ಮುಸ್ಲೀಂ ಬಾಂಧವರು ಬಕ್ರೀದ್ ಹಬ್ಬದ ಊಟಕ್ಕೆ ಕರೆಯಲಿಲ್ಲವೇ?

ಅರುಣ್ ಜೋಳದಕೂಡ್ಲಿಗಿಯವರು ಕನ್ನಡದ ಯುವ ವಿದ್ವಾಂಸರು. ಜಾನಪದ ಕ್ಷೇತ್ರದಲ್ಲಿ ಆಳವಾದ ಜ್ಞಾನವನ್ನು ಹೊಂದಿರುವ ಇವರು ಸಾಮಾಜಿಕ ಚಳುವಳಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಸಮಕಾಲೀನ ಸಾಂಸ್ಕೃತಿಕ, ರಾಜಕೀಯ, ಸಾಮಾಜಿಕ ವಿಷಯಗಳಿಗೆ ಸಂಬಂಧಿಸಿದಂತೆ ಅಪೂರ್ವ ಒಳನೋಟಗಳನ್ನು ಇವರ ಭಾಷಣಗಳು ಮತ್ತು ಲೇಖನಗಳು ನೀಡುತ್ತವೆ.

ಎಲ್ಲಾ ಬಾಂಧವರಿಗೂ ಬಕ್ರೀದ್ ಹಬ್ಬದ ಶುಭಾಶಯಗಳು

ಬಕ್ರೀದ್ ಗೆ ಮುಸ್ಲಿಂ ಬಾಂಧವರು ಊಟಕ್ಕೆ ಕರೆಯಲಿಲ್ಲವೆಂದು ಪ್ರೀತಿಯಿಂದ ಆರೋಪಿಸೋದು ಒಂದ್ಕಡೆಯಾದ್ರೆ, ಮುಸ್ಲೀಂ ಭಾಂಧವರ ಮನೆಗಳಲ್ಲಿ ಬಕ್ರೀದ್ ಹಬ್ಬಕ್ಕೆ ಹೋಗಿ ಊಟ ಮಾಡಿದ್ದರ ಚಿತ್ರ  ಹಾಕೊಂಡು ಖುಷಿ ಪಡೋದು ಮತ್ತೊಂದ್ಕಡೆ.

ಆದ್ರೆ ಇಷ್ಟು ವರ್ಷ ಯುಗಾದಿ, ದೀಪಾವಳಿ, ನಾಗರಪಂಚಮಿ, ಊರಮ್ಮನ ಜಾತ್ರೆ ಮೊದಲಾದ ಇಂತಹ ಸಾಲು ಸಾಲು ಹಿಂದುಗಳ ಹಬ್ಬಗಳಲ್ಲಿ ನಮ್ಮನ್ಯಾಕೆ ಕರೀಲಿಲ್ಲ ಎನ್ನುವ ಪ್ರೀತಿಯ ಆರೋಪವನ್ನೂ ಮುಸ್ಲಿಂ‌ ಭಾಂಧವರು‌ ಮಾಡಿದ್ದನ್ನು ನಾನು ನೋಡಲಿಲ್ಲ.

ಅಂತೆಯೇ ನಾನು ಈ ಹಬ್ಬಗಳಲ್ಲಿ ಇಂತಿಂತವರ ಮನೆಯಲ್ಲಿ ಹಬ್ಬದೂಟ ಮಾಡಿದೆ ಎಂದು ಫೋಟೋ ಹಾಕಿಕೊಂಡಿದ್ದನ್ನೂ ನಾ ಕಾಣೆ… ಇದ್ದರೆ ಬೆರಳೆಣಿಕೆಯ ಉದಾಹರಣೆ ಸಿಗಬಹುದು.

ಯಾಕೆ ಹೀಗೆ ಅಂತ?

ಮುಸ್ಲೀಮರ ಮನೆಗಳಲ್ಲಿ ಊಟ ಮಾಡುವುದನ್ನು ವಿಶೇಷವೆನ್ನಿಸುವಂತೆ ಬಿಂಬಿಸುವ ನಾವುಗಳು‌ ನಮ್ಮ ಮನೆಗಳಲ್ಲಿ ಮುಸ್ಲೀಮರ ಊಟವನ್ನು ಸಹಜವೆಂದು ಭಾವಿಸುತ್ತೇವೆಯೆ? ಅಥವಾ ಭಾವಿಸುತ್ತಿಲ್ಲ ಯಾಕೆ?

ಅಥವಾ

ನಮ್ಮಹಬ್ಬಗಳಿಗೆ ಮುಸ್ಲೀಮರನ್ನು ಆಹ್ವಾನಿಸಿದರೆ ಅದನ್ನೂ ಸೌಹಾರ್ದತೆಯ ಭಾಗವಾಗಿ ಸಾರ್ವಜನಿಕವಾಗಿ ಹಂಚಿಕೊಳ್ಳುವುದು ಕಡಿಮೆ.

ಯಾಕೆ ಹೀಗೆ..?

ಹೀಗೆ ಮಾಡುವ ಮೂಲಕ  ಅನುಕಂಪ ತೋರುವುದು, ವಿಶೇಷವೆಂಬಂತೆ ತೋರಿಸುತ್ತಲೇ ಮುಸ್ಲಿಂ ಬಾಂಧವರನ್ನು ಎಂಥದೋ‌ ‘ಅವರು’ ಎಂಬ ಪ್ರತ್ಯೇಕತೆಯ ಸಾಂಕೇತಿಕತೆಯನ್ನು ಬಲಗೊಳಿಸುತ್ತೇವೆಯಾ? ಎನ್ನುವ ಅನುಮಾನ. ಇದು ಹೊಸ ತಲೆಮಾರಿನ ಮಕ್ಕಳಲ್ಲಿ ಹೀಗೆಯೇ ಪರಿಣಾಮ ಬೀರಿದಂತೆ ಕಾಣುತ್ತದೆ.

ಉತ್ತರ ಕರ್ನಾಟಕ-ಕಲ್ಯಾಣ ಕರ್ನಾಟಕದ ಹಳ್ಳಿಗಳಲ್ಲಿ ಹಿಂದು-ಮುಸ್ಲೀಮರು ಮದುವೆ ಮುಂಜಿಗಳಲ್ಲಿ ಬೆರೆಯುವುದು, ಮೊಹರಂ ಹಬ್ಬದಲ್ಲಿ ತಾತ್ಕಾಲಿಕವಾಗಿ ಧರ್ಮದ ಗಡಿಗೆರೆ ಅಳಿಸಿ ಒಂದಾಗುವುದು, ಅಳಿಯ ಮಾವ, ಅಣ್ಣ ತಮ್ಮ, ದೊಡ್ಡಮ್ಮ ಚಿಕ್ಕಮ್ಮ ಮೊದಲಾದ ಸಂಬಂಧ ವಾಚಕಗಳಲ್ಲಿ ಆತ್ಮೀಯತೆ ತೋರುವುದು ಸಹಜವೆಂಬಂತೆ ಕಾಣುತ್ತವೆ.

ಇಂತಹ ಸಹಜ ಹೊಂದಾಣಿಕೆ ಕೊಡುಕೊಳೆ ಇಂದು ಮುಖ್ಯ ಅನ್ನಿಸುತ್ತೆ, ಪ್ರತ್ಯೇಕವೆಂಬಂತೆ ತೋರುವ  ಯಾವ ಚಟುವಟಿಕೆಗಳೂ ಧರ್ಮದ ಗಡಿಗೆರೆಗಳನ್ನು ತಾತ್ಕಾಲಿಕವಾಗಿಯೂ ಅಳಿಸಿದಂತೆ ಕಾಣುವುದಿಲ್ಲ.

ಅಂಬೇಡ್ಕರ್ ಜಾತಿ ವಿನಾಶಕ್ಕಾಗಿ ಹೇಳುವ ಸಹಭೋಜನದ ಪರಿಣಾಮ ತೀರಾ ಕಡಿಮೆಯೇನಲ್ಲ. ದಲಿತರೆ ಮಾಡುವ ಗ್ರಾಮದೇವತೆಯ ಬೇಟೆ ಹಬ್ಬಗಳಲ್ಲಿ ಊರಿನ ಅನೇಕ ಮೇಲ್ಜಾತಿಗಳು ಉಂಡು ಬರುತ್ತಾರೆ. ಈ ಊಟವನ್ನು ಸಾರ್ವಜನಿಕಗೊಳಿಸುವುದಿಲ್ಲ. ಅಪರೂಪಕ್ಕೆ ದಲಿತ ಮೇಲ್ಮಧ್ಯಮ ವರ್ಗದ ಯುವಕ ಯುವತಿಯರು ಮೇಲ್ಮಧ್ಯಮ ಜಾತಿಗಳ ಮನೆಗಳಲ್ಲೂ ಊಟ ಮಾಡಬಹುದು. ಅದನ್ನೂ ಸಾರ್ವಜನಿಕಗೊಳಿಸುವುದು ಕಡಿಮೆ. ಅಂದರೆ ಜಾತಿಗಳ ಬೆರೆಯುವಿಕೆ ಸಾರ್ವಜನಿಕ ಸುದ್ದಿಯಾಗದು. ಧರ್ಮಗಳ ಬೆರೆಯುವಿಕೆ ಸಾರ್ವಜನಿಕ ಸುದ್ದಿಯಾಗುವುದರ ಹಿಂದಣ ಇರುವ ಆಶಯವೇನು?

ದಲಿತ ಮೇಲ್ಜಾತಿಗಳ ಬೆರೆಯುವಿಕೆಯ ಗೌಪ್ಯತೆ ಕಾಪಾಡುವುದರ ಹಿಂದೆ ಜಾತೀಯತೆಯನ್ನು ಹಾಗೇ ಉಳಿಸುವ ಮನಸ್ಥಿತಿ ಕೆಲಸ ಮಾಡುತ್ತದೆ.

ಇನ್ನಾದರೂ ಸಾಮಾಜಿಕ‌‌ ಜಾಲತಾಣಗಳಲ್ಲಿ ಮೇಲುಜಾತಿಗಳು ದಲಿತರ‌ ಮನೆಗಳಲ್ಲಿ ಊಟ ಮಾಡಿದ್ದನ್ನು, ತಮ್ಮ ಮನೆಗಳಲ್ಲಿ ದಲಿತರು ಊಟ ಮಾಡಿದ್ದರ ಚಿತ್ರಗಳನ್ನು ಹೀಗೆ ಸಾರ್ವಜನಿಕವಾಗಿ  ಹಂಚಿಕೊಳ್ಳುವ ಅಭಿಯಾನವೂ ಶುರುವಾಗಲಿ.

ಭಾರತದ ಸಂವಿಧಾನದ ಪ್ರಸ್ತಾವನೆ ‘ಭಾರತದ ಜನೆತೆಯಾದ ನಾವು’ ಎಂದು ಶುರುವಾಗುತ್ತದೆ. ಈ ಜನತೆಯಾದ ‘ನಾವು’ ಗಳಲ್ಲಿ ಮುಸ್ಲೀಮರೂ ಇದ್ದಾರೆ. ಸೂಕ್ಷ್ಮವಾಗಿ ಗಮನಿಸಿ ಪ್ರಜ್ಞಾವಂತರೂ ಮುಸ್ಲೀಮರನ್ನು ‘ಅವರು’ ಎಂದು ಸಂಭೋದಿಸಲು ಶುರು ಮಾಡಿದ್ದಾರೆ. ಒಂದು ಊರಿನ ಮೇಲ್ಜಾತಿಗಳೂ ದಲಿತರನ್ನೂ ‘ಅವರು’ ಎಂದೇ ಗುರುತಿಸುತ್ತಿದ್ದರು. ಗಂಡಸರೆಲ್ಲಾ ಒಟ್ಟಾದಾಗ ಗಂಡುಕುಲದ ಬಗ್ಗೆ ಮಾತನಾಡುವಾಗ ಮಹಿಳೆಯರನ್ನೂ ಹೀಗೆ ‘ಅವರು’ ಎಂದೇ ಗುರುತಿಸುತ್ತಾರೆ.

ಈ ‘ಅವರು’ ‘ನಾವು’ ಎನ್ನುವ ಬೌಂಡರಿಯನ್ನು ಸಂವಿಧಾನ ಹೊಡೆದು ಹಾಕಿಯೇ ‘ಜನತೆಯಾದ ನಾವುಗಳು’ ಎಂದಿದೆ. ಹಾಗಾಗಿ ನಮ್ಮಲ್ಲಿಯ ಕೆಲವರು ಅವರಾಗುವುದು ಬೇಡ. ‘ನಾವು’ ನಾವಾಗಿರಲು ಪ್ರಯತ್ನಿಸೋಣ.

Share:

Leave a Reply

Your email address will not be published. Required fields are marked *

More Posts

ವಿಧಾನಸಭೆಗಳ ಸಂರಚನೆ

ವಿಧಾನಸಭೆಗಳ ಸಂರಚನೆ 170. ವಿಧಾನಸಭೆಗಳ ಸಂರಚನೆ:- (1956ನೆಯ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ 9ನೆಯ ಪ್ರಕರಣದ ಮೂಲಕ

ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು

169. ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು:- (1) 168ನೆಯ ಅನುಚ್ಛೇದದಲ್ಲಿ ಏನೇ ಇದ್ದಾಗ್ಯೂ, ವಿಧಾನಪರಿಷತ್ತು ಇರುವ ರಾಜ್ಯದಲ್ಲಿ

On Key

Related Posts

Composition of the Legislative Assemblies

Composition of the Legislative Assemblies:- (Subs. by the Constitution (Seventh Amendment) Act, 1956, s. 9, for art. 170.) (1) Subject to the provisions of article 333, the Legislative Assembly of

ವಿಧಾನಸಭೆಗಳ ಸಂರಚನೆ

ವಿಧಾನಸಭೆಗಳ ಸಂರಚನೆ 170. ವಿಧಾನಸಭೆಗಳ ಸಂರಚನೆ:- (1956ನೆಯ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ 9ನೆಯ ಪ್ರಕರಣದ ಮೂಲಕ ಮೂಲ ಅನುಚ್ಛೇದಕ್ಕೆ ಬದಲಾಗಿ ಪ್ರತ್ಯಾಯೋಜಿಸಲಾಗಿದೆ.) (1) 333ನೆಯ ಅನುಚ್ಛೇದದ ಉಪಬಂಧಗಳಿಗೊಳಪಟ್ಟು, ಪ್ರತಿಯೊಂದು ರಾಜ್ಯದ ವಿಧಾನಸಭೆಯು ಆ ರಾಜ್ಯದಲ್ಲಿನ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಿಂದ

ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು

169. ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು:- (1) 168ನೆಯ ಅನುಚ್ಛೇದದಲ್ಲಿ ಏನೇ ಇದ್ದಾಗ್ಯೂ, ವಿಧಾನಪರಿಷತ್ತು ಇರುವ ರಾಜ್ಯದಲ್ಲಿ ಅದನ್ನು ರದ್ದುಗೊಳಿಸಬೇಕೆಂದು ಅಥವಾ ಅಂಥ ಪರಿಷತ್ತು ಇಲ್ಲದ ರಾಜ್ಯದಲ್ಲಿ ಅಂಥ ಪರಿಷತ್ತನ್ನು ಸೃಜಿಸಬೇಕೆಂದು ಆ ರಾಜ್ಯದ ವಿಧಾನಸಭೆಯು ಆ ಸಭೆಯ ಒಟ್ಟು

CHAPTER III- THE STATE LEGISLATURE

General 168. Constitution of Legislatures in States:- (1) For every State there shall be a Legislature which shall consist of the Governor, and- (a) in the States of [Andhra Pradesh,]