಳುಪುರುಕರು ಅಧಿಕಾರಕ್ಕೂ ಬರುತ್ತಿರಲಿಲ್ಲ.

ಒಬ್ಬ ಲೋಹಿಯಾ ಒಬ್ಬ ಜಯಪ್ರಕಾಶ ನಾರಾಯಣ, ಒಬ್ಬ ಕಾನ್ಶಿರಾಮ ಒಬ್ಬ ದೇವರಾಜ ಅರಸು, ಸಿದ್ದರಾಮಯ್ಯ,  ಬಂಗಾರಪ್ಪರಂತಹಾ ಮೇರು ನಾಯಕರ ಪೀಳಿಗೆಗೆ ಸೇರ್ಪಡೆಯಾಗಬಲ್ಲ ಮತ್ತೋರ್ವ ನಾಯಕರಿದ್ದರೆ ಅದು ಸತೀಶ್ ಜಾರಕಿಹೊಳಿಯವರೇ. ಬೆಳಗಾವಿಯ ಚುನಾವಣೆಯಲ್ಲಿ ಬಿಜೆಪಿ ಹಿಂದುತ್ವವನ್ನು ಮತ್ತು ಅನುಕಂಪವನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿದೆಯೇ ಹೊರತು ಅದಕ್ಕೆ ತನ್ನ ಸಾಧನೆಗಳನ್ನು ಹೇಳಿಕೊಳ್ಳಲು ಮುಖವೇ ಇಲ್ಲ. ಅದರ ಸಾಧನೆಗಳೇನಾದರೂ ಬೆಲೆ ಏರಿಕೆ ಮತ್ತು ಕೋಮ ದ್ವೇಷ ಇವೇ ಮೊದಲಾದವು.

ಹತಾಶೆಯ ಸ್ಥಿತಿ ತಲುಪಿದವರು ಕೊನೆಗೆ ಧರ್ಮ, ಜಾತಿಯ ಬಾಲ ಹಿಡಿದುಕೊಂಡು ಈಜಿ ದಡ ಸೇರಲು ಯತ್ನಿಸುತ್ತಾರೆ. ಇದು ಬಿಜೆಪಿಯ ಸ್ಥಿತಿ. ಸತೀಶ್ ಜಾರಕಿಹೊಳಿಯವರನ್ನು ಅವರ ಗುಣ, ಅವರ ಕೆಲಸ, ಅವರ ಸರಳತೆ, ಅವರ ಸಭ್ಯವಾದ ಮಾತು, ವರ್ತನೆ, ಕೆಲಸ ಇದಾವುದರಲ್ಲೂ ಸರಿಗಟ್ಟಲು ಸಾಧ್ಯವೇ ಇಲ್ಲದ ಬಿಜೆಪಿ ಕೆಲಸಕ್ಕೆ ಬಾರದ ಟೊಳ್ಳು ಭಾಷಣ ಮಾಡುತ್ತಾ, ಹೇಳಿಕೆಗಳನ್ನು ಕೊಡುತ್ತಾ ಗೆಲ್ಲಲು ವಿಫಲ ಕಸರತ್ತು ನಡೆಸಿದೆ.

ಜನತೆ ಅನುಕಂಪಕ್ಕೆ ಬಲಿಯಾಗಬಾರದು. ತಮ್ಮ ಸಮಸ್ಯೆಗಳನ್ನು ತಾವಿದ್ದಲ್ಲಿಗೇ ಬಂದು ಆಲಿಸುವ ಪರಿಹರಿಸುವ ನಾಯಕನ್ನು ಕೈ ಬಿಡಬಾರದು. ಇಡೀ ಕರುನಾಡೇ ಸತೀಶ್ ಜಾರಕಿಹೊಳಿಯವರ ಗೆಲುವಿಗಾಗಿ ಕನಸುತ್ತಿದೆ ನಿರೀಕ್ಷೆ ಹೊತ್ತು ಕಾಯುತ್ತಿದೆ. ಬಿಜೆಪಿಗಳು ಯಾರಿಗೂ ಹೆದರುವುದಿಲ್ಲ. ಅವರು ಹೆದರುವುದು ಒಂದೋ ಕಮ್ಯುನಿಷ್ಟರಿಗೆ ಹಾಗೂ ಅವರ ಕೋಮುವಾದಿ ಜಾತಿವಾದಿ ಸಿದ್ಧಾಂತವನ್ನು ಬುಡುಮೇಲು ಮಾಡಬಲ್ಲ ಶಕ್ತಿ ಇರುವ, ಜನತೆಯ ಸಂವಿಧಾನವನ್ನು ಕಾಪಾಡಲಿಕ್ಕೇ ನಿಂತಿರುವ ಸಿದ್ಧರಾಮಯ್ಯ ಮತ್ತು ಸತೀಶ್ ಜಾರಕಿಹೊಳಿ ಎಂಬ ಇಬ್ಬರು ಗುರುಶಿಷ್ಯರಿಗೆ ಮಾತ್ರ.

ಈ ನೆಲದಲ್ಲಿ ಬಸವತತ್ವ ಬೆಳೆಯಬೇಕು ಅಂಬೇಡ್ಕರ್ ಆಶಯಗಳು ಈಡೇರಬೇಕು ಎಂದರೆ ಅವರ ಮಾರ್ಗ ಅನುಸರಿಸುವ ನಾಯಕರು ಸೋಲಬಾರದು…

ನಾನು ಸತ್ಯಪ್ಪನ ಗೆಲುವಿಗಾಗಿ ಕಾಯುತ್ತಿದ್ದೇನೆ…

ಸುರೇಶ ಎನ್ ಶಿಕಾರಿಪುರ, ಬಹುಮುಖಿ ಚಿಂತಕರು

Share:

Leave a Reply

Your email address will not be published. Required fields are marked *

More Posts

ವಿಧಾನಸಭೆಗಳ ಸಂರಚನೆ

ವಿಧಾನಸಭೆಗಳ ಸಂರಚನೆ 170. ವಿಧಾನಸಭೆಗಳ ಸಂರಚನೆ:- (1956ನೆಯ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ 9ನೆಯ ಪ್ರಕರಣದ ಮೂಲಕ

ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು

169. ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು:- (1) 168ನೆಯ ಅನುಚ್ಛೇದದಲ್ಲಿ ಏನೇ ಇದ್ದಾಗ್ಯೂ, ವಿಧಾನಪರಿಷತ್ತು ಇರುವ ರಾಜ್ಯದಲ್ಲಿ

On Key

Related Posts

Composition of the Legislative Assemblies

Composition of the Legislative Assemblies:- (Subs. by the Constitution (Seventh Amendment) Act, 1956, s. 9, for art. 170.) (1) Subject to the provisions of article 333, the Legislative Assembly of

ವಿಧಾನಸಭೆಗಳ ಸಂರಚನೆ

ವಿಧಾನಸಭೆಗಳ ಸಂರಚನೆ 170. ವಿಧಾನಸಭೆಗಳ ಸಂರಚನೆ:- (1956ನೆಯ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ 9ನೆಯ ಪ್ರಕರಣದ ಮೂಲಕ ಮೂಲ ಅನುಚ್ಛೇದಕ್ಕೆ ಬದಲಾಗಿ ಪ್ರತ್ಯಾಯೋಜಿಸಲಾಗಿದೆ.) (1) 333ನೆಯ ಅನುಚ್ಛೇದದ ಉಪಬಂಧಗಳಿಗೊಳಪಟ್ಟು, ಪ್ರತಿಯೊಂದು ರಾಜ್ಯದ ವಿಧಾನಸಭೆಯು ಆ ರಾಜ್ಯದಲ್ಲಿನ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಿಂದ

ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು

169. ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು:- (1) 168ನೆಯ ಅನುಚ್ಛೇದದಲ್ಲಿ ಏನೇ ಇದ್ದಾಗ್ಯೂ, ವಿಧಾನಪರಿಷತ್ತು ಇರುವ ರಾಜ್ಯದಲ್ಲಿ ಅದನ್ನು ರದ್ದುಗೊಳಿಸಬೇಕೆಂದು ಅಥವಾ ಅಂಥ ಪರಿಷತ್ತು ಇಲ್ಲದ ರಾಜ್ಯದಲ್ಲಿ ಅಂಥ ಪರಿಷತ್ತನ್ನು ಸೃಜಿಸಬೇಕೆಂದು ಆ ರಾಜ್ಯದ ವಿಧಾನಸಭೆಯು ಆ ಸಭೆಯ ಒಟ್ಟು

CHAPTER III- THE STATE LEGISLATURE

General 168. Constitution of Legislatures in States:- (1) For every State there shall be a Legislature which shall consist of the Governor, and- (a) in the States of [Andhra Pradesh,]