October 1, 2023 8:12 am

ಮನೋಲೋಕವನ್ನು ಬಹಿರಂಗಗೊಳಿಸುವ ಶೇಕ್ಸ್‌ಪಿಯರ್

ಡಾ. ಪ್ರದೀಪ್ ಮಾಲ್ಗುಡಿ

ವಿಲಿಯಂ ಶೇಕ್ಸ್‌ಪಿಯರ್ ಹುಟ್ಟಿ (೨೬.೦೪.೧೫೬೪ – ೨೩.೦೪.೧೬೧೬) ಏಪ್ರಿಲ್ 2014ಕ್ಕೆ ೫೫೦ ವರ್ಷ. ಐದೂವರೆ ಶತಮಾನ ಕಳೆದರೂ ಅವನು ನಿರ್ವಹಿಸಿರುವ ಪಾತ್ರಗಳಿಂದ ಅವನು ಜಗತ್ತಿನಾದ್ಯಂತ ಇಂದಿಗೂ ಚರ್ಚಿಸಲ್ಪಡುತ್ತಿದ್ದಾನೆ. ಇಂದಿಗೂ ಅವನ ಒಂದು ನಾಟಕವಾದರೂ ವಿಶ್ವದ ಯಾವುದಾದರೂ ಮೂಲೆಯಲ್ಲಿ ಪ್ರದರ್ಶನಗೊಳ್ಳುತ್ತಿರುತ್ತದೆ. ಇದೇ ಅವನ ವೈಶಿಷ್ಟ್ಯ. ಅಂತಹ ಪ್ರತಿಭಾವಂತ ನಾಟಕಕಾರನ ಬಗೆಗೆ ಅನೇಕ ಕುತೂಹಲಕಾರಿ ಅಂಶಗಳಿವೆ. ವೈನೋದಿಕ, ಐತಿಹಾಸಿಕ ಹಾಗೂ ದುರಂತ ನಾಟಕಗಳಲ್ಲದೆ, ಸಾನೆಟ್‌ಗಳನ್ನೂ ಇವನು ಬರೆದಿದ್ದಾನೆ. ಇವನ ಸಾಹಿತ್ಯ ಕೃತಿಗಳು ಹಾಗೂ ಅವುಗಳನ್ನುಕುರಿತು ನಡೆದಿರುವ ಸಂಶೋಧನೆ, ಪ್ರಕಟವಾಗಿರುವ ವಿಮರ್ಶೆ, ಅನುವಾದಗೊಂಡಿರುವ ಕೃತಿಗಳನ್ನು ಒಂದರ ಪಕ್ಕ ಒಂದು ಪುಸ್ತಕವನ್ನು ಜೋಡಿಸುತ್ತಾ ಹೋದರೆ ಇಡೀ  ವಿಶ್ವವನ್ನು ಏಳು ಸಲ ಪ್ರದಕ್ಷಿಣೆ ಹಾಕಿಸಬಹುದಂತೆ! ಇವನು ಮದುವೆಯಾಗಿದ್ದು ತನಗಿಂತ ಹಿರಿಯ ಹೆಣ್ಣು ಮಗಳಾದ ಹ್ಯಾನೆ ಹಾಥ್‌ವೇ ಎಂಬುವವಳನ್ನು. ಮದುವೆಯಾದಾಗ ಇವನಿಗೆ ೧೮, ಹೆಂಡತಿಗೆ ೨೬ ವರ್ಷ! ತಾನು ಸಾಯುವ ಒಂದು ತಿಂಗಳು ಮುನ್ನ ಇವನು ವಿಲ್ ಬರೆದಿದ್ದ! ಈ ಕೃತಿಕಾರನ ಜೀವನವೂ ಅವನ ನಾಟಕದಂತೆ ಕುತೂಹಲಕಾರಿಯಾಗಿದೆ.

ಜಗತ್ಸಾಹಿತ್ಯದಲ್ಲಿ ಸಾಹಿತ್ಯದಕಾರಣಕ್ಕೆ ಭಾಷೆಯನ್ನುಕಲಿಯುವಂತೆ ಮಾಡಿದ ಕೆಲವೇ ಉದಾಹರಣೆಗಳಲ್ಲಿ ಶೇಕ್ಸ್‌ಪಿಯರ್‌ನಿಗೆ ಸ್ಥಾನವಿದೆ. ಇಂದುಇಂಗ್ಲಿಶ್‌ಜಗತ್ತಿನಾದ್ಯಂತ ಪ್ರಸರಿಸುವಲ್ಲಿಇರುವಅನೇಕ ಕಾರಣಗಳಲ್ಲಿ ಇವನ ನಾಟಕ ಕೃತಿಗಳ ಕೊಡುಗೆಯದ್ದು ಸಿಂಹಪಾಲು. ಪ್ರತಿಭಾಶಾಲಿ ಲೇಖಕನಿಂದ ಭಾಷೆಯೊಂದಕ್ಕೆದಕ್ಕಬಹುದಾದ ಶಕ್ತಿಯನ್ನುಇಂಗ್ಲಿಶ್ ಭಾಷೆ ಗಳಿಸಿದ್ದು ಗಮನಾರ್ಹ ಸಂಗತಿ. ಇವನ ಕೃತಿಗಳು ರಂಗಪ್ರವೇಶಿಸಿದ ನಂತರ ಅನೇಕ ಮಹತ್ವದ ಘಟನೆಗಳು ಜರುಗಿದವು. ಯೂರೋಪಿಯನ್ ರಾಷ್ಟ್ರಗಳಿಂದ ಧರ್ಮ, ಅಧಿಕಾರದ ವಿಸ್ತರಣೆ, ವ್ಯಾಪಾರೀ ಉದ್ದೇಶಗಳಿಗಾಗಿ ಮೇಲಿಂದ ಮೇಲೆ ವಲಸೆ, ತೃತೀಯ ರಾಷ್ಟ್ರಗಳನ್ನು ವಸಾಹತುಗಳನ್ನಾಗಿಸಿಕೊಳ್ಳುವ, ಆ ಮೂಲಕ ಹಿಡಿತ ಸಾಧಿಸುವ ಕೆಲಸಗಳಾದವು. ಈ ಕಾರಣದಿಂದ ಶೇಕ್ಸ್‌ಪಿಯರನ ಕೃತಿಗಳು ಅನಾಯಾಸವಾಗಿ ವಿಶ್ವದಾದ್ಯಂತ ಪಸರಿಸಿದವು.

ಇವನ ಆರಂಭದನಾಟಕಗಳು ವೈನೋದಿಕ (ಕಾಮಿಡಿ) ವಸ್ತುವನ್ನು ಒಳಗೊಂಡಿವೆ. ಉದಾಹರಣೆಗೆ, ಎ ಮಿಡ್ ಸಮ್ಮರ್ ನೈಟ್’ಸ್ ಡ್ರೀಮ್, ಮರ್ಚೆಂಟ್‌ಆಫ್ ವೆನಿಸ್, ಶೈಲಾಕ್, ಆಸ್‌ಯೂ ಲೈಕ್‌ಇಟ್, ಟ್ವೆಲ್ತ್ ನೈಟ್ ಮುಂತಾದವು. ಇವನಿಗೆ ಅಗ್ರ ನಾಟಕಕಾರ ಪಟ್ಟವನ್ನುಕೊಟ್ಟದ್ದುದುರಂತ ನಾಟಕಗಳು.ಆಧುನಿಕಕಾಲದಲ್ಲೂಇವು ತಾಜಾತನವನ್ನು ಒಳಗೊಂಡಿರುವ ಕಾರಣಕ್ಕೆಪ್ರಸ್ತುತವಾಗಿವೆ. ಕಾಲಾತೀವಾಗಿಯಾವುದೇ ಸ್ಥಳೀಯ ಹೆಸರುಗಳಿಗೆ ಬದಲಾಯಿಸಿ ಅಭಿನಯಿಸುವ ಸಾಧ್ಯತೆಗಳನ್ನು ಈ ನಾಟಕಗಳು ಒಳಗೊಂಡಿವೆ.

ಮನೋವೈಜ್ಞಾನಿಕ ವಿಶ್ಲೇಷಣೆಗೆ ಒಳಗಾಗಿರುವ ಇವನ ಕೆಲವು ಪಾತ್ರಗಳು ವಸಾಹತುಶಾಹಿ ಮನಸ್ಥಿತಿಯ ಅನಾವರಣವನ್ನು ಮಾಡುತ್ತವೆ. ಟೆಂಪೆಸ್ಟ್ ನಾಟಕದಲ್ಲಿ ಪ್ರಾಸ್ಪೆರೋ ಮತ್ತುಕ್ಯಾಲಿಬನ್ ನಡುವೆ ನಡೆಯುವ ಮಾತುಗಳಲ್ಲಿ ಈ ಅಂಶಗಳನ್ನು ಗುರುತಿಸಬಹುದು. ತೃತೀಯ ರಾಷ್ಟ್ರಗಳಿಗೆ ಎಲ್ಲವನ್ನೂಕೊಟ್ಟಿದ್ದೇವೆಂದು ಹೇಳಿಕೊಳ್ಳುವ ವಸಾಹತುಶಾಹಿಗಳ ಮನಸಿನ ಆಳವನ್ನು ಇವನ ನಾಟಕಗಳು ಬಿಚ್ಚಿಡುತ್ತವೆ. ಈ ಅಂಶವನ್ನು ಎಡ್ವರ್ಡ್ ಸೈದ್ ತನ್ನ ಓರಿಯಂಟಲಿಸಂ ಕೃತಿಯಲ್ಲಿ ವಿಶ್ಲೇಷಿಸಿದ್ದಾನೆ. ಕಪ್ಪು ಮೂಲನಿವಾಸಿಯ ವಾಸಸ್ಥಾನಕ್ಕೆ ಬಂದು, ನಂತರ ಅವನನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುವ ಹುನ್ನಾರವು ವಸಾಹತುಕಾರರ ಉದ್ದೇಶವಾಗಿತ್ತೆಂಬುದನ್ನು ಸೈದ್ ಉಲ್ಲೇಖಿಸುತ್ತಾನೆ.

ಕೃತಿಕಾರನೊಬ್ಬ ಸಮಕಾಲೀನ ವಿಷಯಗಳನ್ನು ನಿರ್ವಹಿಸಿ ಅಸಾಧಾರಣ ಯಶಸ್ಸು ಸಾಧಿಸಿರುವ ಪ್ರಮುಖ ಉದಾಹರಣೆಯಾಗಿ ಜಗತ್ತಿನ ರಂಗಭೂಮಿಯಲ್ಲಿ ಶೇಕ್ಸ್‌ಪಿಯರ್ ಹೆಸರು ಅಜರಾಮರವಾಗಿದೆ. ಒಥೆಲೊ ನಾಟಕದಲ್ಲಿ ಮಾನಸಿಕ ತೊಳಲಾಟಕ್ಕೆ ಸಿಕ್ಕುವ ನಾಯಕ ಹೆಂಡತಿಯ ಮೇಲೆ ದ್ವೇಷ ಸಾಧಿಸುತ್ತಾನೆ. ಈ ಕ್ರಿಯೆಗೆ ಇಯಾಗೊ ಮಾತುಗಳು ಕಾರಣವಾಗುತ್ತವೆ. ತನ್ನ ಹೆಂಡತಿ ಡೆಸ್ಡಿಮೋನಳ ದುರಂತ ನನ್ನ ದುರಂತವೂ ಹೌದೆಂದು ಒಥೆಲೊಗೆ ಆರಂಭದಲ್ಲಿ ತಿಳಿಯುವುದಿಲ್ಲ. ಹ್ಯಾಮ್ಲೆಟ್‌ನ ಸಮಸ್ಯೆಯಾದ  ‘ಟು ಬಿ ಆರ್ ನಾಟ್ ಟು ಬಿ’ ಕೇವಲ ಅವನೊಬ್ಬನ ಸಮಸ್ಯೆಯಲ್ಲ. ಬಹುತೇಕ ಸಮಯದಲ್ಲಿ ಜೀವಿಗಳೆಲ್ಲರ ಸ್ಥಿತಿಯಾಗಿರುತ್ತದೆ. ಅಮರ ಪ್ರೇಮಿಗಳಾದ ರೋಮಿಯೋ ಜೂಲಿಯೆಟ್‌ರ ದುರಂತ ಸಾವನ್ನು ಚಿತ್ರಿಸುವ ನಾಟಕ ಒಲಿದವರು ಅನೇಕ ಕಾರಣಕ್ಕೆ ಒಂದಾಗಲು ಸಾಧ್ಯವಾಗದ ಸ್ಥಿತಿಯನ್ನು ಬಿಂಬಿಸಿದೆ. ಕಿಂಗ್  ಲಿಯರ್ ಪರೀಕ್ಷೆಯನ್ನು ಮಾಡಿ ತನ್ನ ಹೆಣ್ಣು ಮಕ್ಕಳಿಗೆ ತನ್ನ ಆಸ್ತಿಯಲ್ಲಿ ಪಾಲನ್ನು ಹಂಚುವ ಯೋಜನೆ ಹೊಂದಿರುತ್ತಾನೆ. ಆದರೆ ಅವನಿಗೆ ತನ್ನನ್ನು ನಿಜಕ್ಕೂ ಯಾರು ಹೆಚ್ಚು ಪ್ರೀತಿಸುತ್ತಾರೆಂದು ಕೊನೆಗಾಲಕ್ಕೆ ತಿಳಿಯುತ್ತದೆ. ಹೆಣ್ಣುಮಕ್ಕಳಾದ ಗಾನರಿಲ್, ರೀಗನ್ ಸುಳ್ಳನ್ನು ನಂಬುವ,  ಕಾರ್ಗಿಲಿಯಾಳ ನಿಜವಾದ ಉತ್ತರಕ್ಕೆ ಕ್ರುದ್ಧನಾಗುವ ಕಿಂಗ್‌ಲಿಯರ್‌ಗೆ ಸತ್ಯಕ್ಕಿಂತ ತನಗೆ ಬೇಕಾದುದನ್ನು ಮಕ್ಕಳಿಂದ ಹೇಳಿಸಿಕೊಳ್ಳುವ ಬಯಕೆ ಇರುತ್ತದೆ. ಸತ್ಯ ಕಹಿಯಾಗಿರುತ್ತದೆ ಎಂಬುದನ್ನು ಈ ಕೃತಿ ಮನೋಜ್ಞವಾಗಿ ಚಿತ್ರಿಸುತ್ತದೆ. ಮರ್ಚೆಂಟ್ ಆಫ್ ವೆನ್ನಿಸ್‌ನ ಯಹೂದಿ ಶೆರ್ಲಾಕ್, ಹ್ಯಾಮ್‌ಲೆಟ್ ಮತ್ತು ಒಪಿಲಿಯಾರ ಪ್ರೇಮ ಹಾಗೂ ಒಪಿಲಿಯಾಳ ಪ್ರೀತಿಯನ್ನು ಸಂದೇಹಿಸುವ ಹ್ಯಾಮ್‌ಲೆಟ್, ತಾನು ಮಾಡಿದ ತಪ್ಪಿಗೆ ಪಾಪಪ್ರಜ್ಞೆಯಿಂದ ಬಳಲುವ ಲೇಡಿ ಮ್ಯಾಕ್‌ಬೆತ್ ಇಂತಹ ಮನೋಲೋಕದ ಅನಾವರಣವನ್ನು ಶೇಕ್ಸ್‌ಪಿಯರ್‌ ತನ್ನ ಕೃತಿಗಳಲ್ಲಿ ಮಾಡಿದ್ದಾನೆ.

Share:

Leave a Reply

Your email address will not be published. Required fields are marked *

More Posts

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ

On Key

Related Posts

ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ,ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ

ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ. ಅಂದರೆ ಪೌಷ್ಟಿಕ ಆಹಾರ ಮಣ್ಣುಪಾಲಾಗುತ್ತದೆ. ಅದೇ ಹಾಲನ್ನು ಅವಶ್ಯಕತೆ ಇರುವವರಿಗೆ ಆಹಾರವಾಗಿ ನೀಡಬಹುದಲ್ಲವೇ? ದೈವ ಭಕ್ತಿಗೂ, ಧರ್ಮ ಭಕ್ತಿಗೂ, ಪರಿಸರ

ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ

ಇಂದು ಆಗಸ್ಟ್ 20. ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಮಾತುಕತೆ…….. ವಿಜ್ಞಾನ ಮತ್ತು ಧರ್ಮ ಒಂದಕ್ಕೊಂದು ಪೂರಕವೇ ಅಥವಾ ವಿರುದ್ದವೇ ಅಥವಾ ಪರ್ಯಾಯವೇ ಅಥವಾ ಸಮಾನಾಂತರವೇ ಅಥವಾ ಪ್ರತಿಸ್ಪರ್ಧಿಗಳೇ ಅಥವಾ ಸಂಬಂಧವಿಲ್ಲವೇ….. ಧರ್ಮ ( ಮತ ) ಎಂಬುದು

ಬಸವ ಪಂಚಮಿ: ಒಂದು ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ

ಭಾರತದಲ್ಲಿ ಆಚರಿಸುವ ಪ್ರತಿವೊಂದು ಹಬ್ಬಗಳ ಹಿಂದೆ ನಮ್ಮ ಹಿರಿಯರ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಅಡಗಿರುತ್ತದೆ. ಆದರೆ ಸಾಂಪ್ರದಾಯವಾದಿಗಳು ಆ ಆಚರಣೆಗಳನ್ನು ತಿರುಚಿ ಅವುಗಳಿಗೆ ಧಾರ್ಮಿಕ ಮೌಢ್ಯದ ಹಿನ್ನೆಲೆಯನ್ನು ಹೆಣೆದಿದ್ದಾರೆ. ಕೇವಲ ಧಾರ್ಮಿಕ ಹಿನ್ನೆಲೆಯಷ್ಟೆಯಲ್ಲದೆ ಅನೇಕ ಬಗೆಯ ಮೌಢ್ಯಗಳನ್ನು ಜನಮನದಲ್ಲಿ ಬಿತ್ತಿದ್ದಾರೆ.

ಶತಮಾನಗಳ ಕಾಲ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರು ಜಾತಿ ವ್ಯವಸ್ಥೆಯಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯನ್ನು ಅನುಭವಿಸಿಕೊಂಡು ಬಂದಿದ್ದಾರೆ. ಎಲ್ಲಾ ರೀತಿಯ ಅಸಮಾನತೆಯನ್ನು ಕೊನೆಗಾಣಿಸಿ ಸಮಾನತೆಯನ್ನು ತರುವುದು ನಮ್ಮ ಸಂವಿಧಾನದ

ಮೀಸಲಾತಿ ನೀತಿಯನ್ನು ಪುನರ್ ರಚಿಸಬೇಕಾದ ಅಗತ್ಯತೆ

ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಮೀಸಲಾತಿ ನೀತಿಯ ಅನುಷ್ಠಾನದಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ. ಆದರೂ ಇಂದು ಹಲವು ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗಿವೆ. ಒಳಮೀಸಲಾತಿ, ಕೆನೆಪದರ ಬಡ್ತಿಯಲ್ಲಿ ಮೀಸಲಾತಿ ಮತ್ತು ಖಾಸಗಿ ವಲಯದಲ್ಲಿ ಮೀಸಲಾತಿ ಎಂಬ ಪ್ರಶ್ನೆಗಳು ಕಾಡುತ್ತಿವೆ. ಮೀಸಲಾತಿ ಎಂದರೇನು