September 23, 2026 3:46 am

ಅಧ್ಯಾಯ III – ರಾಜ್ಯ ವಿಧಾನಮಂಡಲ

ಸಾಮಾನ್ಯ

168. ರಾಜ್ಯಗಳ ವಿಧಾನಮಂಡಲಗಳ ರಚನೆ:- (1) ಪ್ರತಿಯೊಂದು ರಾಜ್ಯಕ್ಕೂ ಒಂದು ವಿಧಾನಮಂಡಲ ಇರತಕ್ಕದ್ದು ಮತ್ತು ಅದು ರಾಜ್ಯಪಾಲನನ್ನು, ಮತ್ತು-

(ಎ) (ಆಂಧ್ರಪ್ರದೇಶ), (2005ನೇ ಇಸವಿಯ ಆಂಧ್ರಪ್ರದೇಶ ವಿಧಾನ ಪರಿಷತ್ ಅಧಿನಿಯಮದ 3ನೆಯ ಪ್ರಕರಣದ ಮೂಲಕ (30.3.2007 ರಿಂದ ಜಾರಿಗೆ ಬರುವಂತೆ) ಸೇರಿಸಲಾಗಿದೆ.), ಬಿಹಾರ, (1960 ನೆಯ ಇಸವಿಯ ಮುಂಬಯಿ ಪುನರಚನೆ ಅಧಿನಿಯಮದ (1960ರ 11) 20ನೆಯ ಪ್ರಕರಣದ ಮೂಲಕ (1-5-1960 ರಿಂದ ಜಾರಿಗೆ ಬರುವಂತೆ) “ಬಾಂಬೆ” ಎಂಬ ಪದವನ್ನು ಬಿಟ್ಟುಬಿಡಲಾಗಿದೆ.), ಮಧ್ಯಪ್ರದೇಶ, (1956ನೆಯ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ 8(2)ನೇ ಪ್ರಕರಣದ ಮೂಲಕ ಈ ಉಪಖಂಡದಲ್ಲಿ “ಮಧ್ಯಪ್ರದೇಶ’ ಎಂಬ ಪದಗಳನ್ನು ಸೇರಿಸಲು ಯಾವುದೇ ದಿನಾಂಕವನ್ನು ಗೊತ್ತುಮಾಡಿಲ್ಲ.), (1986ನೇ ಇಸವಿಯ ತಮಿಳುನಾಡು ವಿಧಾನ ಪರಿಷತ್ (ರದ್ದತಿ) ಅಧಿನಿಯಮ (1986ರ 40) ದ 4ನೇ ಪ್ರಕರಣದ ಮೂಲಕ (1.11.1986 ರಿಂದ ಜಾರಿಗೆ ಬರುವಂತೆ) ‘ತಮಿಳುನಾಡು’ ಎಂಬ ಪದಗಳನ್ನು ಬಿಟ್ಟುಬಿಡಲಾಗಿದೆ.) (ಮಹಾರಾಷ್ಟ್ರ), (1960ನೆಯ ಇಸವಿಯ ಬಾಂಬೆ ಪುನರಚನೆ ಅಧಿನಿಯಮದ (1960ರ 11) 20ನೆಯ ಪ್ರಕರಣದ ಮೂಲಕ (1-5-1960ರಿಂದ ಜಾರಿಗೆ ಬರುವಂತೆ) ಸೇರಿಸಲಾಗಿದೆ.) (ಕರ್ನಾಟಕ), (1956ನೆಯ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ 8 (1)ನೆಯ ಪ್ರಕರಣದ ಮೂಲಕ “ಮೈಸೂರು” ಎಂಬ ಪದವನ್ನು ಸೇರಿಸಲಾಗಿತ್ತು ಮತ್ತು 1973ನೆಯ ಇಸವಿಯ ಮೈಸೂರು ರಾಜ್ಯ (ಹೆಸರು ಬದಲಾವಣೆ) ಅಧಿನಿಯಮದ (1973ರ 31) 4ನೆಯ ಪ್ರಕರಣದ ಮೂಲಕ (1-11-73 ರಿಂದ ಜಾರಿಗೆ ಬರುವಂತೆ) “ಮೈಸೂರು” ಎಂಬುದಕ್ಕೆ ಬದಲಾಗಿ ಪ್ರತ್ಯಾಯೋಜಿಸಲಾಗಿದೆ.) (1969ನೆಯ ಇಸವಿಯ ಪಂಜಾಬ್ ವಿಧಾನ ಪರಿಷತ್ (ರದ್ದತಿ) ಅಧಿನಿಯಮದ (1969ರ 46) 4ನೆಯ ಪ್ರಕರಣದ ಮೂಲಕ (7-1-1970 ರಿಂದ ಜಾರಿಗೆ ಬರುವಂತೆ) “ಪಂಜಾಬ್” ಎಂಬ ಪದವನ್ನು ಬಿಟ್ಟುಬಿಡಲಾಗಿದೆ.) (ತಮಿಳುನಾಡು, ತೆಲಂಗಾಣ) (ತಮಿಳುನಾಡು ವಿಧಾನ ಪರಿಷತ್ ಅಧಿನಿಯಮ, 2010 (2010ರ 16) ಪ್ರಕರಣ 3ರ ಮೂಲಕ ಸೇರಿಸಲಾಗಿದೆ (ದಿನಾಂಕವನ್ನು ಇನ್ನೂ ಅಧಿಸೂಚಿಸಬೇಕಾಗಿದೆ), (ಆಂಧ್ರ ಪ್ರದೇಶ ರಾಜ್ಯ ಪುನರ್ ವಿಂಗಡಣೆ ಅಧಿನಿಯಮ, 2014ರ (2014 ರ 6) 96ನೆಯ ಪ್ರಕರಣದ ಮೂಲಕ (2-6-2014ರಿಂದ ಜಾರಿಗೆ ಬರುವಂತೆ) ಪ್ರತ್ಯಾಯೋಜಿಸಲಾಗಿದೆ.) (1969ನೆಯ ಇಸವಿಯ ಪಶ್ಚಿಮ ಬಂಗಾಳ ವಿಧಾನಪರಿಷತ್ (ರದ್ದತಿ) ಅಧಿನಿಯಮದ (1969ರ 20) 4ನೆಯ ಪ್ರಕರಣದ ಮೂಲಕ “ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ” ಎಂಬ ಪದಗಳಿಗೆ ಬದಲಾಗಿ (1-8-1969 ರಿಂದ ಜಾರಿಗೆ ಬರುವಂತೆ) ಪ್ರತ್ಯಾಯೋಜಿಸಲಾಗಿದೆ.)  “”[ಮತ್ತು ಉತ್ತರ ಪ್ರದೇಶ] ಈ ರಾಜ್ಯಗಳಲ್ಲಿ ಎರಡು ಸದನಗಳನ್ನೂ;

(ಬಿ) ಇತರ ರಾಜ್ಯಗಳಲ್ಲಿ ಒಂದು ಸದನವನ್ನು – ಒಳಗೊಂಡಿರತಕ್ಕದ್ದು.

(2) ಒಂದು ರಾಜ್ಯದ ವಿಧಾನಮಂಡಲವು ಎರಡು ಸದನಗಳನ್ನು ಹೊಂದಿರುವಲ್ಲಿ, ಒಂದನ್ನು ವಿಧಾನಪರಿಷತ್ತು ಎಂದು ಮತ್ತು ಇನ್ನೊಂದನ್ನು ವಿಧಾನಸಭೆ ಎಂದು ಮತ್ತು ಒಂದೇ ಸದನವನ್ನು ಹೊಂದಿರುವಲ್ಲಿ ಅದನ್ನು ವಿಧಾನಸಭೆ ಎಂದು ಕರೆಯತಕ್ಕದ್ದು.

Source: The Constitution Of India (AS ON 14th JANUARY 2019), Government Of India, Ministry of Law and Justice, Legislative Department, Karnataka Official Language (Legislative) Commission and Directorate of Translations, Government of Karnataka, Page No. 65

Share:

Leave a Reply

Your email address will not be published. Required fields are marked *

More Posts

ವಿಧಾನಸಭೆಗಳ ಸಂರಚನೆ

ವಿಧಾನಸಭೆಗಳ ಸಂರಚನೆ 170. ವಿಧಾನಸಭೆಗಳ ಸಂರಚನೆ:- (1956ನೆಯ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ 9ನೆಯ ಪ್ರಕರಣದ ಮೂಲಕ

ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು

169. ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು:- (1) 168ನೆಯ ಅನುಚ್ಛೇದದಲ್ಲಿ ಏನೇ ಇದ್ದಾಗ್ಯೂ, ವಿಧಾನಪರಿಷತ್ತು ಇರುವ ರಾಜ್ಯದಲ್ಲಿ

On Key

Related Posts

Composition of the Legislative Assemblies

Composition of the Legislative Assemblies:- (Subs. by the Constitution (Seventh Amendment) Act, 1956, s. 9, for art. 170.) (1) Subject to the provisions of article 333, the Legislative Assembly of

ವಿಧಾನಸಭೆಗಳ ಸಂರಚನೆ

ವಿಧಾನಸಭೆಗಳ ಸಂರಚನೆ 170. ವಿಧಾನಸಭೆಗಳ ಸಂರಚನೆ:- (1956ನೆಯ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ 9ನೆಯ ಪ್ರಕರಣದ ಮೂಲಕ ಮೂಲ ಅನುಚ್ಛೇದಕ್ಕೆ ಬದಲಾಗಿ ಪ್ರತ್ಯಾಯೋಜಿಸಲಾಗಿದೆ.) (1) 333ನೆಯ ಅನುಚ್ಛೇದದ ಉಪಬಂಧಗಳಿಗೊಳಪಟ್ಟು, ಪ್ರತಿಯೊಂದು ರಾಜ್ಯದ ವಿಧಾನಸಭೆಯು ಆ ರಾಜ್ಯದಲ್ಲಿನ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಿಂದ

ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು

169. ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು:- (1) 168ನೆಯ ಅನುಚ್ಛೇದದಲ್ಲಿ ಏನೇ ಇದ್ದಾಗ್ಯೂ, ವಿಧಾನಪರಿಷತ್ತು ಇರುವ ರಾಜ್ಯದಲ್ಲಿ ಅದನ್ನು ರದ್ದುಗೊಳಿಸಬೇಕೆಂದು ಅಥವಾ ಅಂಥ ಪರಿಷತ್ತು ಇಲ್ಲದ ರಾಜ್ಯದಲ್ಲಿ ಅಂಥ ಪರಿಷತ್ತನ್ನು ಸೃಜಿಸಬೇಕೆಂದು ಆ ರಾಜ್ಯದ ವಿಧಾನಸಭೆಯು ಆ ಸಭೆಯ ಒಟ್ಟು

CHAPTER III- THE STATE LEGISLATURE

General 168. Constitution of Legislatures in States:- (1) For every State there shall be a Legislature which shall consist of the Governor, and- (a) in the States of [Andhra Pradesh,]