ದಾವಣಗೆರೆ: ಮಾನವ ಬಂಧುತ್ವ ವೇದಿಕೆ ಮತ್ತು ಕಲಾ ಬಂಧುತ್ವ ವೇದಿಯ ಅಡಿಯಲ್ಲಿ ಹರಿಹರದ ಮೈತ್ರಿವನ ತರಬೇತಿ ಕೇಂದ್ರದಲ್ಲಿ ಮೂರು ದಿನಗಳ ಬೀದಿ ನಾಟಕ ಮತ್ತು ಜನಪರ ಗೀತೆಗಳ ಶಿಬಿರಕ್ಕೆ ಉದಯ ನ್ಯೂಸ್ ವರದಿಗಾರ ಬಿ.ಎನ್.ಮಲ್ಲೇಶ್ ಚಾಲನೆ ನೀಡಿದರು.














ಅತಿಥಿಗಳಾಗಿ ವಾಣಿಜ್ಯ ಇಲಾಖೆ ಉಪ ಆಯುಕ್ತ ಮಂಜುನಾಥ್, ತರಬೇತಿಯ ಸಂಪನ್ಮೂಲ ವ್ಯಕ್ತಿ ಗ್ಯಾರಂಟಿ ರಾಮಣ್ಣ, ವಿಭಾಗೀಯ ಸಂಚಾಲಕ ಶಿವಕುಮಾರ್ ಮಾಡಾಳ್, ಮಾನವ ಬಂಧುತ್ವ ವೇದಿಕೆ ಕಲಾ ಬಂಧುತ್ವದ ಸಂಚಾಲಕ ಅಂಜಿನಪ್ಪಲೋಕಿಕೆರೆ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಡಾ.ಎ.ಬಿ.ರಾಮಚಂದ್ರಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ತರಬೇತಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 75 ಜನ ಕಲಾವಿದರು ಭಾಗವಹಿಸಿದ್ದಾರೆ.








