ಮೈಸೂರು: ದಿನಾಂಕ 29.12.21ರಂದು ಮೈಸೂರಿನ ರೋಟರಿ ಸಭಾಂಗಣದಲ್ಲಿ ಮಾನವ ಬಂಧುತ್ವ ವೇದಿಕೆ ಮೈಸೂರು ಜಿಲ್ಲಾ ಸಮಿತಿ ವತಿಯಿಂದ ಕುವೆಂಪು ಜನ್ಮದಿನಾಚರಣೆ ಅಂಗವಾಗಿ ಕುವೆಂಪು ಸಾಹಿತ್ಯ, ಚಿಂತನೆಗಳು ಮತ್ತು ಪ್ರಸ್ತುತ ಸಾಮಾಜಿಕ ಸವಾಲುಗಳು ವಿಷಯದ ಕುರಿತು ವಿಚಾರಸಂಕಿರಣವನ್ನು ಆಯೋಜಿಸಲಾಗಿತ್ತು.
ವಿಚಾರ ಸಂಕಿರಣದಲ್ಲಿ ಸಾಹಿತಿ, ಚಿಂತಕ ಪ್ರೊ. ಕಾಳೇಗೌಡ ನಾಗವಾರ ಮಾತನಾಡಿ, ವಿವೇಕ ಇರುವವರು ಎಂದಿಗೂ ಮಾನವ ಬಂಧುತ್ವದೆಡೆಗೆ ಪ್ರತಿಕ್ರಿಯಿಸುತ್ತಾರೆ. ಆದ್ದರಿಂದ ಕಾಲಕಾಕ್ಕೆ ಏನೇನಾಗುತ್ತಿದೆ ಎಂಬ ಐತಿಹಾಸಿಕ ಸಂಗತಿಗಳನ್ನು ತಿಳಿದುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಬ್ರಿಟಿಷರು ಧರ್ಮ ಪ್ರಚಾರಕ್ಕಾಗಿ ಕ್ರೈಸ್ತ ಪಾದ್ರಿಯನ್ನು ಕಳುಹಿಸಿದಾಗ, ಅದೇ ಪಾದ್ರಿಯೇ ಚಳುವಳಿಗೆ ಸೇರಿಕೊಂಡು ಇಲ್ಲಿನ ಸಂಸ್ಕೃತಿಗೆ ಮಾರುಹೋಗುತ್ತಾರೆ. ವಿಶ್ವವಿದ್ಯಾಲಯದಲ್ಲೂ ಕಲಿಯಲಾಗದ್ದನ್ನು ಇಲ್ಲಿ ಕಲಿತಿದ್ದೇನೆ ಎಂದು ತನ್ನ ಕೃತಿಯೊಂದರಲ್ಲಿ ಬರೆದುಕೊಳ್ಳುತ್ತಾರೆ. ಇಂತಹ ವೈವಿಧ್ಯತೆ ನಮ್ಮ ಸಂಸ್ಕೃತಿಯಲ್ಲಿದೆ ಎಂದರು.
ವಾಲ್ಮೀಕಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ.ಬಸವರಾಜು, ಮಾನವ ಬಂಧುತ್ವ ವೇದಿಕೆಯ ಮೈಸೂರು ವಿಭಾಗ ಸಂಚಾಲಕಿ ಡಾ. ಲೀಲಾ ಸಂಪಿಗೆ, ಬೆಂಗಳೂರು ವಿಭಾಗದ ಸಂಚಾಲಕ ಆರ್.ಜಯಕುಮಾರ್, KAS ಅಧಿಕಾರಿ ಮಹದೇವ ನಾಯಕ, AVSS ಅಧ್ಯಕ್ಷ ತುಂಬಲ ರಾಮಣ್ಣ, ಸಂಶೋಧಕರ ಸಂಘದ ಅಧ್ಯಕ್ಷ ಮರಿದೇವಯ್ಯ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನವ ಬಂಧುತ್ವ ವೇದಿಕೆಯ ಮೈಸೂರು ಜಿಲ್ಲಾ ಸಂಚಾಲಕ ದ್ಯಾವಪ್ಪ ನಾಯಕ ವಹಿಸಿದ್ದರು.