ಉಚ್ಚ ನ್ಯಾಯಾಲಯಗಳಿಂದ ಬರುವ ಅಪೀಲುಗಳಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದ ಅಪೀಲು ಅಧಿಕಾರ ವ್ಯಾಪ್ತಿ

132. ಕೆಲವು ಮೊಕದ್ದಮೆಗಳಲ್ಲಿ ಉಚ್ಚ ನ್ಯಾಯಾಲಯಗಳಿಂದ ಬರುವ ಅಪೀಲುಗಳಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದ ಅಪೀಲು ಅಧಿಕಾರ ವ್ಯಾಪ್ತಿ:- (1) ಭಾರತದ ರಾಜ್ಯಕ್ಷೇತ್ರದಲ್ಲಿರುವ ಯಾವುದೇ ಉಚ್ಚ ನ್ಯಾಯಾಲಯವು ಸಿವಿಲ್, ಕ್ರಿಮಿನಲ್ ಅಥವಾ ಇತರ ವ್ಯವಹರಣೆಯಲ್ಲಿ ನೀಡಿದ ಯಾವುದೇ ತೀರ್ಪು, ಡಿಕ್ರಿ ಅಥವಾ ಅಂತಿಮ ಆದೇಶಕ್ಕೆ ಸಂಬಂಧಪಟ್ಟ ಮೊಕದ್ದಮೆಯು ಈ ಸಂವಿಧಾನದ ಅರ್ಥ ವಿವರಣೆಗೆ ಸಂಬಂಧಿಸಿದ ಗಣನೀಯವಾದ ಕಾನೂನಿನ ಪ್ರಶ್ನೆಯನ್ನು ಒಳಗೊಂಡಿದೆಯೆಂದು [1978ನೇ ಇಸವಿಯ ಸಂವಿಧಾನ (ನಲವತ್ತನಾಲ್ಕನೆಯ ತಿದ್ದುಪಡಿ) ಅಧಿನಿಯಮದ 17ನೇ ಪ್ರಕರಣದ ಮೂಲಕ “ಆ ಉಚ್ಚ ನ್ಯಾಯಾಲಯವು ಪ್ರಮಾಣನ ಮಾಡಿದರೆ” ಎಂಬ ಪದಗಳಿಗೆ ಬದಲಾಗಿ (1-8-79ರಿಂದ ಜಾರಿಗೆ ಬರುವಂತೆ) ಪ್ರತ್ಯಾಯೋಜಿಸಲಾಗಿದೆ.] [134ಎ ಅನುಚ್ಛೇದದ ಮೇರೆಗೆ ಆ ಉಚ್ಚ ನ್ಯಾಯಾಲಯವು ಪ್ರಮಾಣೀಕರಿಸಿದರೆ ಅಂಥ ತೀರ್ಪಿನ, ಡಿಕ್ರಿಯ ಅಥವಾ ಅಂತಿಮ ಆದೇಶದ ವಿರುದ್ಧ ಸರ್ವೋಚ್ಚ ನ್ಯಾಯಾಲಯಕ್ಕೆ ಅಪೀಲು ಹೂಡಲು ಅವಕಾಶವಿರತಕ್ಕದ್ದು.

[1978ನೇ ಇಸವಿಯ ಸಂವಿಧಾನ (ನಲವತ್ತನಾಲ್ಕನೆಯ ತಿದ್ದುಪಡಿ) ಅಧಿನಿಯಮದ 17ನೇ ಪ್ರಕರಣದ ಮೂಲಕ (1-8-1979ರಿಂದ ಜಾರಿಗೆ ಬರುವಂತೆ) (2)ನೇ ಖಂಡವನ್ನು ಬಿಟ್ಟುಬಿಡಲಾಗಿದೆ.]

(3) ಅಂಥ ಪ್ರಮಾಣ ಪತ್ರವನ್ನು ಕೊಟ್ಟಿರುವಲ್ಲಿ ಹಿಂದೆ ಹೇಳಿರುವಂಥ ಯಾವುದೇ ಪ್ರಶ್ನೆಯನ್ನು ತಪ್ಪಾಗಿ ತೀರ್ಮಾನಿಸಲಾಗಿದೆಯೆಂಬ ಕಾರಣದ ಮೇಲೆ ಆ ಮೊಕದ್ದಮೆಯ ಯಾರೇ ಪಕ್ಷಕಾರನು ಸರ್ವೋಚ್ಚ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಬಹುದು. [1978ನೇ ಇಸವಿಯ ಸಂವಿಧಾನ (ನಲವತ್ತನಾಲ್ಕನೆಯ ತಿದ್ದುಪಡಿ) ಅಧಿನಿಯಮದ 17ನೇ ಪ್ರಕರಣದ ಮೂಲಕ (1-8-1979 ರಿಂದ ಜಾರಿಗೆ ಬರುವಂತೆ) ಕೆಲವು ಪದಗಳನ್ನು ಬಿಟ್ಟುಬಿಡಲಾಗಿದೆ.]

ವಿವರಣೆ:- ಈ ಅನುಚ್ಛೇದದ ಉದ್ದೇಶಗಳಿಗಾಗಿ “ಅಂತಿಮ ಆದೇಶ” ಎಂಬುದು, ವಿವಾದಾಂಶವನ್ನು ಅಪೀಲುದಾರನ ಪರವಾಗಿ ತೀರ್ಮಾನಿಸಿದರೆ, ಯಾವ ಆದೇಶವು ಆ ಅಂತಿಮ ಎಲೆಗೆ ಸಾಕಾಗಬಹುದೋ ಆ ಆದೇಶವನ್ನು ಒಳಗೊಳ್ಳುತ್ತದೆ.

133. ಸಿವಿಲ್ ವಿಷಯಗಳ ಸಂಬಂಧದಲ್ಲಿ ಉಚ್ಚ ನ್ಯಾಯಾಲಯಗಳಿಂದ ಬರುವ ಅಪೀಲುಗಳಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದ ಅಪೀಲು ಅಧಿಕಾರ ವ್ಯಾಪ್ತಿ:- [1972ನೇ ಇಸವಿಯ ಸಂವಿಧಾನ (ಮೂವತ್ತನೆಯ ತಿದ್ದುಪಡಿ) ಅಧಿನಿಯಮದ 2ನೇ ಪ್ರಕರಣದ ಮೂಲಕ (1)ನೇ ಖಂಡಕ್ಕೆ ಬದಲಾಗಿ (27-2-73ರಿಂದ ಜಾರಿಗೆ ಬರುವಂತೆ) ಪ್ರತ್ಯಾಯೋಜಿಸಲಾಗಿದೆ.] [(1) ಭಾರತದ ರಾಜ್ಯಕ್ಷೇತ್ರದಲ್ಲಿರುವ ಒಂದು ಉಚ್ಚ ನ್ಯಾಯಾಲಯವು ಸಿವಿಲ್ ವ್ಯವಹರಣೆಯಲ್ಲಿ ನೀಡಿದ ಯಾವುದೇ ತೀರ್ಪು, ಡಿಕ್ರಿ ಅಥವಾ ಅಂತಿಮ ಆದೇಶದ ಸಂಬಂಧದಲ್ಲಿ],-

(ಎ) ಆ ಮೊಕದ್ದಮೆಯು ಸಾರ್ವಜನಿಕ ಮಹತ್ವದ ಮುಖ್ಯವಾದ ಕಾನೂನು ಪ್ರಶ್ನೆಯನ್ನು ಒಳಗೊಂಡಿದೆ ಎಂದು; ಮತ್ತು

(ಬಿ) ಉಚ್ಚ ನ್ಯಾಯಾಲಯದ ಅಭಿಪ್ರಾಯದಲ್ಲಿ ಸದರಿ ಪ್ರಶ್ನೆಯನ್ನು ಸರ್ವೋಚ್ಚ ನ್ಯಾಯಾಲಯವು ತೀರ್ಮಾನಿಸಬೇಕಾಗಿದೆ ಎಂದು

[1978ನೇ ಇಸವಿಯ ಸಂವಿಧಾನ (ನಲವತ್ತನಾಲ್ಕನೆಯ ತಿದ್ದುಪಡಿ) ಅಧಿನಿಯಮದ 18ನೇ ಪ್ರಕರಣದ ಮೂಲಕ “ಉಚ್ಚ ನ್ಯಾಯಾಲಯವು ಪ್ರಮಾಣನ ಮಾಡಿದರೆ” ಎಂಬ ಪದಗಳಿಗೆ ಬದಲಾಗಿ (1-8-1979 ರಿಂದ ಜಾರಿಗೆ ಬರುವಂತೆ) ಪ್ರತ್ಯಾಯೋಜಿಸಲಾಗಿದೆ.] – 134ಎ ಅನುಚ್ಛೇದದ ಮೇರೆಗೆ ಆ ಉಚ್ಚ ನ್ಯಾಯಾಲಯವು ಪ್ರಮಾಣೀಕರಿಸಿದರೆ] ಅಂಥ ತೀರ್ಪಿನ, ಡಿಕ್ರಿಯ ಅಥವಾ ಅಂತಿಮ ಆದೇಶದ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಅಪೀಲು ಹೂಡಲು ಅವಕಾಶವಿರತಕ್ಕದ್ದು.

(2) 132ನೆಯ ಅನುಚ್ಛೇದದಲ್ಲಿ ಏನೇ ಇದ್ದಾಗ್ಯೂ, (1)ನೇ ಖಂಡದ ಮೇರೆಗೆ ಸರ್ವೋಚ್ಚ ನ್ಯಾಯಾಲಯಕ್ಕೆ ಅಪೀಲು ಮಾಡುವ ಯಾರೇ ಪಕ್ಷಕಾರನು ಈ ಸಂವಿಧಾನದ ಅರ್ಥ ವಿವರಣೆಗೆ ಸಂಬಂಧಿಸಿದ ಮುಖ್ಯವಾದ ಕಾನೂನು ಪ್ರಶ್ನೆಯನ್ನು ತಪ್ಪಾಗಿ ತೀರ್ಮಾನಿಸಿರುವುದು ಅಂಥ ಅಪೀಲಿನ ಕಾರಣಗಳಲ್ಲಿ ಒಂದು ಕಾರಣವಾಗಿದೆ ಎಂದು ವಾದವನ್ನು ಮಂಡಿಸಬಹುದು.

(3) ಈ ಅನುಚ್ಛೇದದಲ್ಲಿ ಏನೇ ಇದ್ದಾಗ್ಯೂ, ಸಂಸತ್ತು ಕಾನೂನಿನ ಮೂಲಕ ಅನ್ಯಥಾ ಉಪಬಂಧಿಸಿದ ಹೊರತು, ಉಚ್ಚ ನ್ಯಾಯಾಲಯದ ಒಬ್ಬ ನ್ಯಾಯಾಧೀಶನು ನೀಡಿದ ತೀರ್ಪು, ಡಿಕ್ರಿ ಅಥವಾ ಅಂತಿಮ ಆದೇಶದ ವಿರುದ್ಧ ಸವೋಚ್ಚ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಲು ಅವಕಾಶವಿರತಕ್ಕದ್ದಲ್ಲ.

Source: The Constitution Of India (AS ON 14th JANUARY 2019), Government Of India, Ministry of Law and Justice, Legislative Department, Karnataka Official Language (Legislative) Commission and Directorate of Translations, Government of Karnataka, Page No. 53

Share:

Leave a Reply

Your email address will not be published. Required fields are marked *

More Posts

ವಿಧಾನಸಭೆಗಳ ಸಂರಚನೆ

ವಿಧಾನಸಭೆಗಳ ಸಂರಚನೆ 170. ವಿಧಾನಸಭೆಗಳ ಸಂರಚನೆ:- (1956ನೆಯ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ 9ನೆಯ ಪ್ರಕರಣದ ಮೂಲಕ

ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು

169. ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು:- (1) 168ನೆಯ ಅನುಚ್ಛೇದದಲ್ಲಿ ಏನೇ ಇದ್ದಾಗ್ಯೂ, ವಿಧಾನಪರಿಷತ್ತು ಇರುವ ರಾಜ್ಯದಲ್ಲಿ

On Key

Related Posts

Composition of the Legislative Assemblies

Composition of the Legislative Assemblies:- (Subs. by the Constitution (Seventh Amendment) Act, 1956, s. 9, for art. 170.) (1) Subject to the provisions of article 333, the Legislative Assembly of

ವಿಧಾನಸಭೆಗಳ ಸಂರಚನೆ

ವಿಧಾನಸಭೆಗಳ ಸಂರಚನೆ 170. ವಿಧಾನಸಭೆಗಳ ಸಂರಚನೆ:- (1956ನೆಯ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ 9ನೆಯ ಪ್ರಕರಣದ ಮೂಲಕ ಮೂಲ ಅನುಚ್ಛೇದಕ್ಕೆ ಬದಲಾಗಿ ಪ್ರತ್ಯಾಯೋಜಿಸಲಾಗಿದೆ.) (1) 333ನೆಯ ಅನುಚ್ಛೇದದ ಉಪಬಂಧಗಳಿಗೊಳಪಟ್ಟು, ಪ್ರತಿಯೊಂದು ರಾಜ್ಯದ ವಿಧಾನಸಭೆಯು ಆ ರಾಜ್ಯದಲ್ಲಿನ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಿಂದ

ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು

169. ರಾಜ್ಯಗಳಲ್ಲಿ ವಿಧಾನಪರಿಷತ್ತುಗಳನ್ನು ರದ್ದುಗೊಳಿಸುವುದು ಅಥವಾ ಸೃಜಿಸುವುದು:- (1) 168ನೆಯ ಅನುಚ್ಛೇದದಲ್ಲಿ ಏನೇ ಇದ್ದಾಗ್ಯೂ, ವಿಧಾನಪರಿಷತ್ತು ಇರುವ ರಾಜ್ಯದಲ್ಲಿ ಅದನ್ನು ರದ್ದುಗೊಳಿಸಬೇಕೆಂದು ಅಥವಾ ಅಂಥ ಪರಿಷತ್ತು ಇಲ್ಲದ ರಾಜ್ಯದಲ್ಲಿ ಅಂಥ ಪರಿಷತ್ತನ್ನು ಸೃಜಿಸಬೇಕೆಂದು ಆ ರಾಜ್ಯದ ವಿಧಾನಸಭೆಯು ಆ ಸಭೆಯ ಒಟ್ಟು

CHAPTER III- THE STATE LEGISLATURE

General 168. Constitution of Legislatures in States:- (1) For every State there shall be a Legislature which shall consist of the Governor, and- (a) in the States of [Andhra Pradesh,]