September 22, 2023 12:36 am

ಸತೀಶ್ ಜಾರಕಿಹೊಳಿಯವರ ಗೆಲುವು ರಾಜಕೀಯದ ದಿಕ್ಕನ್ನು ಬದಲಿಸಲಿದೆ

ಬೆಳಗಾವಿ ಲೋಕಸಭಾ ಕ್ಷೇತ್ರದ ಬಂಧುಗಳೇ,
ಒಂದು ಕೆಟ್ಟ ಘಟನೆಯ ಕಾರಣಕ್ಕೆ ಅನಿವಾರ್ಯವಾಗಿ ಮತ್ತೊಂದು ಚುನಾವಣೆಯನ್ನು ಎದುರಿಸುವ ಸ್ಥಿತಿ ಬಂದಿದೆ. ಸನ್ಮಾನ್ಯ ಸತೀಶ ಜಾರಕಿಹೊಳಿಯವರೂ ಕೂಡ ಸ್ಪರ್ಧಿಸಿದ್ದಾರೆ. ನಾಡಿನ ಜನ ಕುತೂಹಲದಿಂದ ಚುನಾವಣೆಯನ್ನು ಗಮನಿಸುತ್ತಿದ್ದಾರೆ ಮತ್ತು ರಾಜ್ಯದ ಬೇರೆ ಬೇರೆ ಭಾಗಗಳಿಂದ ಮಾತ್ರವಲ್ಲ, ದೇಶವಿದೇಶಗಳಿಂದಲೂ ಜನ ಸತೀಶ ಜಾರಕಿಹೊಳಿಯವರು ಗೆಲ್ಲಬೇಕೆಂದು ಬಯಸಿ ಮತದಾರರಲ್ಲಿ ಮನವಿ ಮಾಡುತ್ತಿದ್ದಾರೆ.
ಕಾರಣವಿಷ್ಟೇ, ಸತೀಶ ಜಾರಕಿಹೊಳಿಯವರ ವ್ಯಕ್ತಿತ್ವ, ನಡೆನುಡಿ, ಜನರ ಬಗೆಗಿನ ಪ್ರಾಮಾಣಿಕ ಕಾಳಜಿ ಮತ್ತು ಅವರ ನಿಲುವುಗಳು. ಜನರ ಬಗೆಗಿನ ಅವರ ಬದ್ಧತೆಯನ್ನು ಎಂಥ ಸಂದರ್ಭ ಕೂಡ ಬದಲಿಸಲಾಗದು. ಜನರಪರ, ಬಡವರಪರ, ದೀನದಲಿತರ ಪರ ಅವರ ಹೋರಾಟ ಇತಿಹಾಸವನ್ನು ಸೃಷ್ಠಿಸುವಂಥದ್ದು. ಬುದ್ಧ, ಬಸವ, ಅಂಬೇಡ್ಕರರ ಚಿಂತನೆಗಳ ಬಗೆಗಿನ ಅವರ ನಿಷ್ಠೆ ಅಚಲವಾದುದು.
ನಾನು ಈ ಕ್ಷೇತ್ರದ ಮತದಾರನಲ್ಲ. ಆದರೆ ನಾನು ಸತೀಶ ಜಾರಕಿಹೊಳಿಯವರ ತಂಡದ ಸದಸ್ಯ. ಅವರನ್ನು ಹತ್ತಿರದಲ್ಲಿದ್ದು ಗಮನಿಸುತ್ತಿದ್ದೇನೆ. ಈ ನಾಡು ಇಂಥ ಅಪರೂಪದ ರಾಜಕಾರಣಿಯನ್ನು ಪಡೆದಿರುವುದು ನಮ್ಮೆಲ್ಲರ ಹೆಮ್ಮೆ ಎಂದೇ ಭಾವಿಸಿಕೊಂಡವನು. ಎಂಥ ಸಂದರ್ಭದಲ್ಲೂ ಅವರು ತಾವೂ ನಂಬಿದ ತತ್ವಗಳಿಂದ ವಿಮುಖರಾಗದೇ ಎದುರಿಸುವುದನ್ನು ಕಂಡು ಆಶ್ಚರ್ಯಗೊಂಡಿದ್ದೇನೆ. ತಾವು ನಂಬಿರುವ ತತ್ವಗಳಿಂದಲೇ ಸವಾಲುಗಳನ್ನು ಎದುರಿಸುವುದನ್ನು ಕಂಡಿದ್ದೇನೆ. ಏನನ್ನಾದರೂ ಕಳೆದುಕೊಳ್ಳುವುದಕ್ಕೂ ಹೆದರದೇ ಮಾನವೀಯತೆಗೆ ಕಟಿಬದ್ಧರಾಗಿ ನಿಂತದ್ದನ್ನು, ಜನರಿಗಾಗಿ ಅವರು ತೆಗದುಕೊಳ್ಳುವ ರಿಸ್ಕ್ ಗಳನ್ನು ನೋಡಿದ್ದೇನೆ. ಸಂವಿಧಾನದ ಬಗೆಗೆ ಅವರ ನಂಬಿಕೆ ಅಪಾರವಾದುದು.
ಸರಳತೆ, ಸದಾ ಸಾಮಾನ್ಯ ಜನರೊಂದಿಗೆ ಇರುವ ಅವರ ಪರ ನಿಲ್ಲುವ ಜನಪರ ನಾಯಕತ್ವ, ಜನರ ಮೇಲೆ ಇಡುವ ಅವರ ನಂಬಿಕೆ ಇವೆಲ್ಲ ಅವರನ್ನು ವಿಭಿನ್ನ ವ್ಯಕ್ತಿತ್ವದ ರಾಜಕಾರಣಿಯನ್ನಾಗಿಸಿದೆ.
ಸತೀಶ ಜಾರಕಿಹೊಳಿಯವರ ಜನಪರ ಕೆಲಸಗಳನ್ನು ಪಟ್ಟಿ ಮಾಡುವುದು ಕಷ್ಟ. ಅವರು ಮಾನವ ಬಂಧುತ್ವ ವೇದಿಕೆ ಮೂಲಕ ಸಾಕಷ್ಟು ಜನಪರ ಕಾರ್ಯಕ್ರಮಗಳನ್ನು ಮಾಡುತ್ತ ಬಂದಿದ್ದಾರೆ. ಸ್ಮಶಾನದಲ್ಲಿ ನಡೆಸುವ ಮೌಢ್ಯ ವಿರೋಧಿ ಕಾರ್ಯಕ್ರಮವಂತೂ ದೇಶದ ಗಮನ ಸೆಳೆಯುವಂಥದ್ದು. ಬಡ ಮಕ್ಕಳ ಶಿಕ್ಷಣ, ಆರೋಗ್ಯ, ಉದ್ಯೋಗ, ಬದುಕಿನ ಬಗ್ಗೆ ಇವರಿಗಿರುವ ಕಾಳಜಿಪೂರಿತ ದೃಷ್ಟಿಕೋನ ಈಗಿನ ರಾಜಕಾರಣಿಗಳಲ್ಲಿ ವಿರಳ.
ಚುನಾವಣೆಗಳಲ್ಲೂ ಜನರನ್ನು ಭ್ರಷ್ಟಗೊಳಿಸಬಾರದೆಂಬ ಅವರ ಕಾಳಜಿ ಪ್ರಜಾತಂತ್ರದ ಮೇಲಿನ ಅವರ ನಂಬಿಕೆಗೆ ಸಾಕ್ಷಿ.
ಈ ಚುನಾವಣೆಯಲ್ಲೂ ಆ ವಿಚಾರದಿಂದ ಕದಲುವ ಮಾತಿಲ್ಲ.
ತಮ್ಮ ನಡಿಗೆಯ ಮೇಲಿನ ನಂಬಿಕೆ, ಜನರ ಮೇಲಿನ ವಿಶ್ವಾಸ, ಸಂವಿಧಾನದ ಮೇಲಿನ ಬದ್ಧತೆ, ಬದಲಾವಣೆಯ ಆಶಯಗಳೊಂದಿಗೆ ಮತ್ತೆ ಸವಾಲನ್ನು ಎದುರಿಸಲು ಸಜ್ಜಾಗಿದ್ದಾರೆ.
ಬೆಳಗಾವಿ ಲೋಕಸಭಾ ಉಪಚನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಹಣ, ಹೆಂಡ, ಆಸೆ, ಆಮಿಶಗಳಿಂದ ಈ ಚುನಾವಣೆಯನ್ನು ಎದುರಿಸುವುದಿಲ್ಲ. ಸಂವಿಧಾನದ ತತ್ವಗಳು, ಜನರ ವಿಶ್ವಾಸವೇ ಮುಖ್ಯ ಎಂದು ಮತ್ತೊಮ್ಮೆ ಜನರ ಮುಂದೆ ನಿಂತಿದ್ದಾರೆ. ಅಬ್ಬರವಿಲ್ಲ, ಆಡಂಬರವಿಲ್ಲ.
ಇದರ ಗೆಲುವು ಅಥವಾ ಸೋಲು ಅವರ ನಿಲುವಿನಲ್ಲಾಗಲಿ, ಅವರ ಬದುಕಿನಲ್ಲಾಗಲಿ, ರಾಜಕೀಯದಲ್ಲಾಗಲಿ ಯಾವುದೇ ಬದಲಾವಣೆ ತರಲಾರದು. ಆದರೆ ಅವರ ಗೆಲುವು ಈ ನಾಡಿನ ಜನಪರ ದನಿಗಳ ಗೆಲುವಾಗಲಿದೆ. ಜನವಿರೋಧಿ, ಕ್ರೂರ, ಹಿಂಸಾತ್ಮಕ ರಾಜಕಾರಣದ ವಿರುದ್ಧ ಮಾನವೀಯ, ಜನಪರ ರಾಜಕಾರಣದ ಗೆಲುವಾಗಲಿದೆ. ಇದು ಜನರ ಗೆಲುವು. ಅದನ್ನು ಸಾಧಿಸಿ ತೋರಿಸಿ ತಾವು ಗೆಲ್ಲುವುದು ಬೆಳಗಾವಿ ಲೋಕಸಭಾ ಕ್ಷೇತ್ರದ ಮತದಾರರ ಕೈಯಲ್ಲಿದೆ.
ಪ್ರಜಾ ಪ್ರಭುತ್ವದಲ್ಲಿ ಜನರೇ ಗೆಲ್ಲಬೇಕು. ಅದಕ್ಕಾಗಿ ಸತೀಶ ಜಾರಕಿಹೊಳಿಯವರು ಗೆಲ್ಲಬೇಕು.
ಮುಂದಿನ ರಾಜಕೀಯದ ದಿಕ್ಕನ್ನು ಬದಲಿಸೋಣ. ಅದರ ಜವಾಬ್ದಾರಿ ನಮ್ಮದು.

                    - ಮಹಾಲಿಂಗಪ್ಪ ಆಲಬಾಳ, ಸಾಮಾಜಿಕ ಹೋರಾಟಗಾರರು

Share:

Leave a Reply

Your email address will not be published. Required fields are marked *

More Posts

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ

On Key

Related Posts

ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ,ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ

ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ. ಅಂದರೆ ಪೌಷ್ಟಿಕ ಆಹಾರ ಮಣ್ಣುಪಾಲಾಗುತ್ತದೆ. ಅದೇ ಹಾಲನ್ನು ಅವಶ್ಯಕತೆ ಇರುವವರಿಗೆ ಆಹಾರವಾಗಿ ನೀಡಬಹುದಲ್ಲವೇ? ದೈವ ಭಕ್ತಿಗೂ, ಧರ್ಮ ಭಕ್ತಿಗೂ, ಪರಿಸರ

ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

ಇಂದು ಆಗಸ್ಟ್ 20. ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಮಾತುಕತೆ…….. ವಿಜ್ಞಾನ ಮತ್ತು ಧರ್ಮ ಒಂದಕ್ಕೊಂದು ಪೂರಕವೇ ಅಥವಾ ವಿರುದ್ದವೇ ಅಥವಾ ಪರ್ಯಾಯವೇ ಅಥವಾ ಸಮಾನಾಂತರವೇ ಅಥವಾ ಪ್ರತಿಸ್ಪರ್ಧಿಗಳೇ ಅಥವಾ ಸಂಬಂಧವಿಲ್ಲವೇ….. ಧರ್ಮ ( ಮತ ) ಎಂಬುದು

ಬಸವ ಪಂಚಮಿ: ಒಂದು ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ

ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಆದರೆ ಸಾಂಪ್ರದಾಯವಾದಿಗಳು ಆ ಆಚರಣೆಗಳನ್ನು ತಿರುಚಿ ಅವುಗಳಿಗೆ ಧಾರ್ಮಿಕ ಮೌಢ್ಯದ ಹಿನ್ನೆಲೆಯನ್ನು ಹೆಣೆದಿದ್ದಾರೆ. ಕೇವಲ ಧಾರ್ಮಿಕ ಹಿನ್ನೆಲೆಯಷ್ಟೆಯಲ್ಲದೆ ಅನೇಕ ಬಗೆಯ ಮೌಢ್ಯಗಳನ್ನು ಜನಮನದಲ್ಲಿ ಬಿತ್ತಿದ್ದಾರೆ.

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದಿದ್ದಾರೆ. ಎಲ್ಲಾ ರೀತಿಯ ಅಸಮಾನತೆಯನ್ನು ಕೊನೆಗಾಣಿಸಿ ಸಮಾನತೆಯನ್ನು ತರುವುದು ನಮ್ಮ ಸಂವಿಧಾನದ

ಮೀಸಲಾತಿ ನೀತಿಯನ್ನು ಪುನರ್ ರಚಿಸಬೇಕಾದ ಅಗತ್ಯತೆ

ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಮೀಸಲಾತಿ ನೀತಿಯ ಅನುಷ್ಠಾನದಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಆದರೂ ಇಂದು ಹಲವು ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗಿವೆ. ಒಳಮೀಸಲಾತಿ, ಕೆನೆಪದರ ಬಡ್ತಿಯಲ್ಲಿ ಮೀಸಲಾತಿ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಎಂಬ ಪ್ರಶ್ನೆಗಳು ಕಾಡುತ್ತಿವೆ. ಮೀಸಲಾತಿ ಎಂದರೇನು