August 15, 2026 9:46 am

ರಾಷ್ಟ್ರಪತಿಯ ವಿಧಾಯೀ ಅಧಿಕಾರಗಳು

ಅಧ್ಯಾಯ III – ರಾಷ್ಟ್ರಪತಿಯ ವಿಧಾಯೀ ಅಧಿಕಾರಗಳು

123. ಸಂಸತ್ತಿನ ವಿರಾಮ ಕಾಲದಲ್ಲಿ ಅಧ್ಯಾದೇಶಗಳನ್ನು ಹೊರಡಿಸಲು ರಾಷ್ಟ್ರಪತಿಯ ಅಧಿಕಾರ:- (1) ಸಂಸತ್ತಿನ ಉಭಯ ಸದನಗಳು ಅಧಿವೇಶನದಲ್ಲಿರುವ ಕಾಲವನ್ನು ಹೊರತುಪಡಿಸಿ, ಯಾವುದೇ ಕಾಲದಲ್ಲಿ ತಾನು ಕೂಡಲೇ ಕ್ರಮವನ್ನು ಕೈಕೊಳ್ಳುವುದು ಅವಶ್ಯವಾಗಿರುವಂಥ ಸನ್ನಿವೇಶಗಳು ಇರುವುದಾಗಿ ರಾಷ್ಟ್ರಪತಿಗೆ ಮನದಟ್ಟಾದರೆ, ಅವನು ಆ ಸನ್ನಿವೇಶಗಳಲ್ಲಿ ಅಗತ್ಯವೆಂದು ತನಗೆ ತೋರುವಂಥ ಅಧ್ಯಾದೇಶಗಳನ್ನು ಹೊರಡಿಸಬಹುದು. (2) ಈ ಅನುಚ್ಛೇದದ ಮೇರೆಗೆ ಹೊರಡಿಸಲಾದ ಅಧ್ಯಾದೇಶವು ಸಂಸತ್ತಿನ ಅಧಿನಿಯಮದಂತೆಯೇ ಬಲವುಳ್ಳದ್ದಾಗಿಯೂ ಮತ್ತು ಪರಿಣಾಮವುಳ್ಳದ್ದಾಗಿಯೂ ಇರತಕ್ಕದ್ದು. ಆದರೆ ಅಂಥ ಪ್ರತಿಯೊಂದು ಅಧ್ಯಾದೇಶವನ್ನು, (ಎ) ಸಂಸತ್ತಿನ ಉಭಯ ಸದನಗಳ ಮುಂದೆ ಇಡತಕ್ಕದ್ದು ಮತ್ತು ಸಂಸತ್ತು ಪುನಃ ಸಭೆ ಸೇರಿದಾಗಿನಿಂದ ಆರು ವಾರಗಳು ಮುಕ್ತಾಯವಾದ ಆನಂತರ ಅಥವಾ ಆ ಅವಧಿಯು ಮುಕ್ತಾಯವಾಗುವುದಕ್ಕೆ ಮುಂಚೆ, ಆ ಅಧ್ಯಾದೇಶವನ್ನು ಅನುಮೋದಿಸದೆ ಇರುವ ನಿರ್ಣಯಗಳು ಉಭಯ ಸದನಗಳಿಂದಲೂ ಅಂಗೀಕೃತವಾದರೆ ಎರಡನೆಯ ನಿರ್ಣಯವು ಅಂಗೀಕೃತವಾದೊಡನೆಯೇ ಆ ಅಧ್ಯಾದೇಶವು ಜಾರಿಯಲ್ಲಿರುವುದು ನಿಂತು ಹೋಗತಕ್ಕದ್ದು; ಮತ್ತು (ಬಿ) ಯಾವುದೇ ಕಾಲದಲ್ಲಿ ರಾಷ್ಟ್ರಪತಿಯು ಹಿಂತೆಗೆದುಕೊಳ್ಳಬಹುದು. ವಿವರಣೆ:- ಸಂಸತ್ತಿನ ಸದನಗಳನ್ನು ಬೇರೆ ಬೇರೆ ದಿನಾಂಕಗಳಲ್ಲಿ ಪುನಃ ಸಮಾವೇಶಗೊಳ್ಳುವಂತೆ ಕರೆದಿರುವ ಸಂದರ್ಭದಲ್ಲಿ, ಈ ಖಂಡದ ಉದ್ದೇಶಗಳಿಗಾಗಿ ಆ ದಿನಾಂಕಗಳಲ್ಲಿ ಅನಂತರದ ದಿನಾಂಕದಿಂದ ಆರು ವಾರಗಳ ಅವಧಿಯನ್ನು ಲೆಕ್ಕಹಾಕತಕ್ಕದ್ದು. (3) ಯಾವ ಉಪಬಂಧವನ್ನು ಈ ಸಂವಿಧಾನದ ಮೇರೆಗೆ ಅಧಿನಿಯಮಿಸಲು ಸಂಸತ್ತು ಸಕ್ಷಮವಾಗಿಲ್ಲವೋ ಅಂಥ ಯಾವುದೇ ಉಪಬಂಧವನ್ನು ಈ ಅನುಚ್ಛೇದದ ಮೇರೆಗಿನ ಯಾವುದೇ ಅಧ್ಯಾದೇಶವು ಕಲ್ಪಿಸಿದರೆ, ಅಂಥ ಅಧ್ಯಾದೇಶವು ಅಷ್ಟರ ಮಟ್ಟಿಗೆ ಅನೂರ್ಜಿತವಾಗತಕ್ಕದ್ದು. ( 1975ನೆಯ ಇಸವಿಯ ಸಂವಿಧಾನ (ಮೂವತ್ತೆಂಟನೆಯ ತಿದ್ದುಪಡಿ) ಅಧಿನಿಯಮದ 2ನೆಯ ಪ್ರಕರಣದ ಮೂಲಕ (4)ನೇ ಖಂಡವನ್ನು (ಪೂರ್ವಾನ್ವಯ ಪರಿಣಾಮಸಹಿತವಾಗಿ) ಸೇರಿಸಲಾಗಿತ್ತು. ಅದನ್ನು 1978ನೆಯ ಇಸವಿ ಸಂವಿಧಾನ (ನಲವತ್ತನಾಲ್ಕನೆಯ ತಿದ್ದುಪಡಿ) ಅಧಿನಿಯಮದ 16ನೆಯ ಪ್ರಕರಣದ ಮೂಲಕ (20-6-1979ರಿಂದ ಜಾರಿಗೆ ಬರುವಂತೆ) ಬಿಟ್ಟುಬಿಡಲಾಗಿದೆ.)

Source: The Constitution Of India (AS ON 14th JANUARY 2019), Government Of India, Ministry of Law and Justice, Legislative Department, Karnataka Official Language (Legislative) Commission and Directorate of Translations, Government of Karnataka, Page No. 49

Share:

Leave a Reply

Your email address will not be published. Required fields are marked *

More Posts

ವಿಧಾನಸಭೆಗಳ ಸಂರಚನೆ

ವಿಧಾನಸಭೆಗಳ ಸಂರಚನೆ 170. ವಿಧಾನಸಭೆಗಳ ಸಂರಚನೆ:- (1956ನೆಯ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ 9ನೆಯ ಪ್ರಕರಣದ ಮೂಲಕ

ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು

169. ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು:- (1) 168ನೆಯ ಅನುಚ್ಛೇದದಲ್ಲಿ ಏನೇ ಇದ್ದಾಗ್ಯೂ, ವಿಧಾನಪರಿಷತ್ತು ಇರುವ ರಾಜ್ಯದಲ್ಲಿ

On Key

Related Posts

Composition of the Legislative Assemblies

Composition of the Legislative Assemblies:- (Subs. by the Constitution (Seventh Amendment) Act, 1956, s. 9, for art. 170.) (1) Subject to the provisions of article 333, the Legislative Assembly of

ವಿಧಾನಸಭೆಗಳ ಸಂರಚನೆ

ವಿಧಾನಸಭೆಗಳ ಸಂರಚನೆ 170. ವಿಧಾನಸಭೆಗಳ ಸಂರಚನೆ:- (1956ನೆಯ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ 9ನೆಯ ಪ್ರಕರಣದ ಮೂಲಕ ಮೂಲ ಅನುಚ್ಛೇದಕ್ಕೆ ಬದಲಾಗಿ ಪ್ರತ್ಯಾಯೋಜಿಸಲಾಗಿದೆ.) (1) 333ನೆಯ ಅನುಚ್ಛೇದದ ಉಪಬಂಧಗಳಿಗೊಳಪಟ್ಟು, ಪ್ರತಿಯೊಂದು ರಾಜ್ಯದ ವಿಧಾನಸಭೆಯು ಆ ರಾಜ್ಯದಲ್ಲಿನ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಿಂದ

ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು

169. ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು:- (1) 168ನೆಯ ಅನುಚ್ಛೇದದಲ್ಲಿ ಏನೇ ಇದ್ದಾಗ್ಯೂ, ವಿಧಾನಪರಿಷತ್ತು ಇರುವ ರಾಜ್ಯದಲ್ಲಿ ಅದನ್ನು ರದ್ದುಗೊಳಿಸಬೇಕೆಂದು ಅಥವಾ ಅಂಥ ಪರಿಷತ್ತು ಇಲ್ಲದ ರಾಜ್ಯದಲ್ಲಿ ಅಂಥ ಪರಿಷತ್ತನ್ನು ಸೃಜಿಸಬೇಕೆಂದು ಆ ರಾಜ್ಯದ ವಿಧಾನಸಭೆಯು ಆ ಸಭೆಯ ಒಟ್ಟು

CHAPTER III- THE STATE LEGISLATURE

General 168. Constitution of Legislatures in States:- (1) For every State there shall be a Legislature which shall consist of the Governor, and- (a) in the States of [Andhra Pradesh,]