ಕೋವಿಡ್ ವೈರಸ್ ಹರಡುವಿಕೆಯಿಂದಾಗಿ ದೇಶದ ಜನತೆ ಸಂಕಷ್ಟ ಪಡುತ್ತಿದ್ದಾರೆ. ಈ ವೈರಸ್ ಕುರಿತು ಜಾಗೃತಿಯ ಕೊರತೆ ಸೇರಿದಂತೆ ಅನೇಕ ಸಮಸ್ಯೆಗಳು ಮುನ್ನಲೆಗೆ ಬರುತ್ತಿವೆ. ಇವುಗಳನ್ನು ನಿಭಾಯಿಸುವಲ್ಲಿ ಸೋಲುತ್ತಿದ್ದೇವೆ.
ಕೋವಿಡ್ ಬಗ್ಗೆ ಜಾಗೃತಿ ಮತ್ತು ಜನತೆಯನ್ನು ಬಾಧಿಸುತ್ತಿರುವ ಪ್ರಶ್ನೆಗಳ ಅರಿಯಲು ಮಾನವ ಬಂಧುತ್ವ ವೇದಿಕೆ-ಕರ್ನಾಟಕ ನೇತೃತ್ವದಲ್ಲಿ ಈ ತಿಂಗಳ 10ನೇ ತಾರೀಖಿನಿಂದ 20ನೇ ತಾರೀಖಿನವರೆಗೆ ಆರೋಗ್ಯ ಬಂಧುತ್ವ ಸರಣಿ ಉಪನ್ಯಾಸಗಳನ್ನು ಆಯೋಜಿಸುತ್ತಿದ್ದೇವೆ.
ಈ ವೆಬಿನಾರ್ ನಲ್ಲಿ ಖ್ಯಾತ ವೈದ್ಯರು, ತಜ್ಞರು, ಅನುಭವಿಗಳು ಉಪನ್ಯಾಸ ನೀಡಲಿದ್ದಾರೆ. ಈ ಆರೋಗ್ಯ ಜಾಗೃತಿ ವೆಬಿನಾರ್ ನಲ್ಲಿ ZOOM ಲಿಂಕ್ ಮೂಲಕ ನಾಡಿನ ಆಸಕ್ತರು ಪಾಲ್ಗೊಂಡು ಸದುಪಯೋಗ ಪಡೆದುಕೊಳ್ಳಲು ವಿನಂತಿ.
ತಮ್ಮ ಪಾಲ್ಗೊಳ್ಳುವಿಕೆಯ ನಿರೀಕ್ಷೆಯಲ್ಲಿ,
– ರವೀಂದ್ರ ನಾಯ್ಕರ್, ರಾಜ್ಯ ಸಂಚಾಲಕರು, ಮಾನವ ಬಂಧುತ್ವ ವೇದಿಕೆ- ಕರ್ನಾಟಕ