165. ರಾಜ್ಯದ ಅಡ್ವೋಕೇಟ್ ಜನರಲ್:- (1) ಪ್ರತಿಯೊಂದು ರಾಜ್ಯದ ರಾಜ್ಯಪಾಲನು ಉಚ್ಚ ನ್ಯಾಯಾಲಯದ ನ್ಯಾಯಾಧೀಶನಾಗಿ ನೇಮಕಗೊಳ್ಳಲು ಅರ್ಹತೆಯುಳ್ಳ ವ್ಯಕ್ತಿಯನ್ನು ಆ ರಾಜ್ಯದ ಅಡ್ವೋಕೇಟ್ ಜನರಲ್ ಆಗಿ ನೇಮಕ ಮಾಡತಕ್ಕದ್ದು.
(2) ಅಡ್ವೋಕೇಟ್ ಜನರಲ್‌ನು, ರಾಜ್ಯಪಾಲನು ಕಾಲಕಾಲಕ್ಕೆ ತನಗೆ ಕಳುಹಿಸಬಹುದಾದಂಥ ಅಥವಾ ಒಪ್ಪಿಸಬಹುದಾದಂಥ ಕಾನೂನು ವಿಷಯಗಳ ಮೇಲೆ ರಾಜ್ಯಸರ್ಕಾರಕ್ಕೆ ಸಲಹೆ ಕೊಡುವುದು ಮತ್ತು ಕಾನೂನು ಸ್ವರೂಪದಂಥ ಇತರ ಕರ್ತವ್ಯಗಳನ್ನು ನೆರವೇರಿಸುವುದು ಹಾಗೂ ಈ ಸಂವಿಧಾನದ ಮೂಲಕ ಅಥವಾ ಅದರ ಮೇರೆಗೆ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಇತರ ಯಾವುದೇ ಕಾನೂನಿನ ಮೂಲಕ ಅಥವಾ ಅದರ ಮೇರೆಗೆ ತನಗೆ ಪ್ರದಾನ ಮಾಡಿದ ಪ್ರಕಾರ್ಯಗಳನ್ನು ನಿರ್ವಹಿಸುವುದು ಅವನ ಕರ್ತವ್ಯವಾಗಿರತಕ್ಕದ್ದು.
(3) ಅಡ್ವೋಕೇಟ್ ಜನರಲ್‌ನು ರಾಜ್ಯಪಾಲನ ಇಷ್ಟಪರ್ಯಂತ ಪದಧಾರಣ ಮಾಡತಕ್ಕದ್ದು; ಮತ್ತು ರಾಜ್ಯಪಾಲನು ನಿರ್ಧರಿಸಬಹುದಾದ ಸಂಭಾವನೆಯನ್ನು ಪಡೆಯತಕ್ಕದ್ದು.
Source: The Constitution Of India (AS ON 14th JANUARY 2019), Government Of India, Ministry of Law and Justice, Legislative Department, Karnataka Official Language (Legislative) Commission and Directorate of Translations, Government of Karnataka, Page No. 64








